Karnataka Celebration 50 ದೇಶಿಯ ವಿದ್ಯಾಶಾಲಾ ಸಮಿತಿಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಕನ್ನಡ ನಡಿಗೆ ಬೃಹತ್ ಜಾಥಾಕ್ಕೆ ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಚಾಲನೆ ನೀಡಿದರು.
ಕನ್ನಡ ರಾಜ್ಯೋತ್ಸವ ವಿಶೇಷ ಆಚರಣೆ ಪ್ರಯುಕ್ತ ದೇಶಿಯ ವಿದ್ಯಾಶಾಲಾ ಸಮಿತಿಯು ಬುಧವಾರ ಸಂಜೆ ಆಯೋಜಿಸಿದ್ದ ಕನ್ನಡ ನಡಿಗೆ ಜಾಥಾದಲ್ಲಿ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಕನ್ನಡ ಘೋಷಣೆಗಳನ್ನು ಕೂಗಿದರು.
ಡಿವಿಎಸ್ ಸಂಸ್ಥೆಯ ವಿದ್ಯಾರ್ಥಿನಿ ವೃತ್ತಿ ವಿ ಜೈನ್ ಅವರು ಜಾಥಾದಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ ಮಹಿಳಾ ವಿಭಾಗದ ಪಂದ್ಯಾವಳಿಯಲ್ಲಿ ಕಂಚಿನ ಪದಕ ವಿಜೇತರಾಗಿದ್ದರು.
ಡಿವಿಎಸ್ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡ ನಾಡಿನ ಬರಹಗಾರರ ವೇಷಭೂಷಣಗಳನ್ನು ಧರಿಸಿ ಜಾಥಾದಲ್ಲಿ ಪಾಲ್ಗೊಂಡಿದ್ದರು. ಕನ್ನಡ ಲೇಖಕರ ಹಾಗೂ ಸಾಧಕರ ಭಾವಚಿತ್ರಗಳ ಫಲಕಗಳನ್ನು ವಿದ್ಯಾರ್ಥಿಗಳು ಜಾಥಾದಲ್ಲಿ ಪ್ರದರ್ಶಿಸಿದರು.
Karnataka Celebration 50 ಕರ್ನಾಟಕ ಸಂಭ್ರಮ 50, ಕನ್ನಡ ನಾಡಿಗೆ ಕನ್ನಡ ನಡಿಗೆ ಬೃಹತ್ ಜಾಥಾ”ವು ಡಿವಿಎಸ್ ಸಂಸ್ಥೆ ಆವರಣದಿಂದ ಆರಂಭಗೊಂಡು ಹರ್ಷ ಶೋರೂಂ ಎದುರು ತಲುಪಿ ಬಿಎಚ್ ರಸ್ತೆ ಮಾರ್ಗವಾಗಿ ಶಿವಪ್ಪನಾಯಕ ವೃತ್ತ, ಎಎ ವೃತ್ತ, ನಂತರ ಮಾಲ್ ಮುಂಭಾಗದಿಂದ ನೆಹರು ರಸ್ತೆ, ಟಿ.ಸೀನಪ್ಪ ಶೆಟ್ಟಿ ವೃತ್ತ, ಮಹಾವೀರ ವೃತ್ತ ಪುನಃ ಜಾಥಾವು ಡಿವಿಎಸ್ ಸಂಸ್ಥೆ ಆವರಣ ತಲುಪಿತು.
ಕನ್ನಡ ನಡಿಗೆ ಬೃಹತ್ ಜಾಥಾ ನಂತರ ಕರ್ನಾಟಕ ನಕ್ಷೆಯ ಅಲಂಕಾರ ಮಾಡಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಕಾರ್ಯದರ್ಶಿ ಎಸ್.ರಾಜಶೇಖರ್, ಖಜಾಂಚಿ ಬಿ.ಗೋಪಿನಾಥ್, ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ, ಜಿ.ಎಸ್.ಹರೀಶ್, ಎಲ್ಲ ನಿರ್ದೇಶಕರು, ಪದಾಧಿಕಾರಿಗಳು, ಡಿವಿಎಸ್ ಸಂಸ್ಥೆಯ ವಿವಿಧ ಶಾಲಾ ಕಾಲೇಜಿನ ಪ್ರಾಚಾರ್ಯರು, ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು
Karnataka Celebration 50 ಯುವ ವಿದ್ಯಾರ್ಥಿಗಳೇ ಕನ್ನಡ ಸಂಸ್ಕೃತಿ ಪರಂಪರೆಯ ರಾಯಭಾರಿಗಳು – ಡಿವಿಎಸ್ ವಿದ್ಯಾರ್ಥಿಗಳಿಂದ ಕನ್ನಡ ನಡಿಗೆ ಬೃಹತ್ ಜಾಥಾ
Date: