Monday, November 25, 2024
Monday, November 25, 2024

University of Agricultural and Horticultural Sciences Shimoga ಇರುವಕ್ಕಿಯಲ್ಲಿ ಇಂಡಸ್ಟ್ರಿಯಲ್ ಅಕಾಡೆಮಿಯಾ ಕಾನ್ ಕ್ಲೇವ್

Date:

University of Agricultural and Horticultural Sciences Shimoga ಕೆ.ಎಸ್.ಎನ್.ಯು.ಎ.ಹೆಚ್.ಎಸ್, ಇರುವಕ್ಕಿಯಲ್ಲಿ ಇಂಡಸ್ಟ್ರಿ-ಅಕಾಡೆಮಿಯಾ ಕಾನ್ ಕ್ಲೇವ್ 1.0
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಮುಖ್ಯ ಆವರಣ ಇರುವಕ್ಕಿಯಲ್ಲಿ ದಿನಾಂಕ 20-9-2023 ರಂದು ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಪ್ರಾಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ ಕೃಷಿ ಆಧಾರಿತ/ಪೂರಕ ಕೈಗಾರಿಕೆಗಳು ಮತ್ತು ಕೃಷಿ ಸಂಬಂದಿತ ವಿದ್ಯಾಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಹಾಗೂ ಕೃಷಿ ಸಂಶೋಧನಾ ಕೇಂದ್ರಗಳ ನಡುವೆ ಸಂಬಂಧ ಬೆಸೆಯಲು “ಇಂಡಸ್ಟ್ರೀ ಅಕಾಡೆಮಿಯಾ ಕಾಂಕ್ಲೇವ್ ಕಾರ‍್ಯಗಾರವನ್ನು ಆಯೋಜಿಸಲಾಗಿದೆ.

ಈ ಕಾರ‍್ಯಗಾರವನ್ನು ಆರ್.ಸಿ ಅರ‍್ವಾಲ್, ಉಪನರ‍್ದೇಶಕರು(ಶಿಕ್ಷಣ), ಭಾರತೀಯ ಕೃಷಿ ಅನುಸಂದಾನ ಪರಿಷತ್ , ನವದೆಹಲಿ ಇವರು ಉದ್ಘಾಟಿಸಲಿದ್ದಾರೆ.

ಕೃಷಿ /ಕೃಷಿ ಸಂಬಂಧಿತ ಪದವಿದರರು ಹಾಗೂ ಶಿಕ್ಷಕರನ್ನು ಪ್ರಸ್ತುತ ಕೈಗಾರಿಕೆಗಳ ಅವಶ್ಯಕತೆಗೆ ಅನುಗುಣವಾಗಿ ಸಜ್ಜುಗೊಳಿಸುವುದು,
ಕೈಗಾರಿಕೆಗಳು ಹಾಗೂ ವಿದ್ಯಾ\ಸಂಶೋಧನಾ ಸಂಸ್ಥೆಗಳು ಪರಸ್ಪರ ಬೆಂಬಲಿಸಲು ಇರುವ ಅವಕಾಶಗಳು, ವಿಶ್ವವಿದ್ಯಾನಿಯಗಳು ಅಭಿವೃದ್ದಿ ಪಡಿಸಿದ ತಾಂತ್ರಿಕತೆಗಳನ್ನು ವಾಣಿಜ್ಯೀಕರಣಗೊಳಿಸುವುದು ಹಾಗೂ ಕೈಗಾರಿಕೆಗಳಿಗೆ ನುರಿತ ಹಾಗೂ ಮಾನವ ಸಂಪನ್ಮೂಲಗಳನ್ನು ಒದಗಿಸುವುದು, ಕಾರ‍್ಯಕ್ರಮದ ಮೂಲ ಉದ್ಧೇಶವಾಗಿದೆ.

