Saturday, November 23, 2024
Saturday, November 23, 2024

Dalit Sangarsha Samiti ವಕೀಲರು;& ಪೊಲೀಸ್ ಸಮಾಜದ ಆಧಾರ ಸ್ಥಂಭಗಳು

Date:

Dalit Sangarsha Samiti ವಕೀಲರು ಮತ್ತು ಪೊಲೀಸರ ಮಧ್ಯೆ ಉದ್ಬವಿಸಿರುವ ದ್ವೇಷಭಾವನೆಯ ಕಲಹವನ್ನು ಬಗೆಹರಿಸಿಕೊಂಡು ಜನಸಾಮಾನ್ಯರಿಗೆ ಪೂರಕವಾಗಿರಬೇಕು ಎಂದು ದಲಿತ ಸಂಘರ್ಷ ಸಮಿತಿ (ಸಾಗರ ಬಣ) ಮುಖಂಡರುಗಳು ಪೊಲೀಸ್ ವರಿಷ್ಟಾಧಿಕಾರಿಗಳನ್ನು ಆಗ್ರಹಿಸಿದರು.

ಈ ಸಂಬಂಧ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೃಷ್ಣಮೂರ್ತಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ ದಸಂಸ ಮುಖಂಡರುಗಳು ಎರಡು ಆಧಾರಸ್ಥಂಬಗಳು ದ್ವೇಷಭಾವನೆ ಕಲಹ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು ವಕೀಲ ಪ್ರೀತಮ್ ಮೇಲೆ ಪಿಎಸ್‌ಐ ಹೆಲ್ಮೆಟ್ ವಿಚಾರದಲ್ಲಿ ಹಲ್ಲೆಗೊಳಿಸಿರುವುದು ದುರಾದೃಷ್ಟಕರ ವಿಷಯವಾಗಿದೆ ಎಂದ ಅವರು ಸಮಾಜಕ್ಕೆ ಎರಡು ಆಧಾರ ಸ್ಥಂಭಗಳಾದ ಪೊಲೀಸರಂತೆ ವಕೀಲರು ಕೂಡಾ ಅಷ್ಟೇ ಮುಖ್ಯವಾಗಿದ್ದಾರೆ ಎಂದು ಹೇಳಿದರು.

ಈಗಾಗಲೇ ವಕೀಲ ಪ್ರೀತಮ್, ಪೊಲೀಸರ ಮೇಲೆ ಮೊಖದ್ದಾಮೆ ದಾಖಲಿಸಿರುವ ಪ್ರಕರಣಕ್ಕೆ ಅಮಾನತ್ತು ಮಾಡಲಾಗಿದೆ. ಇದರಿಂದಾಗಿ ವಕೀಲರು ಮತ್ತು ಪೊಲೀಸ್ ಇಲಾಖೆ ಮಧ್ಯೆ ದ್ವೇಷಭಾವನೆ ಉಂಟಾಗುವ ಸಂಭವ ವಿದ್ದು ಎರಡು ಇಲಾಖೆಗಳು ಭಿನ್ನಾಪ್ರಾಯಗಳ ಪರಿಣಾಮ ಜನಸಾಮಾನ್ಯರ ಬದುಕು ಅತಂತ್ರವಾಗವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೂಡಲೇ ಪೊಲೀಸ್ ಇಲಾಖೆ ಹಾಗೂ ವಕೀಲರ ಮುಖಸ್ಥರು ಸಭೆ ಕರೆದು ಮುಂದಿನ ದಿನಗಳಲ್ಲಿ ಯಾವು ದೇ ಭಿನ್ನಾಪ್ರಾಯ ಮರುಕಳಿಸದಂತೆ ಪರಸ್ಪರ ಸ್ನೇಹದಿಂದ ಹೊಂದಾಣ ಕೆ ಮಾಡಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Dalit Sangarsha Samiti ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಖಜಾಂಚಿ ಕೆ.ಕೆ.ಬಾಬು, ತಾಲ್ಲೂಕು ಸಂಚಾಲಕ ಯು.ಸಿ.ರಮೇಶ್, ಸಹ ಸಂಚಾಲಕ ಓಂಕಾರಪ್ಪ, ಸಂಘಟನಾ ಸಂಚಾಲಕ ಯಲಗುಡಿಗೆ ಬಸವರಾಜ್, ಕೊಪ್ಪ ತಾಲ್ಲೂಖು ಅಧ್ಯಕ್ಷ ರವಿ, ಮುಖಂಡರುಗಳಾದ ಪ್ರಸನ್ನ, ನಾಗರಾಜ್, ಸಿದ್ದಯ್ಯ, ಆರ್.ಶೇಖರ್, ಚಂದ್ರು ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...