Monday, November 25, 2024
Monday, November 25, 2024

Karnataka Bank ಬ್ಯಾಂಕ್ ಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕದಿಂದ ಬೇರೆಯವರಿಗೆ ಉದ್ಯೋಗಾವಕಾಶ ಸೀಮಿತ

Date:

Karnataka Bank ಬ್ಯಾಂಕ್‌ಗಳಲ್ಲಿ ಹೊರಗುತ್ತಿಗೆ ನೌಕರರನ್ನು ತಡೆಹಿಡಿದು ಹೊಸದಾಗಿ ನೇಮಕಾತಿ ಆದೇಶವನ್ನು ಈಡೇರಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬ್ಯಾಂಕ್ ನೌಕರರಿಗೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಅಖಿಲ ಭಾರತ ಕರ್ನಾಟಕ ಬ್ಯಾಂಕ್ ನೌಕರರ ಅಸೋಸಿಯೇಷನ್‌ನ ಕೇಂದ್ರ ಸಮಿತಿ ಸದಸ್ಯ ಕೆ.ಫಣೀಂದ್ರ ಎಚ್ಚರಿಸಿದರು.

ಚಿಕ್ಕಮಗಳೂರು ನಗರದ ಎಂ.ಇ.ಎಸ್. ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯಿಸ್ ಫೆಢರೇಷನ್ ಹಾಗೂ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸದಸ್ಯರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರತಿ ನೌಕರರು ಗಂಭೀರವಾಗಿ ಯೋಚಿಸಬೇಕಾದ ವಿಷಯ ಇದಾಗಿದೆ. ಹೊರಗುತ್ತಿಗೆ ನೌಕರರಿಂದ ಹಲ ವಾರು ತೊಂದರೆಗಳನ್ನು ಎದುರಿಸುವ ಜೊತೆಗೆ ವೃತ್ತಿಯಲ್ಲಿ ಅನೇಕ ಸಮಸ್ಯೆ ಎದುರಾಗಲಿದೆ ಎಂದ ಅವರು ಆಡಳಿತ ರೂಡ ಸರ್ಕಾರಗಳಿಗೆ ಹಲವಾರು ಬಾರಿ ಹೋರಾಟ ಮೂಲಕ ಒತ್ತಾಯಿಸಿದರೂ ಬೇಡಿಕೆ ಈಡೇರಿಸದೇ ಮೀನಾ ಮೇಷ ಎಣಿಸುತ್ತಾ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರಸ್ತುತ ಬ್ಯಾಂಕ್ ವೃತ್ತಿಯಲ್ಲಿರುವ ಸಿಬ್ಬಂದಿಗಳಿಗೆ ಹಲವಾರು ಸೌಕರ್ಯಗಳನ್ನು ಸರ್ಕಾರಗಳು ನೀಡಿವೆಯಾ ದರೂ ವೃತ್ತಿಯಲ್ಲಿ ರಕ್ಷಣೆಯಿಲ್ಲವಾದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು ಇದರಿಂದ ವೃತ್ತಿಯಲ್ಲಿರುವ ಬಹುತೇಕರಿಗೆ ಕೊಡಲಿಪೆಟ್ಟು ಬೀಳುವ ಮೂಲಕ ಒಂದೊoದೇ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಸಲಾ ಗುತ್ತಿದೆ ಎಂದು ತಿಳಿಸಿದರು.

ಆ ನಿಟ್ಟಿನಲ್ಲಿ ಪ್ರತಿ ನೌಕರರು ಸಂಘಟನೆಗಳ ಮೂಲಕ ಒಗ್ಗಟ್ಟಾಗಿ ಹೋರಾಟ ರೂಪಿಸಿದರೆ ಮಾತ್ರ ಸರ್ಕಾರ ಗಳು ಹಾಗೂ ಸಂಬoಧಿಸಿದ ಸಂಸ್ಥೆಗಳು ಬೇಡಿಕೆ ಈಡೇರಿಸಲು ಸಾಧ್ಯ. ಇಲ್ಲವಾದಲ್ಲಿ ಎಂದಿನoತೆ ಜೀವನ ನಡೆಸಿ ಮುಂಬರುವ ಸಂಕಷ್ಟಗಳಿಗೆ ಸಿಲುಕಿ ಸಮಸ್ಯೆ ಅನುಭವಿಸಬೇಕಾಗುವುದರಿಂದ ಇಂದಿನಿoದ ಎಚ್ಚೆತ್ತುಕೊಂಡು ಹೋ ರಾಟಕ್ಕೆ ಕೈಜೋಡಿಸಬೇಕು ಎಂದು ಸಲಹೆ ಮಾಡಿದರು.

ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳಾದ ವಾರದಲ್ಲಿ ಐದು ದಿನ ಕೆಲಸ, ನೇಮಕಾತಿ, ವೇತನ ಪರಿಷ್ಕರಣೆ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ನಿಯಮಾನುಸಾರ ಜಾರಿಗೆ ಒತ್ತಾಯಕ್ಕೆ ಕೇವಲ ಮನೆಯಲ್ಲಿ ಕೂಳಿತುಕೊಂ ಡರೆ ಸಾಲದು ಬೀದಿಗಿಳಿದು ಚಳುವಳಿ ಹಮ್ಮಿಕೊಳ್ಳಬೇಕು. ಕೆಲವರು ಇದರಿಂದ ನಮಗೇನು ಎಂದು ಸುಮ್ಮನಾಗು ತ್ತಾರೆ. ಬಳಿಕ ಸೌಲಭ್ಯ ದೊರೆಯುವ ವೇಳೆಯಲ್ಲಿ ನಮಗೂ ಬೇಕೆನ್ನುತ್ತಾರೆ. ಹಾಗಾಗಿ ಪ್ರತಿ ಹಕ್ಕುಗಳನ್ನು ಪಡೆದುಕೊ ಳ್ಳಲು ಸ್ವಯಂಪ್ರೇರಿತರಾಗಿ ಹೋರಾಟಕ್ಕೆ ಮುಂದಾಗಬೇಕು ಎಂದರು.

ರಾಜ್ಯ ಕೋಟೆಕ್ ಮಹೇಂದ್ರ ಬ್ಯಾಂಕ್ ಅಧ್ಯಕ್ಷ ವಿ.ನಾಗರಾಜ್ ಮಾತನಾಡಿ ಬ್ಯಾಂಕ್ ನೌಕರರ ಹಕ್ಕುಗಳನ್ನು ಕೊಡಿಸುವ ಉದ್ದೇಶದಿಂದ ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಅಶ್ವಮೇಧ ಕುದುರೆಯಂತೆ ಸಂಘಟನೆಯ ಮುಖಂಡರಾದ ಪಣೀಂದ್ರ, ಶ್ರೀನಿವಾಸ್, ಜಯನಾಥ್ ರಾಜ್ಯಾದ್ಯಂತ ಸಂಚರಿಸಿ ನೌಕರರಿಗೆ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.

ಗ್ರಾಹಕರನ್ನು ಉತ್ತಮ ಸೇವೆ ನೀಡುವ ಉದ್ದೇಶದಿಂದ ಬ್ಯಾಂಕ್ ನೌಕರರಿಗೆ ಸರ್ಕಾರಗಳು ಹಲವಾರು ಯೋ ಜನೆಗಳನ್ನು ರೂಪಿಸಿವೆ. ಇದರಿಂದ ಗ್ರಾಹಕರು ಖುಷಿಯಲ್ಲಿದ್ದರೂ ಕೂಡಾ ನೌಕರರು ಬೆಳಿಗ್ಗೆಯಿಂದ ಸಂಜೆಯವರೆ ಗೂ ಸೇವೆ ಸಲ್ಲಿಸುತ್ತಾ ಕೆಲಸದ ಒತ್ತಡದಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಹಣಕಾಸು ವ್ಯವಹಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರಣ ನೌಕರರು ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ಮಾಡುವ ಅವಶ್ಯಕತೆ ಯಿದೆ ಎಂದರು.

