Saturday, November 23, 2024
Saturday, November 23, 2024

Kateel Ashok Pai College ಕಟೀಲ್ ಅಶೋಕ್ ಪೈ ಕಾಲೇಜಿಗೆ ಮೂರು ರ್ಯಾಂಕ್

Date:

Kateel Ashok Pai College ಕುವೆಂಪು ವಿಶ್ವವಿದ್ಯಾಲಯವು ಇದೀಗ ಪ್ರಕಟಿಸಿದ 2022-23ನೇ ಸಾಲಿನ ರ‍್ಯಾಂಕ್ ಪಟ್ಟಿಯಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಮೂವರು ವಿಧ್ಯಾರ್ಥಿಗಳು ಬಿ.ಎ. ಪದವಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ಬಿ.ಎಸ್.ಡಬ್ಲ್ಯು ನಲ್ಲಿ ತೃತೀಯ ರ‍್ಯಾಂಕ್ ಪಡೆದು ಕಾಲೇಜಿಗೆ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿರುತ್ತಾರೆ.
ಕು. ಆಲಿಯಾ ಸಾಜಿದ್ ಖಾತಿಬ್ ಇವರು ಬಿ.ಎ. ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದು, ಶಿವಮೊಗ್ಗದ ಸಾಜಿದ್ ಅಹಮ್ಮದ್ ಖಾತಿಬ್ ಹಾಗೂ ಸಮೀನಾ ಸಾಜಿದ್ ಖಾತಿಬ್ ಇವರ ಪುತ್ರಿ. ಪ್ರಸ್ತುತ ಇವರು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಮನಃಶಾಸ್ತ್ರ ವಿಭಾಗದಲ್ಲಿ ಎಂ.ಎಸ್ಸಿ ಓದುತ್ತಿದ್ದಾರೆ. ಕ್ಲಿನಿಕಲ್ ಸೈಕಾಲಜಿಸ್ಟ್ ಆಗುವ ಕನಸನ್ನು ಹೊಂದಿದ್ದಾರೆ.

ಕು. ಕಾವ್ಯ ಆರ್ ಇವರು ಬಿ.ಎ. ಪದವಿಯಲ್ಲಿ ದ್ವಿತೀಯ ರ‍್ಯಾಂಕ್ ಗಳಿಸಿದ್ದು , ರಾಜು ಎನ್. ಹಾಗೂ ವಿಮಲಾ ಬಿ.ಎಸ್. ಇವರ ಪುತ್ರಿ. ಪ್ರಸ್ತುತ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಮುಂದೆ ಅಧಿಕಾರಿಯಾಗುವ ಆಸೆಯನ್ನು ಹೊಂದಿರುವ ಕಾವ್ಯ ಪರೀಕ್ಷೆಯ ಪೂರ್ವ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬಿ ಎಸ್ ಡಬ್ಲ್ಯೂ ಪದವಿಯಲ್ಲಿ ಕು. ಮಂಜುಶ್ರೀ.ವಿ.ಎಸ್ ಇವರು ಮೂರನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ಚಿತ್ರದುರ್ಗ ಜಿಲ್ಲೆ ಕೊಂಡ್ಲಹಳ್ಳಿಯ ಶಾಂತರಾಮ್.ವಿ.ಟಿ ಮತ್ತು ಅಂಬಿಕಾ.ಆರ್ ದಂಪತಿಯ ಪುತ್ರಿ .ಪ್ರಸ್ತುತ ಮಂಗಳೂರಿನ ರೋಷನಿ ನಿಲಯದಲ್ಲಿ ಎಂ ಎಸ್ ಡಬ್ಲ್ಯೂ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ.

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು 2017 ರಲ್ಲಿ ಆರಂಭಗೊಂಡು ತನ್ನ ಮೊದಲ ಬ್ಯಾಚ್‌ನಿಂದಲೂ ರ‍್ಯಾಂಕ್ ಗಳಿಸಿಕೊಂಡು ಬರುತ್ತಿದೆ.
ಇದೀಗ ಕಾಲೇಜಿನ ಸಂಭ್ರಮ ದುಪ್ಪಟ್ಟಾಗಲು ಕಾರಣ ಕು. ಆಲಿಯಾಗೆ ಬಿ.ಎ. ಯಲ್ಲಿ ಪ್ರಥಮ ರ‍್ಯಾಂಕ್ ಬಂದಿರುವುದು ಹಾಗೂ ಒಟ್ಟು ಮೂರು ರ‍್ಯಾಂಕ್‌ಗಳನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಪಡೆದಿರುವುದಾಗಿದೆ.

