Sunday, November 24, 2024
Sunday, November 24, 2024

Aam Admi Party ಅಂತ್ಯ ಸಂಸ್ಕಾರಕ್ಕೆ ಶ್ಮಶಾನ ಸ್ಥಳಕ್ಕೆ ಬೇಡಿಕೆ &ಸೂಕ್ತ ನಿರ್ವಹಣೆಗೆ ಎಎಪಿ ಹೋರಾಟ

Date:

Aam Admi Party ಸ್ವಾತಂತ್ರ್ಯ ಲಭಿಸಿ ಎಪ್ಪತ್ತೈದು ವರ್ಷ ಪೂರೈಸಿದ್ದರೂ ಜಿಲ್ಲೆಯ ಹಲವು ಮಂದಿಗೆ ವಾಸಿಸಲು ಸೂರಿಲ್ಲ, ಸಾಮಾನ್ಯರಾಗಿ ಜನಿಸಿ, ಕೊನೆಯ ಸಮಯದಲ್ಲಿ ಅಂತ್ಯಕ್ರಿಯೆಗೂ ಪರದಾಡುವಂ ತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಆಮ್‌ಆದ್ಮಿ ಪಕ್ಷದ ಮಾಧ್ಯಮ ಪ್ರತಿನಿಧಿ ಡಾ|| ಕೆ. ಸುಂದರ ಗೌಡ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ದೇಶದಲ್ಲಿ ಬಡಜನತೆ ಇಂದಿಗೂ ಬಡವ ರಾಗಿ ಉಳಿದು, ಬಡವರಾಗಿಯೇ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಪ್ರಜಾಪ್ರಭುತ್ವದ ಆಡಳಿತ ನಡೆಸಿರುವ ರಾಜಕೀಯ ಪಕ್ಷಗಳಿಗೆ ಮಹಾದೊಡ್ಡ ಕೊಡುಗೆ ಸಲ್ಲುತ್ತದೆ ಎಂದು ಟೀಕಿಸಿದ್ದಾರೆ.

ಸಾಮಾನ್ಯಜನತೆಗೂ ಆಶ್ರಯವನ್ನು ನೀಡದ ಸರ್ಕಾರಗಳು ಸಾವಿನ ಬಳಿಕ ಸ್ಮಶಾನವನ್ನು ಒದಗಿಸುತ್ತಿಲ್ಲ. ಇದ ರಿಂದ ಮತ್ತೊಬ್ಬರ ಹಂಗಿನಲ್ಲಿ ಅಂತ್ಯಕ್ರಿಯೆಯನ್ನು ಮಾಡಬೇಕಾಗಿರುವುದು ಮಾನವನ ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕವಾಗಿದೆ ಎಂದು ತಿಳಿಸಿದ್ದಾರೆ.

Aam Admi Party ಇಂತಹ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಎಎಪಿ ಆಶ್ರಯ ಹಾಗೂ ಸ್ಮಶಾನವಿಲ್ಲದ ಗ್ರಾಮ ಪಂಚಾಯಿತಿ ಗಳಿಗೆ ಸರ್ಕಾರಿ ಜಾಗದಲ್ಲಿ ಸ್ಮಶಾನ ನಿರ್ಮಾಣವನ್ನು ಕಾನೂನುಬದ್ಧವಾಗಿ ಒದಗಿಸುವುದು, ಗಿಡಗಳನ್ನು ನೆಡು ವುದು, ತಂತಿಬೇಲಿ ಹಾಗೂ ರಕ್ಷಣೆಯನ್ನು ಆ ಪ್ರದೇಶಕ್ಕೆ ನಿರ್ವಹಿಸುವ ಸಲುವಾಗಿ ಬಡವನ ಕೊನೆಯ ಪವಿತ್ರಯಾ ತ್ರೆಯ ಗೌರವಕ್ಕೆ ಹೋರಾಡುತ್ತಿದೆ ಎಂದಿದ್ದಾರೆ.
ಜಿಲ್ಲೆಯ ಆಯಾ ಜನಾಂಗದ ಜಾತಿ ಪದ್ಧತಿಯ ಶವಸಂಸ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಎಎಪಿ ಆಂದೋಲನವನ್ನು ಕೈಗೆತ್ತಿಕೊಂಡಿದೆ. ಸಾರ್ವಜನಿಕರ ನೆಮ್ಮದಿ ಬದುಕಿನ ಬುನಾದಿಯನ್ನು ಹಾಕುವ ಮೂಲಕ ಪ್ರಜಾಪ್ರಭುತ್ವದ ಮಹತ್ವವಾದ ಬೇಡಿಕೆಗೆ ಒತ್ತು ನೀಡಲು ಹಾಗೂ ಮಾನವ ಹಕ್ಕುಗಳಿಗಾಗಿ ಜನತೆ ಎಎಪಿಗೆ ಕೈಜೋಡಿಸಿ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ತಮ್ಮ ಮತವನ್ನು ಮಕ್ಕಳ ಆರೋಗ್ಯ, ವಿದ್ಯಾಭ್ಯಾಸಕ್ಕೆ ಸ್ಪಂದಿಸುವವರಿಗೆ ನೀಡುವ ಮುಖಾಂತರ ಭ್ರಷ್ಟಾಚಾರದ ಪರಿವರ್ತನೆಯನ್ನು ಕಂಡುಕೊಳ್ಳಬೇಕಾಗಿರುವುದು ಪ್ರತಿ ಯೊಬ್ಬರ ಮೂಲ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...