Klive Special Article ಶ್ರೀಪದ್ಮನಾಭತೀರ್ಥರು ಶ್ರೀಮಧ್ವಾಚಾರ್ಯರಿಂದ
ನೇರವಾಗಿ ಸನ್ಯಾಸದೀಕ್ಷೆಪಡೆದ ಮೊದಲ ಯತಿಗಳು.
ಇನ್ನು ಕ್ರಮವಾಗಿ ಶ್ರೀನರಹರಿತೀರ್ಥರು,ಶ್ರೀಮಾಧವ
ತೀರ್ಥರು ಹಾಗೂ ಶ್ರೀಅಕ್ಷೋಭ್ಯ ತೀರ್ಥರು,ಶ್ರೀಮಧ್ವಾಚಾರ್ಯರಿಂದ ಪದ್ಮನಾಭತೀರ್ಥರ ನಂತರ ನೇರವಾಗಿ ಸನ್ಯಾಸ ದೀಕ್ಷೆ ಪಡೆದ ಎರಡು, ಮೂರು ಮತ್ತು ನಾಲ್ಕನೆಯ ಯತಿಗಳು
ಪದ್ಮನಾಭತೀರ್ಥರ ಜನ್ಮನಾಮ ಶೋಭನ ಭಟ್ಟರು ಎಂದು.
ಇವರು ವಾರಂಗಲ್ನ ಕಾಕತೀಯ ಸಂಸ್ಥಾನದ ಗಜಪತಿಯ ಆಸ್ಥಾನದಲ್ಲಿ ಆಸ್ಥಾನ ಪಂಡಿತರಾಗಿದ್ದರು.
ಇವರು ದೊಡ್ಡ ವಿದ್ವಾಂಸರು ಮತ್ತು ಅದ್ಯೈತ
ಸಿದ್ಧಾಂತದಲ್ಲಿ ಪ್ರಕಾಂಡ ಪಂಡಿತರೂ ಆಗಿದ್ದರು.
ಒಮ್ಮೆ ಶ್ರೀಮದಾಚಾರ್ಯರು ಬದರಿಯಲ್ಲಿ ಶ್ರೀವೇದವ್ಯಾಸರ ದರ್ಶನ ಮಾಡಿಕೊಂಡು ವಾಪಸ್
ಉಡುಪಿಗೆ ಹಿಂದಿರುಗುವಾಗ ಶೋಭನ ಭಟ್ಟರ ಊರಿಗೆ ಬರುತ್ತಾರೆ.
ಅಲ್ಲಿನ ಪಂಡಿತರುಗಳು ಆಚಾರ್ಯರನ್ನು ಬಹಳ ಗೌರವಾದರಗಳಿಂದ ಬರ ಮಾಡಿಕೊಳ್ಳುತ್ತಾರೆ. ಅಲ್ಲಿ ಪಂಡಿತರುಗಳಿಂದ
ಆಚಾರ್ಯರ ಜೊತೆಯಲ್ಲಿ ವೇದಾಂತಶಾಸ್ತ್ರದ
ವಾದ ಗೋಷ್ಠಿಗಳಾಗುತ್ತವೆ.
ಎಲ್ಲಾ ಪಂಡಿತರುಗಳು
ಶ್ರೀಮಧ್ವಾಚಾರ್ಯರಿಗೆ ಶರಣಾಗುತ್ತಾರೆ ಕಡೆಯ
ದಾಗಿಶೋಭನ ಭಟ್ಟರು ಶ್ರೀಮದಾಚಾರ್ಯರ ಸಂಗಡ ವಾದಕ್ಕಿಳಿದು ತಮ್ಮ ಸೋಲನ್ನು ಒಪ್ಪಿಕೊಂಡು
ಆಚಾರ್ಯರ ಶಿಷ್ಯತ್ವವನ್ನು ಬಯಸುತ್ತಾರೆ.
ಆಚಾರ್ಯರಲ್ಲಿ ತಮ್ಮ ಮುಂದಿನ ಸ್ವರೂಪೋದ್ಧಾರಕ
ಗುರುಗಳನ್ನು ಕಂಡುಕೊಳ್ಳುತ್ತಾರೆ.ಅವರಿಂದ
ಬೇಡಿ ಸನ್ಯಾಸ ದೀಕ್ಷೆಯನ್ನು ಪಡೆದು”ಶ್ರೀಪದ್ಮನಾಭತೀರ್ಥ”ರೆಂದು ನಾಮಕರಣಗೊಳ್ಳುತ್ತಾರೆ
.ಆಚಾರ್ಯರಿಗೆ ಮುಂದೆ ಮಧ್ವಸಿದ್ಧಾಂತವನ್ನು ಪಸರಿಸುವುದಕ್ಕೆ ಪದ್ಮನಾಭತೀರ್ಥರು ಸೂಕ್ತವ್ಯಕ್ತಿ ಎಂದು ತಮ್ಮ ಮನದಲ್ಲಿ ಬರುತ್ತದೆ.
