Saturday, November 23, 2024
Saturday, November 23, 2024

Bharath Scouts and Guides ರಸ್ತೆ ನಿಯಮ ಅಲಕ್ಷ್ಯಮಾಡಿದರೆ ಅನಾಹುತ ಗ್ಯಾರಂಟಿ- ಸಂತೋಷ ಕುಮಾರ್

Date:

Bharath Scouts and Guides ಪೂರ್ವ ಸಂಚಾರ ಪೋಲಿಸ್ ಠಾಣೆ, ಶಿವಮೊಗ್ಗ, ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಯ ಸಯುಂಕ್ತಾಶ್ರಯದಲ್ಲಿ ರಾಷ್ಟಿಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಜಿಲ್ಲಾ ಸ್ಕೌಟ್ ಭವನದಲ್ಲಿ ರಾಷ್ಟ್ರೀಯ ಸಪ್ತಾಹದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪ್ರದರ್ಶನ ಮತ್ತುಜಾಗೃತಿ ಕಾರ್ಯಕ್ರಮವನ್ನು ಹಮ್ಮೀಕೊಳ್ಳಲಾಗಿತ್ತು.

ಜೀವನದಲ್ಲಿ ಶಿಸ್ತು ಅತಿ ಮುಖ್ಯ ಆ ಶಿಸ್ತನ್ನೆ ಬಂಡವಾಳ ಮಾಡಿಕೊಂಡು ನಮ್ಮ ಜೀವನವನ್ನು ನಾವು ಸಾಗಿಸಬೇಕು ರಸ್ತೆಯಲ್ಲಿ ಓಡಾಡುವಾಗ ಸಂಚಾರ ನಿಯಮವನ್ನು ಪಾಲಿಸಿಕೊಂಡು ಅದಕ್ಕೆ ತಕ್ಕಂತೆ ನಾವು ಸ್ಪಂದಿಸಿದರೆ ದೆವರು ನೀಡಿದಂತಹ ಈ ಜೀವವು ಉಳಿಸಿಕೊಳ್ಳುವುದು ನಮ್ಮ ಕೈಯಲಿದೆ ಅದನ್ನು ಕಾಪಾಡಿಕೊಂಡು ಹೋಗಬೇಕಾದರೆ ನಿಯಮವನ್ನು ಪಾಲಿಸಲೆಬೇಕು, ನಿಯಮ ಪಾಲನೆಯಲ್ಲಿ ಅಲಕ್ಷ ತೋರಿದಲ್ಲಿ ಅನಾಹುತಗಳು ಗ್ಯಾರಂಟಿ ಈ ಅನಾಹುತಗಳನ್ನು ತಪ್ಪಿಸಬೇಕಾದರೆ ಸಂಚಾರ ನಿಯಮ ಪಾಲನೆ ಅತ್ಯಗತ್ಯ ಎಂದು ಶಿವಮೊಗ್ಗ ಸಂಚಾರ ವೃತ್ತದ ಸರ್ಕಲ್ ಪೋಲಿಸ್ ಇನ್ಸಪೆಕ್ಟರ್ ಆದ ಶ್ರೀ ಸಂತೋಷ ಕುಮಾರ ರವರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಂಚಾರ ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ಶ್ರೀ ಮೌನೆಶ ರವರು ಕೈ ಮುಖಾಂತರ ಪ್ರದರ್ಶನ ಮಾಡಿ ವಿವರಣೆ ಮಾಡುತ್ತಾ ತೋರಿಸಿದರು. ಶ್ರೀ ಶ್ರೀನಿವಾಸ ರವರು ಪಿ.ಪಿ.ಟಿ ಮೂಲಕ ನಾವು ನಿಯಮವನ್ನು ಹೇಗೆ ಪಾಲಿಸಬೇಕೆಂದು, ಪಾಲಿಸದೆ ಇದ್ದಲಿ ಆಗುವ ಅಪಘಾತದ ಬಗ್ಗೆ ಭಾವಚಿತ್ರಗಳ ತುಣುಕುಗಳನ್ನು ತೋರಿಸಿ ವಿವರಿಸಿ ನಾವು ಮಾಡಬೇಕಾಗುವ ಪಾಲನೆ ಬಗ್ಗೆ ಹಾಗೂ ವರ್ಷದಲ್ಲಿ ಆಗುವ ಅನಾಹುತಗಳ ಬಗ್ಗೆ ತಿಳಿಸಿಕೊಟ್ಟರು.

Bharath Scouts and Guides ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ ರವರು ಎಲ್ಲರನ್ನು ಸ್ವಾಗತಿಸಿದರು. ವಂದನೆಯನ್ನು ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭಾರತಿ ಡಾಯಸ ರವರು ನಿರ್ವಹಿಸಿದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ರಾಜೇಶ ರವರು ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮಕ್ಕೆ ಪೂರ್ವ ಸಂಚಾರಿ ಠಾಣೆಯ ಪೋಲಿಸ್ ಸಬ್ ಇನ್ಸಪೆಕ್ಟರ್ ಗಳಾದ, ಶ್ರೀ ನವೀನಕುಮಾರ, ಶ್ರೀ ಶಿವಣ್ಣನವರ, ಪಶ್ಚಿಮ ಸಂಚಾರಿ ಠಾಣೆಯ ಪೋಲಿಸ್ ಸಬ್ ಇನ್ಸಪೆಕ್ಟರ್ ಗಳಾದ, ಶ್ರೀ ತಿರುಮಲೇಶ, ಶ್ರೀಮತಿ ಭಾರತಿ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು, ಹಿರಿಯ ಸ್ಕೌಟರ್ ಕೃಷ್ಣಸ್ವಾಮಿ, ದಾಕ್ಷಾಯಿನಿ, ಅಣ್ಣಪ್ಪ ಒಂಟಿಮಾಳಗಿ, ಚಂದ್ರಶೇಖರಯ್ಯ, ಉಪನ್ಯಾಸಕಿಯರಾದ ಭಾರತಿ, ಅನ್ನಪೂರ್ಣ ನಗರ ಶಾಲೆಯ 200ಕ್ಕೂ ಹೆಚ್ಚು ಸ್ಕೌಟ್ಸ್, ಗೈಡ್ಸ್, ರೋವರ‍್ಸ್, ರೇಂಜರ‍್ಸ್ ಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...