Karnataka Sangha Shivamogga ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಮಹಿಳೆಯರ ಪಾತ್ರವೂ ಸಹ ಹೆಚ್ಚು. ಅಂತಹವರಲ್ಲಿ ಡಾ.ನಿರುಪಮಾ ಸಹ ಒಬ್ಬರು. ತೆಲುಗು ಮಾತೃಭಾಷೆಯವರಾಗಿದ್ದರೂ ಸಹ ಕನ್ನಡದಲ್ಲಿ ಪ್ರಬುದ್ಧತೆಯನ್ನು ಸಾಧಿಸಿ, 118 ಕೃತಿಗಳನ್ನು ಕನ್ನಡಕ್ಕೆ ನೀಡಿರುವ ಬಹುಮುಖ್ಯ ಲೇಖಕಿಯರಲ್ಲಿ ಡಾ.ನಿರುಪಮಾ ಪ್ರಮುಖರಾಗಿದ್ದಾರೆ.
ಕನ್ನಡ ರಾಜ್ಯೋತ್ಸವ, ಕನ್ನಡ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಅತ್ಯುತ್ತಮ ಪ್ರಕಾಶಕಿ ಮುಂತಾದ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ನಿರುಪಮಾ ಭೌತಿಕವಾಗಿ ನಮ್ಮೊಡನೆ ಇಲ್ಲದಿದ್ದರೂ ಸಹ ತಮ್ಮ ಕೃತಿಗಳ ಮೂಲಕ ಸದಾ ಜೀವಿಸಿದ್ದಾರೆ.
ಇಂತಹ ಲೇಖಕಿಯ ಸಾಧನೆಗಳನ್ನು ಕುರಿತು ನಮ್ಮ ಕರ್ನಾಟಕ ಸಂಘ ಅವರ ಪುತ್ರ ಬಿ.ಆರ್.ರವೀಂದ್ರನಾಥ್ ಅವರ ಸಹಯೋಗದೊಡನೆ, “ನಿರುಪಮಾ ಸಾಹಿತ್ಯ ಸಂಭ್ರಮ” ಕಾರ್ಯಕ್ರಮವನ್ನು ಸೆ.30 ರಂದು ಶನಿವಾರ ಸಂಜೆ 5ಕ್ಕೆ ಸರಿಯಾಗಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಪ್ರಖ್ಯಾತ ಲೇಖಕಿ ಡಾ.ಸಂಧ್ಯಾ ರೆಡ್ಡಿಯವರು ನಿರುಪಮಾ ವ್ಯಕ್ತಿತ್ವ, ಸಾಹಿತ್ಯ ಮತ್ತು ಸಂಘಟನೆ ಕುರಿತಾಗಿ ಮಾತನಾಡಲಿದ್ದಾರೆ. ಅದೇ ರೀತಿ ಮತ್ತೋರ್ವ ಖ್ಯಾತ ಲೇಖಕಿ ಬೆಂಗಳೂರಿನ ವಿಜಯಲಕ್ಷ್ಮೀ ಕೆ.ಎಂ.ಅವರು ನಿರುಪಮಾ ಅವರ ಬರವಣಿಗೆಯ ದೃಷ್ಟಿ ಕುರಿತು ಮತ್ತು ನಮ್ಮ ಕರ್ನಾಟಕ ಸಂಘದ ಪೂರ್ವಾಧ್ಯಕ್ಷೆ, ಲೇಖಕಿ ವಿಜಯಾ ಶ್ರೀಧರ್ ಅವರು ನಿರುಪಮಾ ಅವರ ಮಕ್ಕಳ ಸಾಹಿತ್ಯ ಕುರಿತು ಮಾತನಾಡಲಿದ್ದಾರೆ.
ಬಿ.ಆರ್. ರವೀಂದ್ರನಾಥ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರ ರಾಜ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ.
Karnataka Sangha Shivamogga ಈ ಕಾರ್ಯಕ್ರಮಕ್ಕೆ ಆತ್ಮೀಯ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕರ್ನಾಟಕ ಸಂಘದ ಕಾರ್ಯದರ್ಶಿ ಪ್ರೊ.ಆಶಾಲತಾ ಅವರು ವಿನಂತಿಸಿದ್ದಾರೆ.