Smart City Shivamogga ರಾಷ್ಟ್ರೀಯ ಹೆದ್ದಾರಿ-13 ಚಿತ್ರದುರ್ಗ-ಶಿವಮೊಗ್ಗ ನಡುವಿನ 525.00 ಕಿ.ಮೀ ನಲ್ಲಿ ಎಲ್‍ಸಿ-46 ರಲ್ಲಿ ಟೂ ಲೇನ್ ಸ್ಟೀಲ್ ಕಾಂಪೋಸಿಟ್ ಆರ್‍ಓಬಿ ನಿರ್ಮಾಣ ಮಾಡಲಿರುವುದರಿಂದ ದಿ: 01-10-2023 ರಿಂದ 08-11-2023 ರವರೆಗೆ ವಾಹನಗಳು ಕೆಳಕಂಡ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಆದೇಶಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಅಧಿಸೂಚನೆ ಹೊರಡಿಸಿದ್ದಾರೆ.
ಶಿವಮೊಗ್ಗದಿಂದ-ಚಿತ್ರದುರ್ಗಕ್ಕೆ ಹೋಗುವ ವಾಹನಗಳು ಶಿವಮೊಗ್ಗದಿಂದ ಚಿತ್ರದುರ್ಗ ಕಡೆ ಹೋಗುವ ಬೈಕು, ಕಾರು ಹಾಗೂ ಎಲ್‍ಎಂವಿ ವಾಹನಗಳು ಶಾಂತಮ್ಮ ಲೇ ಔಟ್ ಮುಖಾಂತರ ಮತ್ತು ಭಾರೀ ವಾಹನಗಳಾದ ಬಸ್,ಲಾರಿ, ಟ್ರಕ್‍ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಹೊನ್ನಾಳಿ ರಸ್ತೆ, ಹೊಳಲೂರು ಮಾರ್ಗವಾಗಿ ಹೊಳಲೂರು, ತುಂಗಭದ್ರ ಹೊಸ ಸೇತುವೆ, ಸನ್ಯಾಸಿ ಕೋಡಮಗ್ಗಿ, ಹೊಳೆಹೊನ್ನೂರು ಮುಖಾಂತರ ಅಥವಾ ಎಂ.ಆರ್.ಎಸ್ ಸರ್ಕಲ್, ಹರಿಗೆ, ಮಾಚೇನಹಳ್ಳಿ, ಭದ್ರಾವತಿ ಮುಖೇನ ಚಲಿಸುವುದು.
ಚಿತ್ರದುರ್ಗದಿಂದ-ಶಿವಮೊಗ್ಗಕ್ಕೆ ಹೋಗವು ವಾಹನಗಳು ಶಿವಮೊಗ್ಗ ನಗರದ ಶಾಂತಮ್ಮ ಲೇಔಟ್‍ನಲ್ಲಿ ಹಾದು ಹೋಗುವ ರಸ್ತೆಯುವ ಚಿಕ್ಕ ರಸ್ತೆಯಾಗಿದ್ದು ಸದರಿ ರಸ್ತೆಯಲ್ಲಿ ಭಾರೀ ವಾಹನಗಳಾದ ಬಸ್, ಲಾರಿ, ಟ್ರಕ್‍ಗಳು ತಿರುವು ಪಡೆದುಕೊಳ್ಳಲು ಮತ್ತು ಚಲಿಸಲು ಸಾಧ್ಯವಾಗುವುದಿಲ್ಲ. ಚಿಕ್ಕ ರಸ್ತೆಯಾಗಿರುವುದರಿಂದ ಪದೇ ಪದೇ ಟ್ರಾಫಿಕ್ ಉಂಟಾಗುವ ಮತ್ತು ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ.
Smart City Shivamogga ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬರುವ ವಾಹನಗಳು ಫ್ಲೈಓವರ್‍ನ ಸರ್ವಿಸ್ ರಸ್ತೆಯಲ್ಲಿ ಚಲಿಸುವುದು.