Wednesday, November 27, 2024
Wednesday, November 27, 2024

Shivamogga Hindu Mahasabha Ganapathi  ಹಿಂದು ಮಹಾ ಸಭಾ ಗಣಪತಿ ವೈಭವದ ಮೆರವಣಿಗೆಯೊಂದಿಗೆ ತುಂಗಾನದಿಯಲ್ಲಿ ಉಧ್ವಾಸನೆ

Date:

Shivamogga Hindu Mahasabha Ganapathi  ಶಿವಮೊಗ್ಗ ನಗರದಲ್ಲಿ ನಡೆದ ಹಿಂದೂ ಸಂಘಟನಾ ಮಹಾಮಂಡಳಿ ಪ್ರತಿಷ್ಠಾಪಿಸಿದ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ ಅತ್ಯಂತ ವೈಭಯುತವಾಗಿ ನಡೆದು ಶ್ರದ್ಧಾಪೂರ್ವಕವಾಗಿ ಗಣಪತಿಯ ಪ್ರತಿಮೆಯನ್ನ ತುಂಗಾನದಿಯಲ್ಲಿ ಉದ್ವಾಸನೆ ಮಾಡಲಾಯಿತು.

ಇಡೀ ಶಿವಮೊಗ್ಗ ನಗರವೇ ಕೇಸರಿಮಯವಾಗಿ ಕಂಗೊಳಿಸುತ್ತಿತ್ತು. ಶಿವಮೊಗ್ಗದ ಟೀ ಸೀನಪ್ಪ ಶೆಟ್ಟಿ ( ಗೋಪಿ ಸರ್ಕಲ್) ವೃತ್ತವು ಜನಸಾಗರದಿಂದ ತುಂಬಿ ತುಳುಕುತ್ತಿತ್ತು.

ಕಳೆದ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಹೆಚ್ಚಿನ ಸಂಖ್ಯೆಯ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಗೋಪಿ ಸರ್ಕಲ್ ನಲ್ಲಿ ಡಿಜೆ ವ್ಯವಸ್ಥೆ ವಯಸ್ಸಿನ ಮಿತಿ ಇಲ್ಲದೆ ಜನರು ಕುಣಿದು ಕುಪ್ಪಳಿಸಿದರು. ಜೈ ಶ್ರೀ ರಾಮ್, ಗಣಪತಿ ಬಪ್ಪ ಮೋರಿಯ, ಜೈ ಗಣೇಶ ಹೀಗೆ ಅನೇಕ ಘೋಷಣೆಗಳು ಮೊಳಗಿದವು.

ಯುವಕ ಯುವತಿಯರು ಕೇಸರಿ ಶಾಲುಗಳನ್ನ ತೊಟ್ಟು ಡಿಜೆ ಹಾಡಿಗೆ ಹೆಜ್ಜೆ ಹಾಕಿದರು.

Shivamogga Hindu Mahasabha Ganapathi  ಉತ್ಸವದ ಭದ್ರತೆಗೆ ಖಾಕಿ ಸರ್ಪಗಾವಲಾಗಿತ್ತು. ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಪ್ರಮುಖ ಸ್ಥಳಗಳಲ್ಲಿ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿತ್ತು. ಉತ್ಸವದ ಭದ್ರತೆಗೆ 5 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 40 ಪೊಲೀಸ್ ನಿರೀಕ್ಷಕರು, 2500 ಎ ಎಸ್ ಐ, ನೂರು ವಿಡಿಯೋ ಕ್ಯಾಮೆರಾ ಗಳು ಹಾಗೂ ಎಂಟು ಡ್ರೋನ್ ಕ್ಯಾಮೆರಾ ಗಳನ್ನು ಸಾರ್ವಜನಿಕರ ಭದ್ರತೆಗೆಂದು ಈ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Constitution Day ಸಂವಿಧಾನ ಪೀಠಿಕೆಯನ್ನು ಪ್ರತಿಷ್ಠಾಪಿಸುವ ಕೆಲಸವನ್ನ ರಾಜ್ಯ ಸರ್ಕಾರ ಮಾಡುತ್ತಿದೆ- ಮಧು ಬಂಗಾರಪ್ಪ

Constitution Day ಭಾರತೀಯರೆಲ್ಲರೂ ಒಂದೇ ಎಂಬ ಐಕ್ಯತೆ, ಸಮಗ್ರತೆ, ಭಾವೈಕ್ಯತೆ...

K.H. Muniyappa ನ.28ರೊಳಗೆ ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ವಿತರಿಸಲು ಅಧಿಕಾರಿಗಳಿಗೆ ಸೂಚನೆ- ಸಚಿವ ಕೆ ಎಚ್. ಮುನಿಯಪ್ಪ

K.H. Muniyappa ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಗಳ ಆದೇಶದಂತೆ...