Vijayadashami ಶ್ರೀ ಚಿಂತಾಮಣಿ ಮಠದಲ್ಲಿ ವಿಜಯದಶಮಿಯ ನಿಮಿತ್ತ ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಧರ್ಮ ಧ್ವಜಾರೋಹಣ ಮಾಡಿದರು.
ಜಗದ್ಗುರು ಶ್ರೀಶ್ರೀ ಶಂಕರಾಚಾರ್ಯರ ಶಿಷ್ಯರಾದ ಶ್ರೀಶ್ರೀ (ಪ್ರಥಮ) ಚಿಂತಾಮಣಿ ಮಹಾಸ್ವಾಮಿಗಳಿಂದ ಆರಂಭವಾದ ಚಿಂತಾಮಣಿ ಮಠವು ಎಷ್ಟೇ ಪರಕೀಯರ ದಾಳಿಗೆ ತುತ್ತಾದರೂ ಧರ್ಮ ಜಾಗೃತಿ ಮಾಡುತ್ತಲೇ ತಲೆ ಎತ್ತಿಯೇ ನಿಂತಿದೆ.
*”ಶ್ರೀ ಚಿಂತಾಮಣಿ ಮಠವು ಧರ್ಮ ಜಾಗೃತಿ ಮಾಡುವುದರಲ್ಲಿ ಪ್ರಖ್ಯಾತವಾಗಿ. ಆ ಪೀಠಕ್ಕೆ ನಡೆದುಕೊಳ್ಳಿ” ಎಂದು ಶ್ರೀಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳ ಅಪ್ಪಣೆಯೂ ದೊರೆತಿದೆ.
ಶ್ರೀ ಚಿಂತಾಮಣಿ ಮಠದಿಂದ ಮತ್ತೆ ಆ ಧರ್ಮಜಾಗೃತಿ ಮೂಡಿಸುವ ಕಾರ್ಯಗಳು ಪುನರಾರಂಭವಾಗಲೆಂದ 31ನೆ ಪೀಠಾಧಿಪತಿಗಳಾದ ಸದ್ಗುರು ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ವಿಜಯದಶಮಿಯ ಪ್ರಯುಕ್ತ (ಸಾಂಕೇತಿಕವಾಗಿ) ಶ್ರೀ ಮಠದಲ್ಲಿ ಧರ್ಮ ಧ್ವಜವನ್ನು ಹಾರಿಸಿದರು.
ಮತ್ತೊಂದು ಪ್ರಮುಖ ಕಾರಣವೆಂದರೆ ವಿಜಯದಶಮಿಯ ದಿನದಂದೇ ವರದಹಳ್ಳಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳು ಧರ್ಮ ಧ್ವಜವನ್ನು ಹಾರಿಸಿದ್ದು, ತನ್ಮೂಲಕ ಅನೇಕ ಧರ್ಮ ಜಾಗೃತಿಕಾರ್ಯಗಳನ್ನು ಮಾಡಿದರು.
“ಭಗವಾನ್ ಶ್ರೀಧರ ಸ್ವಾಮಿಗಳ ಕಾರ್ಯಗಳು ನಮ್ಮೆಲ್ಲರಿಗೂ ಮಾರ್ಗದರ್ಶನ ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆಯಬೇಕು. ವಿಜಯದಶಮಿಯು ಅದ್ವೈತಿಗಳ ಪಾಲಿಗೆ ಬಹಳ ಹೆಮ್ಮೆಯ ಹಾಗೂ ಮಹತ್ವದ ದಿನವಾಗಿದೆ.ಕಾರಣ ಭಗವಾನ್ ಶ್ರೀಧರ ಸ್ವಾಮಿಗಳು ತಪಸ್ಸಿಗೆ ಹೋರಟ ಶುಭದಿದ, ಸರ್ವವನ್ನೂ ತ್ಯಾಗ ಮಾಡಿ ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ಹತ್ತು ಇಂದ್ರಿಯಗಳ ಮೇಲೆ ವಿಜಯವನ್ನು ಸಾಧಿಸಲು ಮುಂದಾದವರು ಶ್ರೀಧರ ಸ್ವಾಮಿಗಳು ವಿಜಯ ದಶಮಿಯನ್ನು ನಿಜಾರ್ಥದಲ್ಲಿ ಆಚರಿಸಿದರು.
