District Legal Services Authority ಪ್ರಶಿಕ್ಷಾರ್ಥಿಗೆ ತರಬೇತಿ ನೀಡುವ ಶಾಲೆಗಳಿಗೆ ಸಮರ್ಪಕವಾಗಿ ಕಾನೂ ನು ತಿಳುವಳಿಕೆಯ ವಿಚಾರಗಳನ್ನು ಮುಟ್ಟಿಸುವ ಕಾರ್ಯಕ್ಕೆ ಮುಂದಾದರೆ ದೇಶವು ಸುಭೀಕ್ಷವಾಗಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಗೌರವ ಹಿರಿಯ ಸಿವಿಲ್ ನ್ಯಾಯಾಧೀಶ ಎ.ಎಸ್.ಸೋಮ ಹೇಳಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ ಎಂ.ಎಲ್.ಎಂ.ಎನ್. ಬಿಡ್ ಕಾಲೇಜು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಅಪರಾಧ ತಡೆಗಟ್ಟು ವಿಕೆಯಲ್ಲಿ ಶಿಕ್ಷಕರ ಪಾತ್ರ’ ಕುರಿತ ಕಾರ್ಯಕ್ರಮವನ್ನು ಗುರುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿಯಲ್ಲಿರುವವರು ಮಕ್ಕಳನ್ನು ಅಪರಾಧವೆಸಗದಂತೆ ಬಾಲ್ಯದಿಂದಲೇ ಸನ್ನಡತೆಯತ್ತ ಕೊಂಡೊ ಯ್ಯುವ ಮಹತ್ತರ ಜವಾಬ್ದಾರಿ ಹೊಂದಿರುತ್ತಾರೆ. ಆ ನಿಟ್ಟಿನಲ್ಲಿ ಪ್ರಶಿಕ್ಷಾರ್ಥಿಗಳಿಗೆ ತರಬೇತಿ ಸಮಯದಲ್ಲಿ ಹೆಚ್ಚು ಕಾನೂನು ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳಿಗೆ ಶಾಲಾ ಆಡಳಿತ ಮಂಡಳಿ ಮುಂದಾದರೆ ಉತ್ತಮ ಶಿಕ್ಷಕರನ್ನು ನೀಡಲು ಸಾಧ್ಯ ಎಂದರು.
ಇತ್ತೀಚೆಗೆ ಶಾಲಾ-ಕಾಲೇಜುಗಳಲ್ಲಿ ನೈತಿಕ ಶಿಕ್ಷಣವು ಮರೆಯಾಗುತ್ತಿದೆ. ಇದನ್ನು ಸರಿದೂಗಿಸುವ ಕೆಲಸದಲ್ಲಿ ಶಿಕ್ಷಕರು ಮುಂದಾಗಬೇಕು. ಶಾಲೆಗಳು ಭವಿಷ್ಯ ಭದ್ರಬುನಾದಿ ಸ್ಥಾಪಿಸುವ ಕಾರ್ಖಾನೆಯಾಗಿದ್ದು ಆ ನಿಟ್ಟಿನಲ್ಲಿ ಶಿಕ್ಷಕ ರನ್ನು ದೃಷ್ಟಿಸುವ ಸಂಸ್ಥೆಗಳು ಅತ್ಯಂತ ಸೂಕ್ಷö್ಮತೆಯಿಂದ ಕೂಡಿರಬೇಕು. ಗುಣಮಟ್ಟದ ಶಿಕ್ಷಣ ಒದಗಿಸಿಕೊಡಬೇಕು ಎಂದು ಹೇಳಿದರು.
District Legal Services Authority ಶಿಕ್ಷಕರು ಕೇವಲ ಕಾಯಕಕ್ಕೆ ಸೀಮಿತರಾಗದೇ ಸಮಾಜದಲ್ಲಿ ಉತ್ತಮ ಮಕ್ಕಳನ್ನು ರೂಪಿಸುವ ಶಕ್ತಿಯನ್ನು ಹೊಂದಿರಬೇಕು. ಪ್ರಸ್ತುತ ಬಿಡ್ ಕಾಲೇಜಿನಿಂದ ಬಂದಿರುವ ಪ್ರಶಿಕ್ಷಾರ್ಥಿಗಳು ಭವಿಷ್ಯದಲ್ಲಿ ಶಿಕ್ಷಕರಾಗಲಿದ್ದು ಕಾರಾ ಗೃಹದಲ್ಲಿ ಬಂಧಿಗಳಾಗಿರುವವರ ಸರಿ, ತಪ್ಪುಗಳನ್ನು ಅರಿಯುವ ಸಲುವಾಗಿ ಕರೆತರಲಾಗಿದ್ದು ಇದನ್ನು ಮನಗಂಡು ಸಮಾಜಕ್ಕೆ ಪೂರಕವಾಗಿ ಮುನ್ನೆಡೆಯಬೇಕು ಎಂದರು.
ಮಲೆನಾಡು ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ರೋಗಿಗಳಿಗೆ ಕಾಯಿಲೆ ಬರುವ ಮುನ್ನವೇ ಚಿಕಿತ್ಸೆ ಒದಗಿಸುವ ಮಾದರಿಯಲ್ಲೇ ಶಿಕ್ಷಕರು ಸಮಾಜಕ್ಕೆ ಅಪರಾಧವೆಸಗುವ ಮೊದಲೇ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಿದರೆ ಯಾರೋಬ್ಬರು ಕೂಡಾ ಅಪರಾಧ ನಂಟನ್ನು ಹೊಂದದೇ ಸತ್ಪçಜೆಗಳಾಗಲು ಸಾದ್ಯ ಎಂದು ತಿಳಿಸಿದರು.
