1.ಪ್ರತೀವರ್ಷವೂ ಕೊಡಮಾಡುವ ” ಕುವೆಂಪು ರಾಷ್ಟ್ರೀಯ ಪುರಸ್ಕಾರ” ವನ್ನ ಘೋಷಿಸಲಾಗಿದೆ.
ಬಂಗಾಳಿ ಭಾಷೆಯ ಸುಪ್ರಸಿದ್ಧ ಸಾಹಿತಿ ಶೀರ್ಷೇಂದು ಮುಖ್ಯೋಪಾದ್ಯಾಯ ಅವರಿಗೆ ಈ ಪುರಸ್ಕಾರ ಲಭಿಸಿದೆ.
ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್ ಅವರು ಪ್ರಶಸ್ತಿ ಘೋಷಿಸಿದ್ದಾರೆ.
₹5 ಲಕ್ಷ ನಗದು ಹಾಗೂ ರಜತ ಪದಕವನ್ನ ಈ ಪುರಸ್ಕಾರ ಒಳಗೊಂಡಿದೆ.
ಡಿ.29 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
2.. ಬೆಳಗಾವಿಯಲ್ಲಿ ನಡಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ
ವಿಪಕ್ಷನಾಯಕ ಆರ್.ಅಶೋಕ್ ಇದ್ದಾರೆ.
ಆದರೆ ವಿಧಾನ ಪರಿಷತ್ ಗೆ ವಿಪಕ್ಷನಾಯಕರಿಲ್ಲದೇ ಅಧಿವೇಶನ ಆರಂಭವಾಗಿದೆ.
3..ಪಿಎಸ್ ಐ ನೇಮಕ ಪರೀಕ್ಷೆಯನ್ನ ಜನವರಿ 3 ಕ್ಕೆ ಮುಂದೂಡಲಾಗಿದೆ ಎಂದು ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ವಿಧಾನ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
4..ಮತದಾರರ ಸಾಕ್ಷರತೆ ಕುರಿತ ಪ್ರಬಂಧ ರಚನಾ ಸ್ಪರ್ಧೆಯಲ್ಲಿ ಕುಂಸಿಯ ಸರ್ಕಾರಿ ಪಪೂ ಕಾಲೇಜಿನ ಆರ್ .ಪ್ರಗತಿ ಗೆ ದ್ವಿತೀಯ ಬಹುಮಾನ ಲಭಿಸಿದೆ.
5..ಮಿಜೋರಾಂ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ
ಝಡ್ ಪಿ ಎಂ ಪಕ್ಷಕ್ಕೆ 27 ಸ್ಥಾನಗಳು ಲಭಿಸಿದೆ.
40 ಸ್ಥಾನಗಳ ವಿಧಾನ ಸಭೆಯಲ್ಲಿ
ಬಹುಮತ ಪಡೆದ ಝಡ್ ಪಿ ಎಂ ಪಕ್ಷ ಸರ್ಕಾರ ರಚಿಸಲಿದೆ.