Kateel Ashok Pai College ಪ್ರಥಮ ರ‍್ಯಾಂಕ್ ಪಡೆದ ಆಲಿಯಾ ರವರು, ಪ್ರಥಮ ರ‍್ಯಾಂಕ್ ಬಂದಿರುವುದರಿಂದ ಸಂತೋಷವೆನಿಸುತ್ತಿದೆ. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಅಪರೂಪದ ವೈಶಿಷ್ಟ್ಯಪೂರ್ಣ ಕಲಿಕಾ ವಾತಾವರಣ ಹೊಂದಿದೆ. ತನಗೆ ಬಂದ ರ‍್ಯಾಂಕ್ ಇಲ್ಲಿಯ ಪ್ರತಿಯೊಬ್ಬರೂ ನನಗೆ ನೀಡಿದ ಭರವಸೆ, ಪ್ರೊತ್ಸಾಹ ಹಾಗೂ ಮಾರ್ಗದರ್ಶನದಿಂದ ಸಾಧ್ಯವಾಯಿತು. ನನ್ನ ಉನ್ನತ ವ್ಯಾಸಂಗಕ್ಕೆ ಅನುಮತಿಯನ್ನು ನೀಡಿದ ನನ್ನ ಪೋಷಕರಿಗೆ, ಸಹೋದರರಿಗೆ ಕಾಲೇಜಿನ ನನ್ನ ಶಿಕ್ಷಕರಿಗೆ ಹಾಗೂ ನನ್ನ ಸ್ನೇಹಿತರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ದ್ವಿತೀಯ ರ‍್ಯಾಂಕ್ ಬಂದ ಕು.ಕಾವ್ಯ ಕಾಲೇಜಿನಲ್ಲಿ ಪಾಠದೊಂದಿಗೆ ದೊರೆತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವತಯಾರಿಯ ತರಬೇತಿ ನನಗೆ ಪ್ರೇರಣೆಯನ್ನು ನೀಡಿತು. ನನ್ನನ್ನು ಇಂತಹ ಉತ್ತಮ ಕಾಲೇಜಿಗೆ ಸೇರಿಸಿದ್ದಕ್ಕೆ ನನ್ನ ಪೋಷಕರಿಗೆ ನಾನು ಋಣ ಎಂದು ಹೇಳಿದರು.

ಬಿ.ಎಸ್.ಡಬ್ಲ್ಯುನಲ್ಲಿ ತೃತೀಯ ರ‍್ಯಾಂಕ್ ಪಡೆದ ಮಂಜುಶ್ರೀ, ತಾನು ಪ್ರಥಮ ವರ್ಷದಿಂದಲೇ ಒಳ್ಳೆಯ ಓದಿನ ಹವ್ಯಾಸವನ್ನು ಬೆಳೆಸಿಕೊಂಡೆ, ಇಂತಹ ನಿಯಮಿತ ಓದು ಹಾಗೂ ಪರಿಶ್ರಮವನ್ನು ರೂಢಿಸಿಕೊಳ್ಳಲು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎಲ್ಲರೂ ತನಗೆ ಸೂಕ್ತ ಮಾರ್ಗದರ್ಶನ ನೀಡಿದರು ಎಂದರು.

ಗ್ರಾಮೀಣ ಪ್ರದೇಶದಿಂದ ಬಂದರೂ ಒಂದು ಉತ್ತಮ ಕಾಲೇಜು ದೊರೆತಲ್ಲಿ ನಾವು ಸಾಧಿಸಬಹುದು ಎಂಬ ಧೈರ್ಯ ನನಗೆ ಇಲ್ಲಿ ದೊರಕಿತು ಎಂದು ಹೇಳಿದರು.
ಮಾನಸ ಟ್ರಸ್ಟ್ನ ನಿರ್ದೇಶಕಿ ಡಾ. ರಜನಿ ಪೈ ರವರು ವಿಜೇತರನ್ನು ಅಭಿನಂದಿಸುತ್ತಾ ಕಾಲೇಜಿನ ಈ ಯಶಸ್ಸಿಗೆ ಕಾರಣರಾದವರನ್ನೆಲ್ಲರನ್ನು ಸ್ಮರಿಸಿರುತ್ತಾರೆ. ಮನೋವಿಜ್ಞಾನದ ಪದವಿ ಹಾಗೂ ಸ್ನಾತಕೋತ್ತರ ಪದವಿಗಾಗಿ ಪ್ರಾರಂಭಿಸಿದ ಈ ಕಾಲೇಜು ಇಂದು ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆಯೊಂದಿಗೆ ಬಿ.ಎ., ಎ.ಸ್.ಡಬ್ಲ್ಯು., ಬಿ.ಎಸ್ಸಿ., ಬಿ.ಕಾಂ., ಬಿ.ಸಿ.ಎ., ಪದವಿ ಹಾಗೂ ಎಂ.ಎಸ್ಸಿ., ಸೈಕಾಲಜಿ ಶಿಕ್ಷಣವನ್ನು ನೀಡುತ್ತಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೆರಡರಲ್ಲೂ ಪ್ರಸಿದ್ಧಿಯನ್ನೂ, ಪ್ರಶಸ್ತಿಗಳನ್ನೂ ಗಳಿಸುವ ಕಾಲೇಜಿನ ವಿದ್ಯಾರ್ಥಿಗಳು ಸಮರ್ಥವಾಗಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂದು ‘ಮಾನಸ’ ದ ಡಾ. ಪ್ರೀತಿ ವಿ ಶಾನ್‌ಭಾಗ್ ರವರು ತಮ್ಮ ಸಂತೋಷವನ್ನು ಹಂಚಿಕೊಂಡರು.

ಡಾ. ವಾಮನ್ ಶಾನ್‌ಭಾಗರ್‌ರವರು, ಕಾಲೇಜಿನ ನೂತನ ಕಟ್ಟಡ ಮಲ್ಲಿಗೇನಹಳ್ಳಿಯಲ್ಲಿ ಸುಸಜ್ಜಿತವಾಗಿ ರೂಪುಗೊಂಡಿದೆ, ಎಲ್ಲ ರೀತಿಯ ಕಲಿಕೆಯ ಸೌಕರ್ಯಗಳೂ ಇಲ್ಲಿವೆ. ನಮ್ಮ ಸಂಸ್ಥೆಯಲ್ಲಿ ನಂಬಿಕೆಯಿಟ್ಟು ವಿದ್ಯಾರ್ಥಿಗಳನ್ನು ಕಳುಹಿಸುತ್ತಿರುವ ಪೋಷಕರಿಗೆ ನಮ್ಮ ಅಭಿನಂದನೆಗಳು ಎಂದು ಹೇಳಿ ರ‍್ಯಾಂಕ್ ವಿಜೇತರರನ್ನು ಅಭಿನಂದಿಸಿದರು.

ಪ್ರತಿ ವರ್ಷ ರ‍್ಯಾಂಕ್ ಬಂದಾಗಲೂ ಕಾಲೇಜು ಸಂಭ್ರಮಿಸುತ್ತಿದೆ. ಈ ವರ್ಷ ಪ್ರಥಮ ರ‍್ಯಾಂಕ್ ಪಡೆದಿರುವುದು ಹೆಮ್ಮೆ ಎನಿಸುತ್ತಿದೆ ಎಂದು ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಕೆ ಸಂತಸ ವ್ಯಕ್ತಪಡಿಸಿದರು.
ಮುಖ್ಯ ಶೈಕ್ಷಣಿಕ ಸಲಹೆಗಾರರಾದ ಡಾ.ರಾಜೇಂದ್ರ ಚೆನ್ನಿಯವರು ರ‍್ಯಾಂಕ್ ವಿಜೇತರನ್ನು ಅವರ ಪೋಷಕರನ್ನೂ ಅಭಿನಂದಿಸುತ್ತಾ, ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕಾಯ್ದುಕೊಳ್ಳುತ್ತಿರಲು ಇಲ್ಲಿಯ ಉಪನ್ಯಾಸಕರ ಕಾಳಜಿಯೇ ಕಾರಣ ಎಂದು ತಿಳಿಸಿದರು.

ರ‍್ಯಾಂಕ್ ವಿಜೇತರನ್ನು, ಮಾನಸ ಟ್ರಸ್ಟ್, ಹಾಗೂ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿಗಳೂ, ವಿದ್ಯಾರ್ಥಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...