Makar Sankranti 2024 ಶಿವಮೊಗ್ಗ, ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ” ಬಿಜಿಎಸ್ ಕಿಡ್ಸ್” ಚಿನ್ನರ ಮಕ್ಕಳಿಂದ ಸುಗ್ಗಿಯ ಹಬ್ಬ ಸಂಕ್ರಾಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಅತ್ಯಂತ ಪ್ರಾಚೀನವಾದ ಜಾನಪದ ಪರಿಕಲ್ಪನೆಯ ಜೊತೆಗೆ ಹಳ್ಳಿಯ ಸೊಗಡನ್ನು ನೆನಪಿಸುವ ಎತ್ತಿನಗಾಡಿ, ಬಾವಿ, ಭತ್ತದ ರಾಶಿ, ಹಳೆಕಾಲದ ಮನೆ, ಬೋರ್ವೆಲ್, ಸಂತೆ ಮಾರ್ಕೆಟ್, ತೊಟ್ಟಿಲು, ಮಣ್ಣಿನ ಒಲೆ, ಜೋಕಾಲಿ, ತುಳಸಿ ಕಟ್ಟೆ, ಇನ್ನೂ ಇಂತಾದವುಗಳನ್ನು ಸಾಂಪ್ರದಾಯಕ ಉಡುಗೆ ತೊಡೆಗೆ ತೊಟ್ಟು ಮಕ್ಕಳು ಸಂಭ್ರಮದಿಂದ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಮಕ್ಕಳು ಹೊಸ ವಸ್ತ್ರ ಧರಿಸಿ ಎಳ್ಳು ಬೆಲ್ಲ, ಬಣ್ಣ ಬಣ್ಣದ ಅಚ್ಚುಗಳನ್ನು ಶಿಕ್ಷಕರ ಜೊತೆಗೂಡಿ ಹಂಚುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದರು.
Makar Sankranti 2024 ಸಂಸ್ಥೆಯ ನಿರ್ದೇಶಕರಾದ ಸತೀಶ್ ಡಿ.ವಿ., ಪ್ರಾಂಶುಪಾಲರಾದ ಹೇಮಾ ಎಸ್.ಆರ್.ಹಾಗೂ ಅಧ್ಯಾಪಕರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.