ಸಮಾಜದಲ್ಲಿ ಅಪರಾಧ ಎಂಬುದು ನಾನಾಕಾರಣಗಳಿಂದಾಗಲಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದ್ದು ಮಕ್ಕಳಿಗೆ ಸರಿ ದಾರಿಯನ್ನು ತೋರುವ ಮುಖಾಂತರ ಉತ್ತಮ ನಡತೆಯತ್ತ ಮುನ್ನಡೆಸಲು ಪ್ರೇರೇಪಿಸಬೇಕು ಎಂದರು.
ಕಾರಾಗೃಹ ಬಂಧಿಗಳಲ್ಲಿ ಯಾವುದೇ ಕೀಳರಿಮೆ ಹೊಂದಬಾರದು. ಸ್ವಾತಂತ್ರö್ಯ ಪೂರ್ವದಿಂದಲೇ ಅನೇಕ ಹೋರಾಟಗಾರರು, ರಾಜಕೀಯ ಮುಖಂಡರು ಸೆರೆವಾಸ ಅನುಭವಿಯೇ ಬಳಿಕ ದೊಡ್ಡವ್ಯಕ್ತಿಗಳಾಗಿ ರೂಪುಗೊಂ ಡವರು. ಆ ನಿಟ್ಟಿನಲ್ಲಿ ಅಪರಾಧ ಆರೋಪಹೊತ್ತಿರುವ ಬಂಧಿಗಳು ಬಿಡುಗಡೆ ಬಳಿಕ ಸಾತ್ವಿಕ ಜೀವನ ನಡೆಸಿ ಸಮಾ ಜಕ್ಕೆ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಮಾತನಾಡಿ ಅಪರಾಧ ತಡೆಗಟ್ಟುವಿಕೆಯಲ್ಲಿ ಶಿಕ್ಷಕರ ಪಾತ್ರ ಕುರಿತು ಕಾರ್ಯಕ್ರಮ ಆಯೋಜಿಸಿದೆ. ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ವಾಸ್ತವತೆ ಅತ್ಯಂತ ಅವಶ್ಯಕ. ಕೇವಲ ಕಲ್ಪನಾ ಲೋಕದಲ್ಲಿದ್ದು ವಾಸ್ತವತೆ ಮರೆತರೆ ಯಾವುದೇ ಕಾರಣಕ್ಕೂ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಸ್ತುತ ಕಾರಾಗೃಹಕ್ಕೆ ಆಗಮಿಸಿರುವ ಬಿಎಡ್ ಕಾಲೇಜಿನ ಪ್ರಶಿಕ್ಷಾರ್ಥಿಗಳು ಕಾರಾಗೃಹದ ಪರಿಕಲ್ಪನೆ ಹೊಂದಿ ರಲು ಸಾಧ್ಯವಿಲ್ಲ. ಸಿನಿಮಾ ಅಥವಾ ಇತರರÀ ಮಾತುಗಳನ್ನು ನಂಬಿಕೊಂಡು ಸಮಾಜ ಬದಲಾವಣೆ ಅಸಾಧ್ಯ. ಇದೀಗೂ ಕಾರಾಗೃಹದಲ್ಲಿರುವ ಬಂಧಿಗಳು ಅಪರಾಧಿಗಳಲ್ಲ. ಆರೋಪಗಳನ್ನು ಹೊತ್ತು ಕಾರಾಬಂಧಿಗಳಾಗಿದ್ದು ನ್ಯಾಯಾಲಯ ತೀರ್ಪಿನ ಬಳಿಕ ಅಪರಾಧಿಗಳಾಗುತ್ತಾರೆ ಎಂದು ತಿಳಿಸಿದರು.
ಇದೇ ವೇಳೆ ಎಂ.ಎಲ್.ಎಂ.ಎನ್. ಬಿಎಡ್ ಕಾಲೇಜಿನ ಸುಮಾರು ೮೮ ಪ್ರಶಿಕ್ಷಾರ್ಥೀಗಳು ಕಾರಾಗೃಹ ಭೇಟಿ ನೀಡಿ ಗ್ರಂಥಾಲಯ, ಅಡುಗೆ ಕೋಣೆ, ಕಾರಾಬಂಧಿಗಳ ಕೊಠಡಿ ಹಾಗೂ ಗೋಡೆಗಳಲ್ಲಿರುವ ಬರಹಗಳನ್ನು ವೀಕ್ಷಿಸಿ ದರು.
ಈ ಸಂದರ್ಭದಲ್ಲಿ ಮಲೆನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಕೇಶವಮೂರ್ತಿ, ಎಂ.ಎಲ್.ಎಂ.ಎನ್. ಬಿಎಡ್ ಕಾಲೇಜಿನ ಪ್ರಾಂಶುಪಾಲ ಡಾ|| ಗಣೇಶ್, ಜೈಲರ್ ಎಂ.ಕೆ.ನೆಲಧರಿ, ವಕೀಲ ನಟರಾಜ್ ಮತ್ತಿತರರು ಹಾಜರಿದ್ದರು.