Sunday, November 24, 2024
Sunday, November 24, 2024

Gowri Ganesha Festival ಯುವಪೀಳಿಗೆಗೆ ನಮ್ಮ ಸಂಸ್ಕೃತಿ ಪರಂಪರೆ ಪರಿಚಯಿಸಬೇಕು- ವಿಜಯ್ ಕುಮಾರ್

Date:

Gowri Ganesha Festival ಜಾನಪದ ಸಂಸ್ಕೃತಿ ಸಾವಿರಾರು ವರ್ಷದ ಇತಿಹಾಸ ಹೊಂದಿದ್ದು, ನಮ್ಮ ಕಲೆ ಸಂಸ್ಕೃತಿ ಉಳಿಸುವ ಕಾರ್ಯ ಹಾಗೂ ಯುವ ಪೀಳಿಗೆಗೆ ಸಂಸ್ಕೃತಿ ಪರಂಪರೆ ಪರಿಚಯಿಸುವ ಅವಶ್ಯಕತೆ ಇದೆ ಎಂದು ರೋಟರಿ ಮಾಜಿ ಸಹಾಯಕ ಗವರ್ನರ್, ಗಾಯಕ ಜಿ.ವಿಜಯ್‌ಕುಮಾರ್ ಹೇಳಿದರು.

ಶಿವಮೊಗ್ಗದ ಬಸವೇಶ್ವರ ನಗರ 2ನೇ ಹಂತದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಹಿಳೆಯರು, ಮಕ್ಕಳು ಹಾಗೂ ಪುರುಷರಿಗೆ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡಾವಣೆಯಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವುದರಿಂದ ಪರಸ್ಪರ ಒಡನಾಟ ವಿಶ್ವಾಸ ವೃದ್ಧಿಯಾಗುತ್ತದೆ. ಒಂದು ಒಳ್ಳೆಯ ಸಂಘಟನೆ ಬೆಳವಣಿಗೆ ಹೊಂದುತ್ತದೆ. ಸಂಘಟನೆಯಿಂದ ಬಡಾವಣೆಯ ಅಭಿವೃದ್ಧಿ ಕೆಲಸಗಳು ಸುಲಲಿತವಾಗಿ ಸಾಗುತ್ತದೆ. ಆದ್ದರಿಂದ ಮೊದಲು ನಮ್ಮ ನಮ್ಮ ಬಡಾವಣೆಗಳು ಸದೃಢ ಆಗಬೇಕು ಎಂದು ತಿಳಿಸಿದರು.

ಬಸವೇಶ್ವರ ನಗರ ಎರಡನೇ ಹಂತದ ನಿವಾಸಿಗಳ ಸಂಘದ ಅಧ್ಯಕ್ಷ ಜೇತೇಂದ್ರ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಹಾಗೂ ಮಾನಸಿಕ ನೆಮ್ಮದಿ ತರುತ್ತದೆ. ಸಾರ್ವಜನಿಕರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಬೇಕು ಎಂದರು.

ಬಸವೇಶ್ವರ ನಗರ 2ನೆ ಹಂತದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆ, ಫ್ಯಾಶನ್ ಶೋ, ನೃತ್ಯ, ಹಾಡುಗಾರಿಕೆ, ಗ್ರಾಮೀಣ ಕನ್ನಡ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Gowri Ganesha Festival ಇದೇ ಸಂದರ್ಭದಲ್ಲಿ ಜಿ.ವಿಜಯ್‌ಕುಮಾರ್ ಅವರು ಅನೇಕ ಜಾನಪದ ಗೀತೆಗಳು, ಹಳೆಯ ಚಿತ್ರಗೀತೆಗಳು, ತತ್ವಪದಗಳು, ಶಾಯಿರಿ ಹಾಗೂ ಜೋಕ್ಸ್ ಗಳಿಂದ ಅಪಾರ ಜನರನ್ನು ಮೆಚ್ಚಿಸಿದರು. ಬಡಾವಣೆ ಅಧ್ಯಕ್ಷರು ಕಾರ್ಯದರ್ಶಿ, ಪದಾಧಿಕಾರಿಗಳು ಜಿ.ವಿಜಯ್ ಕುಮಾರ್ ದಂಪತಿಗಳಿಗೆ ಅಭಿನಂದನೆ ಸಲ್ಲಿಸಿ ಗೌರವಿಸಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಬಸವರಾಜ್, ಭಜಂತ್ರಿ ಸುರೇಶ್, ನಿರ್ದೇಶಕರಾದ ಡಾ. ಶರತ್, ಡಾ. ಲಿಂಗರಾಜ್, ದೇವರಾಜ್, ಕೊಟ್ರೇಶ್, ರಾಜೇಶ್, ಪ್ರದೀಪ್, ರುದ್ರಪ್ಪ, ಡಾ. ಕಲ್ಲೇಶ್, ವಲ್ಸರಾಜ್, ಇನ್ನರ್ ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...