World Tourism Day ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಪ್ರವಾಸೋದ್ಯಮವು ದೇಶದ ಪ್ರಗತಿಗೆ ಮತ್ತು ಆರ್ಥಿಕತೆಗೆ ಸಹಾಯಕವಾಗಿದೆ. 1980 ರಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೈಟೆಡ್ ನೇಶನ್ಸ್ ವರ್ಲ್ಡ್ ಟೂರಿಸಂ ಆರ್ಗನೈಜೇಷನ್ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಸೆಪ್ಟೆಂಬರ್ 27ರಂದು ಆಚರಿಸಲು ಆರಂಭಿಸಿತು. ಅಂದಿನಿಂದ ಪ್ರತಿ ವರ್ಷವೂ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಭಾರತದಲ್ಲಿ ಪ್ರವಾಸೋದ್ಯಮ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಭಾರತವು ಇಂದು ತನ್ನ ವಿಶಿಷ್ಟ ಪ್ರವಾಸೋದ್ಯಮ ಉತ್ಪನ್ನಗಳಾದ ಸಾಂಸ್ಕೃತಿಕ, ಪ್ರಕೃತಿ, ಐತಿಹಾಸಿಕ, ಕ್ರೀಡೆ ವೈದ್ಯಕೀಯ ಮತ್ತು ಪರಿಸರ ಪ್ರವಾಸೋದ್ಯಮಗಳಿಂದಾಗಿ ಜಗತ್ತಿನಾದ್ಯಂತ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಭಾರತವು ಪ್ರವಾಸಿಗರಿಗೆ ಎತ್ತರದ ಬೆಟ್ಟಗಳು, ಇತಿಹಾಸಿಕ ಸ್ಥಳಗಳು, ಸಮುದ್ರ ತೀರಗಳು, ಅಪರೂಪದ ಸುಂದರವಾದ ಪ್ರಾಣಿ ಪಕ್ಷಿಗಳು ಇವುಗಳನ್ನು ಒಳಗೊಂಡಿರುವುದರಿಂದ ಪ್ರವಾಸ ಸಿಗರನ್ನ ತನ್ನ ಕೈಬೀಸಿ ಕರೆಯುತ್ತಿದೆ. ಹಾಗೆಯೇ ಕರ್ನಾಟಕವು ಅನೇಕ ಪ್ರವಾಸಿ ತಾಣಗಳನ್ನು ಒಳಗೊಂಡಿರುವುದರಿಂದ ತನ್ನತ್ತ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ತಾಣಗಳು ಕೂಡ ಆಗಿವೆ.
ಪ್ರವಾಸವು ನಮಗೆ ಕೇವಲ ಮನೋರಂಜನೆ ಮಾತ್ರವಲ್ಲದೆ ನಮ್ಮ ಜ್ಞಾನವನ್ನು ಹೆಚ್ಚಿಸುವ ಉಪಯುಕ್ತ ಕಾರ್ಯವಾಗಿದೆ. ಪ್ರವಾಸೋದ್ಯಮವು ರಾಜ್ಯದ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡುತ್ತದೆ. ಅದರಲ್ಲೂ ಆಕರ್ಷಕ ತಾಣ, ಐತಿಹಾಸಿಕ ಸ್ಥಳಗಳಿಂದ ಸೆಳೆಯುವ ನೆಚ್ಚಿನ ಕೇಂದ್ರವಾಗಿದೆ.
ಅಪರೂಪದ ಪ್ರಾಕೃತಿಕ ಸಂಪನ್ಮೂಲ, ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಕರ್ನಾಟಕ ಅದ್ಭುತ ಪ್ರವಾಸದ ಅನುಭವವನ್ನು ನೀಡುವ ತಾಣದಲ್ಲಿ ಒಂದಾಗಿದೆ.
World Tourism Day ನಮ್ಮ ಕೆ ಲೈವ್ ಬಳಗದ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು…