International Mountain Day ಪರ್ವತಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 11 ರಂದು ಅಂತಾರಾಷ್ಟ್ರೀಯ ಪರ್ವತ ದಿನವನ್ನಾಗಿ ಆಚರಿಸಲಾಗುತ್ತದೆ. ಇಂಟರ್ನ್ಯಾಷನಲ್ ಮೌಂಟೇನ್ ಡೇ ಅಂತಲೇ ಇದು ಖ್ಯಾತಿಯಾಗಿದೆ.
ಹಿಮಪಾತವನ್ನು ರಕ್ಷಿಸುವ ಮತ್ತು ಅದರ ಅಗತ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಹವಾಮಾನ ಬದಲಾವಣೆ ಮತ್ತು ಅತಿಯಾದ ಶೋಷಣೆಯಿಂದಾಗಿ, ಪರ್ವತಗಳು ಅಪಾಯದಲ್ಲಿವೆ.
ಯು ಎನ್ ಜನರಲ್ ಅಸೆಂಬ್ಲಿಯು 2002 ಅನ್ನು ಯು ಎನ್ ಅಂತರಾಷ್ಟ್ರೀಯ ಪರ್ವತಗಳ ವರ್ಷವೆಂದು ಘೋಷಿಸಿತು.
ಅಂತರರಾಷ್ಟ್ರೀಯ ಪರ್ವತ ದಿನದ 2023 ರ ಥೇಮ್ “ಪರ್ವತ ಪರಿಸರ ವ್ಯವಸ್ಥೆಗಳನ್ನು ಮರುಸ್ಥಾಪಿಸುವುದು ಆಗಿದೆ.
ಮನುಷ್ಯರು ದೈನಂದಿನ ಜೀವನದಲ್ಲಿ ಅರ್ಧಕ್ಕಿಂತ ಹೆಚ್ಚು ಪರ್ವತ ಸಿಹಿನೀರಿನ ಮೇಲೆ ಅವಲಂಬಿತವಾಗಿದ್ದೇವೆ. ಪ್ರಪಂಚದ 80% ಆಹಾರವು 20 ಸಸ್ಯ ಪ್ರಭೇದಗಳಿಂದ ಸರಬರಾಜು ಮಾಡಲ್ಪಟ್ಟಿವೆ.
ಮೆಕ್ಕೆಜೋಳ, ಆಲೂಗಡ್ಡೆ, ಬಾರ್ಲಿ, ಸೋರ್ಗಮ್, ಟೊಮೆಟೊಗಳು ಮತ್ತು ಸೇಬುಗಳು ಪರ್ವತಗಳಲ್ಲಿ ಸಿಗುವ ಆಹಾರ ವೈವಿಧ್ಯಮಗಳಾಗಿವೆ.
ಪರ್ವತಗಳು ನಿವಾಸಿಗಳಿಗೆ ಮಾತ್ರವಲ್ಲ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ ಸಹ ಮುಖ್ಯವಾಗಿದೆ. ಅವು ಪ್ರಪಂಚದ ಪ್ರಮುಖ ನದಿಗಳ ಮೂಲಗಳಾಗಿದ್ದು, ಜಲಚಕ್ರದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.
ಈ ದಿನದಂದು ಪರಿಸರದಲ್ಲಿ ಪರ್ವತಗಳ ಪಾತ್ರ ಮತ್ತು ಜೀವನದ ಮೇಲೆ ಅವುಗಳ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಜನರಿಗೆ ಶಿಕ್ಷಣ ನೀಡುತ್ತದೆ. ಇದನ್ನು ಪ್ರತಿ ವರ್ಷ ನಿರ್ದಿಷ್ಟ ಥೀಮ್ನೊಂದಿಗೆ ಆಚರಿಸಲಾಗುತ್ತದೆ.
International Mountain Day ಇದನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ವಿವಿಧ ವೇದಿಕೆಗಳು, ಹ್ಯಾಂಡ್-ಆನ್-ಚಟುವಟಿಕೆಗಳು, ಪ್ರಸ್ತುತಿಗಳು, ವಿದ್ಯಾರ್ಥಿ ಚರ್ಚೆಗಳು, ಫೋಟೋಗಳು, ಕಲಾ ಸ್ಪರ್ಧೆಗಳು, ಪಾದಯಾತ್ರೆಗಳು ಮತ್ತು ನಿರ್ದಿಷ್ಟ ಗುಂಪುಗಳನ್ನು ಗುರಿಯಾಗಿಟ್ಟುಕೊಂಡು ಈವೆಂಟ್ಗಳನ್ನು ಆಯೋಜಿಸಲಾಗಿದೆ.