ಲೇ: ಎನ್.ಜಯಭೀಮ ಜೊಯ್ಸ್.
ಶಿವಮೊಗ್ಗ
Sri VijayaDasaru ಶ್ರೀವಿಜಯದಾಸರ ಆರಾಧನೆಯ ಸಂದರ್ಭದಲ್ಲಿ
ಅವರ ಮಹಿಮೆಯ ಚಿಂತನೆ
“ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೋ ಮಹರಾಯ”
.
ಇದು ದಾಸಪ್ಪನವರು(ವಿಜಯದಾಸರ ಮೊದಲಹೆಸರು) ಅರಳಮ್ಮ ಎಂಬ ಸಾಧ್ವಿಯೊಡನೆ
ದಾಂಪತ್ಯ ಜೀವನಕ್ಕೆ ಕಾಲಿಟ್ಟಮೇಲೆ ಚೀಕಲಪರ್ವಿಯಲ್ಲಿ ಸಂಸಾರ ನಡೆಸುತ್ತಿರುವಾಗ ಕೆಲವುಕಾಲ ಮೌನವಾಗಿದ್ದುಕೊಂಡು ತಪಸ್ಸು ಮಾಡುತ್ತಿದ್ದಾಗ ನಡೆದ ಘಟನೆ.ಐಹಿಕ ಸುಖ ಭೋಗಗಳನ್ನು ಎಂದೂ ಬಯಸದ ದಾಸಪ್ಪ,ನಿತ್ಯ
ಪ್ರಾತಃಕಾಲ ಏಕಾಂತ ಸ್ಥಳದಲ್ಲಿ ತಪಸ್ಸು ಮಾಡುತ್ತಾ
ಸಾಯಂಕಾಲ ಮನೆಗೆ ಹಿಂದಿರುಗುತ್ತಿದ್ದರು.
ಒಂದು ದಿನ ನಿತ್ಯದಂತೆ ತಪಸ್ಸನ್ನಾಚರಿಸಲಿಕ್ಕೆ ಹೋಗಿದ್ದಾರೆ.
ತಾಯಿಕೂಸಮ್ಮಮಾತ್ರಮನೆಯಲ್ಲಿರುತ್ತಾಳೆ.ದಾಸಪ್ಪನ ಪತ್ನಿಅರಳಮ್ಮಪಕ್ಕದಮನೆಗೆಹೋಗಿರುತ್ತಾಳೆ.ಮನೆಯ ಸುತ್ತಲೂ ಮತ್ತು ಹೊರಗಡೆ ನಿಶ್ಶಬ್ದದವಾತಾವರಣ
ವಿರುತ್ತೆ.
ಬೀದಿಯಲ್ಲಿ ಯಾರ ಸುಳಿವೂ ಇರುವುದಿಲ್ಲ.ಈ ವೇಳೆಯಲ್ಲಿ ಮನೆಯ ಮುಂಬಾಗಿಲ ಬಳಿ ಗೆಜ್ಜೆಯ ಘಲ್ ಘಲ್ಸದ್ದು ಕೇಳಿ ಬರುತ್ತದೆ.ಮುಂದಿನ ಬಾಗಿಲು ತೆರದೇ ಇದ್ದುದರಿಂದ ಒಬ್ಬ ದೇವೀ ಕಳೆಯುಳ್ಳ ಜರತಾರಿ ಪೀತಾಂಬರವನ್ನುಟ್ಟ ಚೆಂದದ ಮುತ್ತೈದೆ ಒಂದು ದೊಡ್ಡ ತಟ್ಟೆಯ ತುಂಬಾ ಮೃಷ್ಟಾನ್ನವನ್ನಿಟ್ಟು
ಕೊಂಡು ಮತ್ತೊಂದು ಕೈಯಲ್ಲಿ ಕೇಸರೀ ಮಿಶ್ರಿತವಾದ ನೀರು ತುಂಬಿದ್ದ ತಂಬಿಗೆ ಹಿಡಿದು “ಅಮ್ಮಾ”ಎಂದು ಕೂಗುತ್ತಾ ದಾಸಪ್ಪನ ಮನೆಯ ಒಳಗೆ ಬರುತ್ತಾಳೆ.