Karnataka Bank ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹೆಚ್ಚಾಗಿ ಗ್ರಾಹಕರಿಂದ ಆರ್ಥಿಕವಾಗಿ ಅಭಿವೃದ್ದಿ ಹೊಂದುತ್ತಿದೆ. ಗ್ರಾಹಕರು ಕಡಿಮೆಯಾದರೆ ನೌಕರರಿಗೆ ಆಯಾಸ ಕಡಿಮೆಯಾಗಲಿದೆ ಎಂಬುದನ್ನು ಅಲ್ಲಗೆಳೆಯಬೇಕು. ಈಗಾಗಲೇ ಖಾಸಗೀ ಬ್ಯಾಂಕ್‌ಗಳು ಗ್ರಾಹಕರನ್ನು ಸೆಳೆಯುವ ಸಲುವಾಗಿ ಹಲವಾರು ಕಸರತ್ತುಗಳನ್ನು ನಡೆಸಿ ಖಾತೆ ಮಾಡಿಸಿ ಕೊಳ್ಳಲಾಗುತ್ತಿದೆ. ಸಾರ್ವಜನಿಕರ ವಲಯದ ಬ್ಯಾಂಕ್‌ನಲ್ಲಿ ದೊರೆಯುವ ಸೇವೆ ಖಾಸಗೀಯಲ್ಲಿ ದೊರೆಯುವುದಿಲ್ಲ ಎಂಬುದನ್ನು ಗ್ರಾಹಕರಿಗೆ ಅರ್ಥೈಸಿಕೊಳ್ಳುವ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ,ಆರ್,ಬಸವರಾಜ್ ಮಾತನಾಡಿ ವಿವಿಧ ಬೇಡಿಕೆಗಳ ನ್ನು ಈಡೇರಿಸಲು ಸಲುವಾಗಿ ಜಿಲ್ಲೆಯಲ್ಲೂ ಕೂಡಾ ಹಲವಾರು ಬಾರಿ ಹೋರಾಟ ನಡೆಸಿದರೂ ಸರ್ಕಾರಗಳು ನೌಕರರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಇದರಿಂದ ವೃತ್ತಿಯಲ್ಲಿ ತೀವ್ರ ಸಮಸ್ಯೆಯಾಗಿದೆ. ಹಾಗಾಗಿ ನೌಕರರು ವೈಯ ಕ್ತಿಕ ಸಮಸ್ಯೆ ಬದಿಗಿಟ್ಟು ಹಕ್ಕುಗಳಿಗೆ ಹೋರಾಟ ರೂಪಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಕೌಶಿಕ್, ಸಂಘಟನಾ ಕಾರ್ಯದರ್ಶಿ ಉಜ್ವಲ್ ಡಿ.ಪಡುಬಿದ್ರಿ, ಬ್ಯಾಂಕ್ ಸಿಬ್ಬಂದಿಗಳಾದ ಪಿ.ಸುರೇಶ್, ಯೋಗೀಶ್, ಗಣೇಶ್, ಸ್ವಾತಿ, ಪೂರ್ಣಿಮಾ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Priyanka Gandhi ಕೇರಳ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅತ್ಯಧಿಕ ಮತಗಳಿಂದ ಆಯ್ಕೆ

Priyanka Gandhi ಪ್ರಿಯಾಂಕಾ ಗಾಂಧಿ ವಾದ್ರಾ 4,10,931 ಮತಗಳ ಅಂತರದಿಂದ ಗೆದ್ದಿದ್ದಾರೆ,...

SP Mithun Kumar ಮದ್ಯವರ್ಜನ ಶಿಬಿರ ಚಾಲನೆ, ಸಮಾಜಕ್ಕೆ ಹೆಚ್ಚು ಉಪಯುಕ್ತ- ಎಸ್.ಪಿ .ಮಿಥುನ್ ಕುಮಾರ್

SP Mithun Kumar ಶಿವಮೊಗ್ಗ,ನ.22 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ...

Kuvempu Birthday ಕುವೆಂಪು ಜನ್ಮದಿನದ ವಿಶೇಷ ಷಿಕಾರಿಪುರದಲ್ಲಿ ನಾಟಕ ಸ್ಪರ್ಧೆ

Kuvempu Birthday ಸಹ್ಯಾದ್ರಿ ರಂಗತರಂಗ ನಾಟಕ ಸ್ಪರ್ಧೆ ಶಿವಮೊಗ್ಗ ನಗರದ ಸಹಾದ್ರಿ...

Dargah Shah Aleem Deewan ಶಿವಮೊಗ್ಗದ ದಿವಾನ್ ಭಾಬಾ ದರ್ಗಾದಲ್ಲಿ ನ.24 ರಿಂದ 26 ವರೆಗೆ ಉರುಸ್

Dargah Shah Aleem Deewan ಶಿವಮೊಗ್ಗದ ಹಜ್ರತ್ ಸೈಯದ್ ಶಾ ಅಲೀಮ್...