ಗುರುಗಳ ಮನದಾಸೆಯ ಪ್ರಕಾರ ದೇಶದ ಉದ್ದಗಲಕ್ಕೂ ಸಂಚರಿಸಿ ಮಧ್ವಸಿದ್ಧಾಂತದ ತತ್ವಗಳನ್ನು ಮತ್ತು ಧರ್ಮಪ್ರಚಾರವನ್ನು ಮಾಡುತ್ತಾರೆ
ಶ್ರೀಮಧ್ವಾಚಾರ್ಯರ ಗ್ರಂಥಗಳಿಗೆ ಟಿಪ್ಪಣಿಗಳನ್ನು
ಬರೆದ ಮೊದಲ ಟೀಕಾಚಾರ್ಯರೆಂದು ಹೆಸರು
ಪಡೆದಿದ್ದಾರೆ. ಇವರು ಸನ್ನ್ಯಾಯ ರತ್ನಾವಳಿ,ಸತ್ತರ್ಕ
ದೀಪಾವಳಿ ಎಂಬ ಗ್ರಂಥಗಳನ್ನು ರಚಿಸಿ ಮುಂದಿನ ವ್ಯಾಖ್ಯಾನ ಪರಂಪರೆಗೆ ನಾಂದಿ ಹಾಡಿದ್ದಾರೆ.
Klive Special Article ಶ್ರೀಮದಾಚಾರ್ಯರು ಎಂಭತ್ತು ವರ್ಷಗಳಕಾಲ ನಿರಂತರ ಪೂಜಿಸಿದ ಶ್ರೀದಿಗ್ವಿಜಯ ರಾಮ ದೇವರನ್ನು
ಶ್ರೀಮಧ್ವರ ನಂತರ ಮೊಟ್ಟ ಮೊದಲು ಪೂಜಿಸುವ ಸೌಭಾಗ್ಯ ಪಡೆದವರು ಪದ್ಮನಾಭ ತೀರ್ಥರು.
ಹಲವಾರು ಪಂಡಿತರು ಯತಿಗಳು ಇವರ ವಿದ್ವತ್ತನ್ನು
ಕೊಂಡಾಡಿದ್ದಾರೆ. ಶ್ರೀನಾರಾಯಣ ಪಂಡಿತಾಚಾರ್ಯರು ಇವರನ್ನು”ವಿದ್ವತ್ತಿಮಿಂಗಿಲ”ಎಂದು ಹೊಗಳಿದ್ದಾರೆ.
ವೈರಾಗ್ಯವೆಂಬ ಭಾಗ್ಯವನ್ನು ಪಡೆದವರು ಪದ್ಮನಾಭತೀರ್ಥರು. ಅವರ ವೈರಾಗ್ಯದ ಬಗ್ಗೆ ಕೊಂಡಾಡಿದ್ದಾರೆ ಶ್ರೀ ಜಯತೀರ್ಥರು.
ಶ್ರೀಅಕ್ಷೋಭ್ಯ ತೀರ್ಥರು ಅವರ ಪೂರ್ವಾಶ್ರಮದಲ್ಲಿ ಧೋಂಡೋಪಂಥರಾಗಿದ್ದಾಗ ಶ್ರೀಪದ್ಮನಾಭತೀರ್ಥರು ಸಂಚಾರ ಮಾಡುತ್ತಾ ಉಡುಪಿಗೆ ಹೋಗುವಾಗ ಧೋಂಡೋಪಂಥರಿದ್ದ ಊರಾದ ಮಂಗಳವೇಡೆಗೂ ಬರುತ್ತಾರೆ.
ಧೋಂಡೋಪಂಥರು ಪದ್ಮನಾಭತೀರ್ಥರನ್ನು ಭೇಟಿಯಾಗಿ ತಮಗೆ ಸನ್ಯಾಸದೀಕ್ಷೆಯನ್ನುನೀಡು
ವಂತೆ ಪ್ರಾರ್ಥಿಸುತ್ತಾರೆ.
ಪದ್ಮನಾಭತೀರ್ಥರು ಅವರನ್ನು ಉಡುಪಿಗೆ ಕರೆ
ತಂದು ಮಹಾಗುರುಗಳಾದ ಶ್ರೀಮಧ್ವಾಚಾರ್ಯರನ್ನು ದರ್ಶನ ಮಾಡಿಸುತ್ತಾರೆ.
ಧೋಂಡೋಪಂಥರ ಮನದಾಸೆಯಂತೆ,ಗುರುಗಳಿಗೂಇವರನ್ನು ನೋಡಿತಮ್ಮ ತತ್ವ ಸಿದ್ಧಾಂತವನ್ನು ಪ್ರಚುರ ಪಡಿಸಲು ಯೋಗ್ಯವ್ಯಕ್ತಿ ಎಂದು ತೀರ್ಮಾನಿಸಿ ಸನ್ಯಾಸ ದೀಕ್ಷೆಯನ್ನು ನೀಡಿ”ಶ್ರೀಅಕ್ಷೋಭ್ಯತೀರ್ಥ”ಎಂಬ ಎಂದು ನಾಮಕರಣ ಮಾಡುತ್ತಾರೆ.
ಶ್ರೀಅಕ್ಷೋಭ್ಯತೀರ್ಥರಂತಹ ಜ್ಞಾನಿವರೇಣ್ಯರನ್ನು
ಲೋಕಕ್ಕೆ ಕೊಟ್ಟ ಕೀರ್ತಿ ಶ್ರೀಪದ್ಮನಾಭ ತೀರ್ಥರಿಗೆ
ಸಲ್ಲುತ್ತದೆ. ಶ್ರೀಪದ್ಮನಾಭತೀರ್ಥರು ಏಳುವರ್ಷಗಳ ಕಾಲ ವೇದಾಂತ ಸಾಮ್ರಾಜ್ಯವನ್ನಾಳಿದ ಯತಿ ಚಕ್ರ
ವರ್ತಿಗಳು. ಪುರಂದರದಾಸರು “ಪದುಮನಾಭ ಯತಿ ತಾನು ದಶಮತಿಗೆ ಅರ್ಪಿಸಲು/ಮುದದಿ ಮೂರು ಮಾಸದಿ ಹದಿಮೂರು ದಿನವು/ಮದನನಯ್ಯನ ಪೂಜಿಸಿ ಕೊಡಲು ತಾವು ಪೂಜಿಸಿದ ಆರು ವರುಷ ಇನ್ನೂರ ತೊಂಭತ್ತು ದಿನ//
ಎಂದು ಶ್ರೀಪದ್ಮನಾಭತೀರ್ಥ ಗುರುಗಳ ಸಂಸ್ಥಾನಾಧಿಪತ್ಯದ ಬಗ್ಗೆ ಹೇಳಿದ್ದಾರೆ.
ಶ್ರೀಪದ್ಮನಾಭ ತೀರ್ಥರು ಮಹಾ ಸಂಸ್ಥಾನವನ್ನು
ಮೂಲ ರಾಮದೇವರ ವಿಗ್ರಹಗಳ ಸಮೇತ ಶ್ರೀನರಹರಿ ತೀರ್ಥರಿಗೆ ಒಪ್ಪಿಸಿ 1324 ರ ರಕ್ತಾಕ್ಷಿ ಸಂವತ್ಸರದ ಕಾರ್ತಿಕ ಮಾಸದ ಬಹುಳ ಚತುರ್ದಶಿಯಂದು ತುಂಗಭದ್ರೆಯ ನಡುಗಡ್ಡೆಯಲ್ಲಿರುವ ನವ ವೃಂದಾವನ ಕ್ಷೇತ್ರದಲ್ಲಿ ಬೃಂದಾವನಸ್ಥರಾದರು.ಶ್ರೀಗಳವರ ಆರಾಧನೆಯ ದಿನವಾದ ಕಾರ್ತಿಕ ಮಾಸದ ಬಹುಳ ಚತುರ್ದಶಿಯಂದು ಭಕ್ತಿಯ ನಮನಗಳನ್ನು ಅರ್ಪಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
“ಪೂರ್ಣಪ್ರಜ್ಞಕೃತಂ ಭಾಷ್ಯಮಾದೌ ತದ್ಭಾವಪೂರ್ವಕಮ್/
ಯೋ ವ್ಯಾಕರೋನ್ನಮಸ್ತಸ್ಮೈ ಪದ್ಮನಾಭಾಖ್ಯ
ಯೋಗಿನೇ