ಅಮ್ಮಾ ಎಂಬ ಕರೆಗೆ ಮನೆಯ ದೇವರ ಮನೆಯೊಳಗಿನಿಂದ ಕೂಸಮ್ಮನು ಯಾರು ಬಂದವರೆಂದು ನೋಡಲು ಬರುತ್ತಾಳೆ.ಎದುರಿಗೆ ಸಾಲಂಕೃತಳಾದ ಮುತ್ತೈದೆಯನ್ನು ನೋಡಿದ ಕೂಸಮ್ಮನಿಗೆ ಲಕ್ಷ್ಮಿದೇವಿಯೇ ತನ್ನ ಮನೆಗೆ ಬಂದಿರುವಳೆಂದು ಸಂತೋಷ ಪಡುತ್ತಾಳೆ.
ಮುತ್ತೈದೆಯನ್ನು ಆದರದಿಂದ ಮನೆಯೊಳಗೆ ಬರಮಾಡಿಕೊಂಡು ನೀನು ಯಾರಮ್ಮಾ,ಎಲ್ಲಿಂದ ಬಂದಿದೀಯ ಎಂದು ವಿಚಾರಿಸುತ್ತಾಳೆ.
Sri VijayaDasaru ಮುತ್ತೈದೆಯು ತನ್ನ ಕೈಯ್ಯೊಳಿಗಿದ್ದುದನ್ನೆಲ್ಲವನ್ನು ಕೆಳಗೆಯಿಟ್ಟು ಕೂಸಮ್ಮನಿಗೆ ನಾನೊಬ್ಬಳು ದೇವರ ಸೇವೆಮಾಡುವ
ಸೇವಕಿಯಮ್ಮ,ಹೆಸರು ಲಕ್ಷ್ಮಕ್ಕ ಎಂದು ಮತ್ತು ನನ್ನ ಪತಿದೇವರುನಾರಾಯಣರಾಯರುಎಂತಹೇಳುತ್ತಾಳೆ.ದಾಸಪ್ಪನಸ್ನೇಹಿತರಾದ ನನ್ನ ಯಜಮಾನರು ಇಂದು ಶ್ರೀಅಶ್ವತ್ಥನರಸಿಂಹದೇವರಿಗೆವಿಶೇಷಪೂಜೆಮತ್ತುನೈವೇದ್ಯಮಾಡಿಸಿದರು.ದಾಸಪ್ಪನಿಗೂ ಊಟಕ್ಕೆ ಬರುವಂತೆತಿಳಿಸಿದ್ದರು. ಆದರೆ ಇಷ್ಟು ಹೊತ್ತಾದರೂ
ದಾಸಪ್ಪನವರು ಊಟಕ್ಕೆ ಬರಲಿಲ್ಲವಾದ್ದರಿಂದ ನನ್ನ ಯಜಮಾನರು ಪ್ರಸಾದವನ್ನು ತಟ್ಟೆಯಲ್ಲಿ ಮುಚ್ಚಿ ಜೊತೆಯಲ್ಲಿ ತಂಬಿಗೆ ನೀರನ್ನೂ ಕಳಿಸಿಕೊಟ್ಟಿದ್ದಾರೆ.
ನೀವೆಲ್ಲರೂ ಪ್ರಸಾದವನ್ನು ಸ್ವೀಕರಿಸಿ ,ನಾನುಹೋಗಿ
ಬರುತ್ತೇನೆ ಎಂದು ಕೂಸಮ್ಮನಿಗೆ ಹೇಳಿ ಕುಂಕುಮ
ವನ್ನು ಹಚ್ಚಿಕೊಂಡು ಹೊರಟೇಬಿಟ್ಟಳು.
ಕೂಸಮ್ಮನಿಗೆ
ಈ ಘಟನೆಯಿಂದ ಬಹಳ ಆಶ್ಚರ್ಯಗೊಳ್ಳುತ್ತಾಳೆ.
ಹೇಗಾದರಾಗಲೀ ಎಂದು ಕೂಡಲೇ ಅಶ್ವತ್ಥಕಟ್ಟೆಗೆ ಹೋಗಿ ನೋಡಿದರೆ ಅಲ್ಲಿ ನಾರಾಯಣರಾಯರಾಗಲೀ ಲಕ್ಷ್ಮಕ್ಕನಾಗಲೀ ಅಥವಾ ಅಶ್ವತ್ಥಕಟ್ಟೆಯಲ್ಲಿಯಾವುದೇ ಪೂಜೆನಡೆದಕುರುಹುಗಳಾಗಲೀಕಾಣಲಿಲ್ಲ.ಅಲ್ಲಿಂದ ಸೀದಾಮನೆಗೆ ಬರುತ್ತಾಳೆ.
