Tagaru Palya Movie Review ಹಳ್ಳಿ ಸೊಗಡಿನ ಕಥೆ ಯನ್ನು ಇಟ್ಟುಕೊಂಡು ಅನೇಕ ಚಿತ್ರಗಳು ಸೂಪರ್ ಹಿಟ್ ಆದ ಉದಾಹರಣೆಗಳಿವೆ.
ಇತ್ತೀಚೆಗೆ ಇಂತಹ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾಗಳು ಕಡಿಮೆ ಆಗಿವೆ… ಈ ಕೊರತೆಯನ್ನು ನಿವಾರಿಸುವ ರೀತಿಯಲ್ಲಿ ಟಗರು ಪಲ್ಯ ಸಿನಿಮಾ ಮೂಡಿ ಬಂದಿದೆ….
ಹೌದು, ಹೊಸ ನಿರ್ದೇಶಕರಾದ ಉಮೇಶ್.ಕೆ.ಕೃಪಾ ಅವರು ಟಗರುಪಲ್ಯ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ….
ನಟ ಡಾಲಿ ಧನಂಜಯ್ ಈ ಕಥೆಗೆ ಬಂಡವಾಳ ಹೂಡಿದ್ದಾರೆ…
ಗ್ರಾಮೀಣ ಭಾಗದಲ್ಲಿ ನಡೆಯುವ ಒಂದು ಆಚರಣೆಯನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾವನ್ನು ನಿರ್ದೇಶನ ಮಾಡಲಾಗಿದೆ…
ಅರಣ್ಯದೊಳಗಿರುವ ಊರಿನ ದೇವಿಗೆ ಹರಕೆ ತೀರಿಸಲು ಬರುವ ಕುಟುಂಬದ ಕಹಾನಿ ಈ ಸಿನಿಮಾದಲ್ಲಿದೆ…
ಈ ಸಿನಿಮಾದಲ್ಲಿ ನಾಗಭೂಷಣ್ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ…. ನಾಯಕಿ ನಟಿಯಾಗಿ ಅಮೃತಾ ಪ್ರೇಮ್ ಅವರು ಅಭಿನಯಿಸಿದ್ದಾರೆ… ಮುಖ್ಯ ಭೂಮಿಕೆಯಲ್ಲಿ ರಂಗಾಯಣ ರಘು, ತಾರಾ, ಮಜಾ ಭಾರತ ಖ್ಯಾತಿಯ ಕಲಾವಿದ ಕಾರ್ತಿಕ್,ವಾಸುಕಿ ವೈಭವ್, ಶ್ರೀನಾಥ್ ವಶಿಷ್ಠ, ಚಂದ್ರಕಲಾ ಅವರು ನಟಿಸಿದ್ದಾರೆ…
ಮಲೆನಾಡ ಕಲಾವಿದ ಮಜಾ ಭಾರತದ ಖ್ಯಾತಿಯ ಕಾರ್ತಿಕ್ ಅವರ ನಟನೆ ಎಲ್ಲರ ಗಮನ ಸೆಳೆದಿದೆ ….
ಟಗರು ಪಲ್ಯ ಸಿನಿಮಾದಲ್ಲಿ ಕುರಿಯನ್ನ ಬಲಿಕೊಡುವುದಕ್ಕೆ ಮುಂಚೆ ಆ ಕುರಿ ತಲೆ ಅಲ್ಲಾಡಿಸುವ ಮೂಲಕ ಅನುಮತಿ ನೀಡಬೇಕು… ಆ ಕುರಿ ತಲೆ ಅಲ್ಲಾಡಿಸದ ಹೊರತು ಗುರಿಯನ್ನು ಕಡಿಯುವಂತಿಲ್ಲ ಎಂಬುದು ಜನರ ನಂಬಿಕೆ… ಒಂದು ವೇಳೆ ತಲೆ ಅಲ್ಲಾಡಿಸದಿದ್ದರೆ ಆ ಸಂದರ್ಭ ಹೇಗಿರುತ್ತದೆ ಎಂಬುದನ್ನು ಅಚ್ಚುಕಟ್ಟಾಗಿ ಈ ಸಿನಿಮಾದಲ್ಲಿ ನಿರ್ಮಿಸಿದ್ದಾರೆ…
Tagaru Palya Movie Review ಪಕ್ಕ ಗ್ರಾಮೀಣ ಪ್ರದೇಶದ ಜನರು ಮಾತನಾಡುವ ಭಾಷೆಯನ್ನು ಬಳಕೆ ಮಾಡಲಾಗಿದೆ… ಈ ವಿಚಾರವಾಗಿ ಟಗರು ಪಲ್ಯ ಎಲ್ಲಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.