ಹಾಗಾಗಿ ವಿಜಯದಶಮಿಯಂದು ನಾವೆಲ್ಲ ಭಗವಾನ್ ಶ್ರೀಧರ ಸ್ವಾಮಿಗಳನ್ನು ಸ್ಮರಿಸಬೇಕು. ನಮ್ಮ ಮಕ್ಕಳಿಗೆ ಅವರ ತ್ಯಾಗ ಮತ್ತು ತಪಸ್ಸಿನ ಸಂಕಲ್ಪದ ಬಗ್ಗೆ ತಿಳಿಸಿಕೊಡಬೇಕು”.. ಎಂದು ಶ್ರೀಶ್ರೀ ಗುರುಗಳು ಉಪನ್ಯಾಸ ಮಾಡಿದರು.
ಚಿಂತಾಮಣಿ ಮಠವೆಂದರೆ ಕಟ್ಟಡ ಅಲ್ಲ ಜಾಗವಲ್ಲ. ಮಠದ ಭಕ್ತರೇ ಮಠದ ಆಸ್ತಿ ಶ್ರೀ ಚಿಂತಾಮಣಿ ಮಠದ ಕಟ್ಟಡದ ಮೇಲೆ ಧರ್ಮಧ್ವಜ ಹಾರಿಸಲಾಗಿದೆ ಎನ್ನುವುದು ಸಾಂಕೇತಿಕ.ಮಠದ ಭಕ್ತರ ಮನಸಿನಲ್ಲಿ ಧ್ವಜ ಹಾರಬೇಕು.ಸನಾತನ ಧರ್ಮದ ಕೆಲವು ಸರಳ ಆಚರಣೆಗಳನ್ನು ಎಲ್ಲರೂ ಪಾಲಿಸಬೇಕು… ತನ್ಮೂಲಕ ಧರ್ಮ ಪ್ರಚಾರ – ಧರ್ಮ ಜಾಗೃತಿಯಾಗಬೇಕು ಎಂದು ತಿಳಿಸಿದರು.
Vijayadashami ಇತ್ತೀಚಿನ ದಿನಗಳಲ್ಲಿ ಸಮೂಹ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಯುವ ಪೀಳಿಗೆಯನ್ನು ಧರ್ಮದಿಂದ ವಿಮುಖರನ್ನಾಗಿಸಲು ಏನೇನು ದುಷ್ಕಾರ್ಯಗಳು ಇವೆಯೋ ಎಲ್ಲವನ್ನೂ ಮಾಡುತ್ತಿದ್ದಾರೆ. ನಾವು ನಮ್ಮ ಮನೆಯ ಮಕ್ಕಳಿಗೆ ಸನಾತನ ಧರ್ಮದ ಸಂಸ್ಕಾರ ಕೊಡದೆಹೋದರೆ ಇನ್ನೆರಡು ತಲೆಮಾರಿನಲ್ಲಿ ನಮ್ಮ ಮನೆಯ ಮಕ್ಕಳು ನಮ್ಮ ಧರ್ಮದವರಾಗಿ ಉಳಿದಿರುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಶ್ರೀ ಗುರುಗಳು ನೀಡಿದರು.
ಭಗವಾನ್ ಶ್ರೀಧರ ಸ್ವಾಮಿಗಳು ತಪಸ್ಸಿಗೆ ಹೊರಡುವ ಮುನ್ನ ವಿಜಯದಶಮಿಯಂದು ತಮ್ಮ ಗೆಳೆಯರ ಜೊತೆಕೂತು ಹಬ್ಬದೂಟ ಮಾಡುತ್ತಾರೆ. ಅದರ ಸ್ಮರಣಾರ್ಥವಾಗಿ, ಆ ಘಟನೆಯನ್ನು ಶ್ರೀ ಮಠದ ಭಕ್ತರಿಗೆ ತಿಳಿಸಿ ಶ್ರೀ ಗುರುಗಳು ಇಂದು ಭಕ್ತರೊಂದಿಗೆ ಸಹ ಭೋಜನ ಮಾಡಿದರು.