ಅಷ್ಟರಲ್ಲಿ ಪಕ್ಕದಮನೆಗೆ
ಹೋಗಿದ್ದಅರಳಮ್ಮನೂಬರುತ್ತಾಳೆ.
ಮಗ ದಾಸಪ್ಪನೂ ತಪಸ್ಸು ಮುಗಿಸಿಕೊಂಡು ಮನೆಗೆ ಬರುತ್ತಾನೆ. ದಾಸಪ್ಪನಿಗೆ ಮತ್ತು ಅರಳಮ್ಮನಿಗೆ ಮನೆಯ ವಾತಾವರಣದಲ್ಲಿ ಏನೋ ಬದಲಾವಣೆ ಕಂಡುಬರುತ್ತದೆ .
ಮನೆಯೆಲ್ಲಾ ಸುವಾಸನೆಯಿಂದ ಕೂಡಿರುತ್ತದೆ.ಕೂಸಮ್ಮನು ಮಗನಿಗೆ ಯಾರೋ ನಿನ್ನ ಸ್ನೇಹಿತರು ನಾರಾಯಣ ರಾಯರೆಂಬುವರು ಇಂದು ಅಶ್ವತ್ಥ ನರಸಿಂಹ ದೇವರಿಗೆ ವಿಶೇಷ ಪೂಜೆ ಮಾಡಿಸಿ ನೀನು ಊಟಕ್ಕೆ ಹೋಗದಿದ್ದುದರಿಂದ ಮನೆಗೇ ಅವರ ಪತ್ನಿ ಲಕ್ಷ್ಮಕ್ಕನ ಕೈಯಲ್ಲಿ ಪ್ರಸಾದವನ್ನು ತಂದುಕೊಟ್ಟು
ಎಲ್ಲರೂ ಸ್ವೀಕರಿಸುವಂತೆ ಹೇಳಿ ಆ ಮುತ್ತೈದೆಯು ಹೊರಟು ಹೋದರು ಎಂದು ತಿಳಿಸಿದಳು.
ದಾಸಪ್ಪನಿಗೆ ನಾರಾಯಣ ರಾಯರು ಮತ್ತು ಲಕ್ಷ್ಮಕ್ಕ
ಎಂದರೆ ಆ ಲಕ್ಷ್ಮೀನಾರಾಯಣರೇ ತಮ್ಮ ಭಕ್ತಿಯ ತಪಸ್ಸಿಗೆ ಪ್ರೀತರಾಗಿ ಅನುಗ್ರಹಿಸಿದ್ದಾರೆ ಎಂದು ತಾಯಿ ಮತ್ತು ಪತ್ನಿಗೆ ತಿಳಿಸುತ್ತಾರೆ.
ಹೀಗೆ, ವಿಜಯದಾಸರು ದಾಸಪ್ಪನಾಗಿರುವಾಗಲೇ
ಶ್ರೀಹರಿಯ ಅನುಗ್ರಹ ಪಡೆದ ಮಹಾನುಭಾವರು.
ಬಡತನದ ಬೇಗೆಯನ್ನು ಅನುಭವಿಸಿ,ಕೂಸಿಮಗ ದಾಸ ಎಂದು ಹೀಯಾಳಿಕೆಯ ಯಾತನೆಯನ್ನು ಅನುಭವಿಸಿ ಶಾಂತತೆಯಿಂದಲೇ ಕಷ್ಟ ಸುಖವನ್ನು ಸ್ವೀಕರಿಸಿದ ವಿಜಯರಾಯ ಗುರುಗಳು ಶ್ರೀಲಕ್ಷ್ಮೀನಾರಾಯಣರ ಸಂಪೂರ್ಣ ಅನುಗ್ರಹ ಪಡೆದವರು. ನಾವೂ ದಾಸವರೇಣ್ಯರನ್ನು ಭಕ್ತಿಯಿಂದ ಸ್ಮರಿಸಿ ಅವರ ಅಂತರ್ಯಾಮಿಯಾದ ಶ್ರೀಲಕ್ಷ್ಮೀನಾರಾಯಣರ ಅನುಗ್ರಹವಾಗುವಂತೆ ಕರುಣಿಸಲಿ ಎಂದು ಪ್ರಾರ್ಥಿಸೋಣ.