Indian Medical Association ರಾಜ್ಯ ಮಟ್ಟದ ಪ್ರಶಸ್ತಿ ಬೆನ್ನಲ್ಲೇ , ರಾಷ್ಟ್ರಮಟ್ಟದ ಅತ್ಯುತ್ತಮ ಶಾಖೆ ಪ್ರಶಸ್ತಿಯ ಗೌರವಕ್ಕೆ ಪಾತ್ರವಾದ ಶಿವಮೊಗ್ಗ ಐಎಂಎ ಶಾಖೆ
ಕೇರಳದ ತಿರುವನಂತಪುರಂ ನ ಕೋವಲಂನಲ್ಲಿ ಡಿಸೆಂಬರ್ 27,28 ರಂದು ನಡೆದ ರಾಷ್ಟ್ರಮಟ್ಟದ ಭಾರತೀಯ ವೈದ್ಯಕೀಯ ಮಹಾಸಮ್ಮೇಳನದಲ್ಲಿ ಐಎಂಎ ಶಿವಮೊಗ್ಗ ಶಾಖೆಗೆ ಅತ್ಯುತ್ತಮ ದೊಡ್ಡ ಶಾಖೆಯ ಪ್ರಶಸ್ತಿ ದೊರೆತಿದೆ . ಕಳೆದ ಸೆಪ್ಟೆಂಬರ್ 2022 ರಿಂದ ಅಧ್ಯಕ್ಷರಾಗಿ ಡಾ . ಅರುಣ್ ಎಂ ಎಸ್ ಹಾಗು ಕಾರ್ಯದರ್ಶಿ ಡಾ . ರಕ್ಷಾ ರಾವ್ ಅವರ ನೇತೃತ್ವದಲ್ಲಿ ಅಕ್ಟೋಬರ್ 1 , 2023 ವರೆಗೂ ಒಂದು ವರ್ಷ ಕಾಲಾವಧಿಯಲ್ಲಿ ವೈದ್ಯರಿಗೆ ವೈಜ್ಞಾನಿಕ ಕಲಿಕಾ ಕಾರ್ಯಾಗಾರಗಳು , ವಿಶ್ವ ಅರೋಗ್ಯ ದಿವಸಗಳ ಆಚರಣೆ , ಶಾಲಾ ಕಾಲೇಜುಗಳಲ್ಲಿ ಆರೋಗ್ಯ ಜಾಗೃತಿ , ಮಹಿಳಾ ಆರೋಗ್ಯ , ಸಾರ್ವಜನಿಕರಿಗೆ ಹಾಗು ನರ್ಸಿಂಗ್ ವಿದ್ಯಾರ್ಥಿಗಳಿಗೆ ಜೀವರಕ್ಷಕ ಸಿ ಪಿ ಆರ್ ಕಾರ್ಯಾಗಾರ , ಅಧಿಕಸ್ಯ ಅಧಿಕಫಲಂ ಒಂದು ತಿಂಗಳ ಉಚಿತ ಆರೋಗ್ಯ ಮಾಹಿತಿ ಶಿಭಿರ , ಕೆ – ಲೈವ್ ಜೊತೆಗೆ ನಮಸ್ತೆ ಐಎಂಎ ಯೌಟ್ಯೂಬ್ ಆರೋಗ್ಯ ಮಾಲಿಕೆ ಸರಣಿಗಳು , ವೈದ್ಯರುಗಳಿಗೆ ಹಾಗು ಕುಟುಂಬದವರಿಗೆ ಸಾಂಸ್ಕೃತಿಕ ಸಂಜೆ ಹಾಗು ಚಾರಣ , ಹಿರಿಯ ವೈದ್ಯ ಸದಸ್ಯರಿಗೆ ಮನೆಯಲ್ಲಿ ಭೇಟಿ ಹಾಗು ಕುಶಲೋಪಚಾರ ವಿನಿಮಯ – ಹೀಗೆ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಾರ್ವಜನಿಕ ವಲಯದಲ್ಲಿ ಮನೆಮಾತಾಗಿದ್ದ ಐಎಂಎ ಶಿವಮೊಗ್ಗ, ರಾಷ್ಟ್ರಮಟ್ಟದಲ್ಲೂ ಹೆಗ್ಗಳಿಕೆಗೆ ಪಾತ್ರವಾಗಿ ಅತ್ಯುತ್ತಮ ಶಾಖೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ .
ಐಎಂಎ ರಾಷ್ಟ್ರಾಧ್ಯಕ್ಷರಾದ ಡಾ .ಅಶೋಕನ್ ಅವರಿಂದ , ರಾಜ್ಯಾಧ್ಯಕ್ಷರಾದ ಡಾ . ಶಿವಕುಮಾರ್ ಲಕ್ಕೋಲ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಸಮಾರಂಭದಲ್ಲಿ ಅಧ್ಯಕ್ಷರಾದ ಡಾ . ಅರುಣ್ ಎಂ ಎಸ್ ಹಾಗು ಕಾರ್ಯದರ್ಶಿ ಡಾ . ರಕ್ಷಾ ರಾವ್ ಸ್ವೀಕರಿಸಿದರು .
Indian Medical Association ಯಶಸ್ವಿಯಾದ ಅಧಿಕಾರಾವಧಿಗೆ ಕಾರಣೀಭೂತರಾದ ಎಲ್ಲಾ ಆಡಳಿತ ವರ್ಗ , ಕಾರ್ಯಕಾರಿ ಸಮಿತಿ ಸದಸ್ಯರಿಗೆ ಹಾಗು ಸದಸ್ಯರಿಗೆ , ಅಂತೆಯೇ ಎಲ್ಲಾ ಚಟುವಟಿಕೆಗಳನ್ನು ಜನರಿಗೆ ತಲುಪುವಲ್ಲಿ ಸಹಕರಿಸಿದ ಮಾಧ್ಯಮ ಮಿತ್ರರಿಗುಗೂ ಡಾ . ಅರುಣ್ ಹಾಗು ಡಾ . ರಕ್ಷಾ ರಾವ್ ಧನ್ಯವಾಧ ತಿಳಿಸಿರುತ್ತಾರೆ .
ಪ್ರಸ್ತುತ ಅಧ್ಯಕ್ಷರಾದ ಡಾ . ರಮೇಶ್ ಹಾಗು ಕಾರ್ಯದರ್ಶಿಗಳಾದ ಡಾ. ಅರವಿಂದನ್ ಅವರಿಗೆ ಶುಭಹಾರೈಸಿದ್ದಾರೆ .