G K Mithun Kumar ನಿನ್ನೆ ಬೆಳಿಗ್ಗೆ 11ರ ಸುಮಾರಿಗೆ ಶಿವಮೊಗ್ಗದ ರೈಲ್ವೆ ನಿಲ್ದಾಣದ ಆಟೋ ಸ್ಟ್ಯಾಂಡ್ ಬಳಿ ಎರಡು ಅನುಮಾನಾಸ್ಪದ ಸ್ಟೀಲ್ ಬಾಕ್ಸ್ ಗಳು ಪತ್ತೆಯಾಗಿದ್ದವು ಎಂದು ಎಸ್. ಪಿ. ಮಿಥುನ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಈ ಅನಾಮಧೇಯ ಸ್ಟೀಲ್ ಬಾಕ್ಸ್ ಗಳು ಇರುವ ಬಗ್ಗೆ ಸ್ಥಳೀಯ ಆಟೋ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಜಿಲ್ಲಾ ಪೊಲೀಸರ ಎ ಎಸ್ ತಂಡ ಪರಿಶೀಲನೆ ನಡೆಸಿದ ಬಳಿಕ ಬಾಂಬ್ ನಿಗ್ರಹದಳದ ತಂಡ ಕರೆಯಿಸಿ ಕೊಳ್ಳಲಾಯಿತು. ಬಾಂಬ್ ನಿಗ್ರಹ ದಳದ ತಂಡ 4 ರೀತಿಯ ಪರೀಕ್ಷೆಗಳನ್ನು ನಡೆಸಿ ಯಾವುದೇ ಸ್ಪೋಟಕ ವಸ್ತುಗಳು ಬಾಕ್ಸ್ ನಲ್ಲಿ ಇಲ್ಲ ಎಂದು ಖಾತ್ರಿಪಡಿಸಿಕೊಂಡಿತ್ತು ಎಂದು ಮಾಹಿತಿ ತಿಳಿಸಿದ್ದಾರೆ.
ಈ ಸ್ಟೀಲ್ ಬಾಕ್ಸ್ ಗಳಲ್ಲಿ ಪ್ರಾಥಮಿಕ ತನಿಖೆಯಲ್ಲಿ ಉಪ್ಪು ಹಾಗೂ ವೇಸ್ಟ್ ಮೆಟೀರಿಯಲ್ಸ್ ಇರುವುದು ಕಂಡು ಬಂದಿದೆ. ಬಾಕ್ಸ್ ಇಟ್ಟ ಪ್ರದೇಶದ ಸಿಸಿಟಿವಿ ವಿಡಿಯೋಗಳನ್ನು ಪರಿಶೀಲನೆ ನಡೆಸಿದ್ದರಿಂದ ಕೆಲವು ಸುಳಿವು ಸಿಕ್ಕಿದೆ.ಬಾಕ್ಸ್ ಇಟ್ಟ ಸ್ಥಳಗಳಲ್ಲಿ ಕೆಲವು ವಾಹನಗಳ ಸಂಚಾರ ನಡೆದಿದೆ. ನ.3 ರಂದು ಮಧ್ಯಾಹ್ನ 12:30 ರ ಬೆಳಗ್ಗೆ ಈ ಬಾಕ್ಸ್ ಗಳನ್ನು ಇಲ್ಲಿ ತಂದಿಟ್ಟಿರುವ ಬಗ್ಗೆ ಸುಳಿವು ಸಿಕ್ಕಿದೆ ಎಂದು ಹೇಳಿದ್ದಾರೆ.
G K Mithun Kumar ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳು ಈ ಬಾಕ್ಸ್ ಗಳನ್ನು ಇಲ್ಲಿ ತಂದು ಇಟ್ಟ ಬಗ್ಗೆ ಮಾಹಿತಿ ಸಿಕ್ಕಿದೆ. ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ
ಇನ್ನು ಹೆಚ್ಚಿನ ಮಾಹಿತಿಯನ್ನು ವಿಚಾರಣೆ ಬಳಿಕ ತಿಳಿಸುತ್ತೇವೆ ಎಂದು ಶಿವಮೊಗ್ಗ ಜಿಲ್ಲಾ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಅವರು ಹೇಳಿದ್ದಾರೆ.