Thursday, November 28, 2024
Thursday, November 28, 2024

DVS College Shivamogga ಆಕರ್ಷಣೀಯವಾಗಿದ್ದ ಡಿವಿಎಸ್ ಕಾಲೇಜಿನ ವಿದ್ಯಾರ್ಥಿಗಳ ವಸ್ತುಪ್ರದರ್ಶನ

Date:

DVS College Shivamogga ಚಂದ್ರಯಾನ 3ರ ಯಶಸ್ಸು, ಹೊಸ ಪಾರ್ಲಿಮೆಂಟ್, ಕವಿಮನೆ, ವಿಜ್ಞಾನ ಸೇರಿದಂತೆ ವೈವಿಧ್ಯ ವಿಷಯಗಳ ಕುರಿತು ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಸ್ತು ಪ್ರದರ್ಶನ ಗಮನ ಸೆಳೆಯಿತು.

ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಆಯೋಜಿಸಿದ್ದ ವಸ್ತು ಪ್ರದರ್ಶನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ ಚಾಲನೆ ನೀಡಿದರು.

ಡಿವಿಎಸ್ ಪ್ರೌಢಶಾಲಾ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ 200ಕ್ಕೂ ಹೆಚ್ಚು ಮಾದರಿಗಳನ್ನು ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಸೇರಿದಂತೆ ತೀರ್ಪುಗಾರರು ವೀಕ್ಷಿಸಿದರು. ವಿದ್ಯಾರ್ಥಿಗಳು ಅತ್ಯಂತ ಕ್ರೀಯಾತ್ಮಕ ಆಲೋಚನೆಗಳ ಮೂಲಕ ಮಾದರಿಗಳನ್ನು ಸಿದ್ಧಪಡಿಸಿದ್ದರು.

ಹೊಸ ಪಾರ್ಲಿಮೆಂಟ್, ಸರ್ಕಾರಿ ಕಟ್ಟಡ, ಕೃಷಿ, ಹನಿ ನೀರಾವರಿ ಪದ್ಧತಿ, ವಾಯಮಾಲಿನ್ಯ, ಪರಿಸರ ಹಾನಿ, ಪವನಶಕ್ತಿ, ಜ್ವಾಲಾಮುಖಿ, ಟ್ರಾಫಿಕ್ ನಿರ್ವಹಣೆ, ಸೋಲಾರ್ ಶಕ್ತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮಾದರಿ ಸಿದ್ಧಪಡಿಸುವ ಜತೆಯಲ್ಲಿ ವಿವರಣೆ ನೀಡಿದರು.

ವಿಜ್ಞಾನ, ಗಣಿತ, ಜೀವಶಾಸ್ತ್ರ, ಭೂಗೋಳ, ಐತಿಹಾಸಿಕ ವಿಷಯಗಳ ಕುರಿತಾದ ಮಾದರಿಗಳನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದರು. ಭೂಮಿಯ ಚಲನೆ, ಚಂದ್ರ, ಗಣಿತದ ಸುಲಭ ಕಲಿಕಾ ವಿಧಾನ, ನೀರಿನ ಸಮರ್ಪಕ ನಿರ್ವಹಣೆ, ಸೌರಮಂಡಲದ ಬಗ್ಗೆ ವಿವರಿಸುವ ಮಾದರಿಗಳು ಗಮನ ಸೆಳೆಯಿತು.

ಭಾರತ ಮಾತೆ, ರಾಣಿ ಅಬ್ಬಕ್ಕ, ಅಕ್ಕಮಹಾದೇವಿ ಸೇರಿದಂತೆ ಐತಿಹಾಸಿಕ ವ್ಯಕ್ತಿಗಳ ವೇಷಭೂಷಣಗಳನ್ನು ವಿದ್ಯಾರ್ಥಿಗಳು ಧರಿಸಿದ್ದರು. ಜೈಪುರ, ಕುಪ್ಪಳ್ಳಿಯ ಕವಿಮನೆ, ಅಂಜನಾದ್ರಿ, ಇಂಡಿಯಾ ಗೇಟ್ ಸೇರಿದಂತೆ ಪ್ರಸಿದ್ಧ ಸ್ಥಳಗಳ ಬಗ್ಗೆ ಮಾದರಿಗಳನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದರು.

ಸ್ವಾತಂತ್ರ್ಯ ಚಳವಳಿ, ಸ್ವದೇಶಿಯ ಉತ್ಪನ್ನ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳೆಯುವ ಪ್ರಮುಖ ಬೆಳೆಗಳ ಮಾಹಿತಿ, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ, ಐತಿಹಾಸಿಕ ಘಟನೆಗಳ ಚಿತ್ರಣ ಕುರಿತಾಗಿ ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ಮಾದರಿಗಳನ್ನು ಪ್ರದರ್ಶಿಸಿದರು.

DVS College Shivamogga ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ, ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್, ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಸಿ.ಕೆ.ಶ್ರೀಧರ್, ಉಪನ್ಯಾಸಕ ವರ್ಗ ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sahyadri Science College ಡಿ.05 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ : ಯುವ ಕೃತಿ ಮತ್ತು ವಿಜ್ಞಾನ ಮೇಳ

Sahyadri Science College ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ...

Sahyadri Kannada Siri Balaga ಸ್ಟೈಲ್ ಡಾನ್ಸ್ ಕ್ರೀವ್ ಸಂಸ್ಥಾಪಕ ಶಶಿಕುಮಾರ್ ಪುನೀತ ರತ್ನ ಪ್ರಶಸ್ತಿ

Shivamogga Sahyadri Kannada Siri Balaga ಶಿವಮೊಗ್ಗ ಜಿಲ್ಲಾ ಸಹ್ಯಾದ್ರಿ...