Ministry of Finance ಕೇಂದ್ರ ಸರ್ಕಾರವು ಐದು ವರ್ಷಗಳ ನಿಶ್ಚಿತ ಠೇವಣಿ ಮೇಲಿನ ಬಡ್ಡಿ- ದರವನ್ನು ಡಿಸೆಂಬರ್ ತ್ರೈಮಾಸಿಕಕ್ಕೆ ಶೇ. 6.5 ರಿಂದ ಶೇ 6.7ಕ್ಕೆ ಹೆಚ್ಚಳ ಮಾಡಿದೆ. ಆದರೆ, ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಕೇಂದ್ರ ಹಣಕಾಸು ಸಚಿವಾಲಯವು ಹೊರಡಿಸಿರುವ ಪ್ರಕಟಣೆಯಂತೆ, ಉಳಿತಾಯ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 4 ಮತ್ತು ಒಂದು ವರ್ಷ ಅವಧಿ ಠೇವಣಿಯ ಬಡ್ಡಿದರವನ್ನು ಶೇ 6.9ರಷ್ಟರಲ್ಲೇ ಉಳಿಸಿಕೊಳ್ಳಲಾಗಿದೆ.
ಸೆಪ್ಟೆಂಬರ್ , ಮಾಸಿಕದಲ್ಲಿಯೂ ಇದೇ ಪ್ರಮಾಣದ ಬಡ್ಡಿದರ ಇತ್ತು.
Ministry of Finance ಎರಡು ಮತ್ತು ಮೂರು ವರ್ಷಗಳ ಅವಧಿ ಠೇವಣಿಗಳ ಮೇಲಿನ ಬಡ್ಡಿದರವು ಶೇ 5ರಷ್ಟು ಮತ್ತು ಐದು ವರ್ಷಗಳ ಅವಧಿ ಠೇವಣಿ ಬಡ್ಡಿದರವು ಶೇ 7.5ರಷ್ಟೇ ಮುಂದುವರಿಯಲಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿದರದಲ್ಲಿಯೂ (ಶೇ 8.2) ಬದಲಾವಣೆ ಆಗಿಲ್ಲ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಶೇ 7.7) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯ ಬಡ್ಡಿದರದಲ್ಲಿಯೂ (ಶೇ 7.1) ಬದಲಾವಣೆ ಮಾಡಿಲ್ಲ. ಕಿಸಾನ್ ವಿಕಾಸ ಪ್ರಮಾಣ ಪತ್ರ (ಶೇ 7.5) ಮತ್ತು ಸಕನ್ಯಾ ಸಮೃದ್ಧಿ ಯೋಜನೆಯ (ಶೇ8) ಬಡ್ಡಿದರವೂ ಬದಲಾಗಿಲ್ಲ.