University of Agricultural and Horticultural Sciences Shimoga ಸದರಿ ಕಾರ‍್ಯಗಾರದಲ್ಲಿ ಕೃಷಿಗೆ ಸಂಬಂಧಿಸಿದ ಬೀಜೋತ್ಪಾದನೆ, ರಸಗೊಬ್ಬರ ಹಾಗೂ ರಾಸಾಯನಿಕಗಳು, ಯಂತ್ರೋಪಕರಣ ತಯಾರಿಕಾ ಕರ‍್ಖಾನೆಗಳು ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಂದ ಸುಮಾರು 30ಕ್ಕೂ ಹೆಚ್ಚು ಪರಿಣಿತರು, ಕೈಗಾರಿಕೋದ್ಯಮಿಗಳು ಪಾಲ್ಗಳ್ಳಲಿದ್ದು, ಪ್ರಸಿದ್ಧಿ ಸೀಡ್ ಕಂಪನಿ ಸಂಸ್ಥಾಪರಾದ ಡಾ. ಬಿ.ಕೆ. ಕುಮಾರಸ್ವಾಮಿ, ಜುವಾರಿ ಆಗ್ರೋ-ಕೆಮಿಕಲ್ಸ್ ನ ಡಾ. ಟಿ.ಎಸ್, ಹೆಕ್ಸಗಾನ್ ಕಂಪನಿಯ ಡಾ ಶಾಜೀ ಕೊಜಕುನಾನ್, ಸಿಯೋ ಎರ‍್ಜಿಯ ಡಾ.ಆನಂದ್ ಗುಡಿಹಾಳ್ ಮತ್ತು ರ‍್ಷ ಇಂಡಸ್ಟ್ರೀಯ ಶ್ರೀ ರಮೇಶ್ ಅವರ ಪ್ರಮುಖ ಭಾಷಣ ಮಾಡಲಿದ್ದು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು/ವಿದ್ಯರ‍್ಥಿಗಳೊಂದಿಗೆ ತಮ್ಮ ಅನುಭವ, ಕುಂದು ಕೊರತೆಗಳು, ಯಶೋಗಾಥೆಗಳು ಹಾಗೂ ಅವಕಾಶಗಳ ಸುಧಾರಣೆಗೆ ಇರುವ ಮರ‍್ಗೋಪಾಯಗಳ ಬಗ್ಗೆ ರ‍್ಚಿಸಿ ನೀತಿಗಳನ್ನು ರೂಪಿಸಲಾಗುವುದು.

ಕಾರ‍್ಯಗಾರದ ಪ್ರಯುಕ್ತ “ರಾಷ್ಟ್ರಮಟ್ಟದಲ್ಲಿ ಕೈಗಾರಿಕೋದ್ಯಮ ಹಾಗೂ ವಿದ್ಯಾಸಂಸ್ಥೆಗಳನ್ನು ಸಂರ‍್ಕದ ಕೊಂಡಿಯನ್ನು ಬಲಪಡಿಸುವುದು ಹೇಗೆ? ಎಂಬ ವಿಷಯದ ಬಗ್ಗೆ ಪ್ರಬಂಧ ಸರ್ಧೆಯನ್ನು ಸಹ ಏರ್ಪಡಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 95ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ ವಿಜೇತರಾದ ಅರ‍್ಜಿತ್ ಭರ‍್ತಿ(ಬಿಹಾರದಿಂದ), ಕುಮುದಾ ಪಿ(ಕರ್ನಾಟಕ) ಹಾಗೂ ರವೀಂದ್ರ ಗೋದ್ರಾ(ಗುಜರಾತಿನಿಂದ) ವಿದ್ಯಾರ್ಥಿಗಳ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಅದೇ ರೀತಿ ಡಾ. ಅನೀಲ್ ಕುಮಾರ್ ( ಕರ್ನಾಟಕದಿಂದ), ಡಾ.ವಿಜಯ್ ಕುಮಾರ್(ಕೇರಳದಿಂದ), ಚಟ್ಟೋಪಾಧ್ಯಾಯ(ಬಿಹಾರದಿಂದ) ವೃತ್ತಿಪರ ವಿಭಾಗದಲ್ಲಿ ಪ್ರಶಸ್ತಿಗೆ ಅರ್ಹರಾಗಿದ್ದಾರೆ.

ಸದರಿ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿಯನ್ನು ವಿತರಿಸಲಾಗುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Priyanka Gandhi ಕೇರಳ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅತ್ಯಧಿಕ ಮತಗಳಿಂದ ಆಯ್ಕೆ

Priyanka Gandhi ಪ್ರಿಯಾಂಕಾ ಗಾಂಧಿ ವಾದ್ರಾ 4,10,931 ಮತಗಳ ಅಂತರದಿಂದ ಗೆದ್ದಿದ್ದಾರೆ,...

SP Mithun Kumar ಮದ್ಯವರ್ಜನ ಶಿಬಿರ ಚಾಲನೆ, ಸಮಾಜಕ್ಕೆ ಹೆಚ್ಚು ಉಪಯುಕ್ತ- ಎಸ್.ಪಿ .ಮಿಥುನ್ ಕುಮಾರ್

SP Mithun Kumar ಶಿವಮೊಗ್ಗ,ನ.22 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ...

Kuvempu Birthday ಕುವೆಂಪು ಜನ್ಮದಿನದ ವಿಶೇಷ ಷಿಕಾರಿಪುರದಲ್ಲಿ ನಾಟಕ ಸ್ಪರ್ಧೆ

Kuvempu Birthday ಸಹ್ಯಾದ್ರಿ ರಂಗತರಂಗ ನಾಟಕ ಸ್ಪರ್ಧೆ ಶಿವಮೊಗ್ಗ ನಗರದ ಸಹಾದ್ರಿ...

Dargah Shah Aleem Deewan ಶಿವಮೊಗ್ಗದ ದಿವಾನ್ ಭಾಬಾ ದರ್ಗಾದಲ್ಲಿ ನ.24 ರಿಂದ 26 ವರೆಗೆ ಉರುಸ್

Dargah Shah Aleem Deewan ಶಿವಮೊಗ್ಗದ ಹಜ್ರತ್ ಸೈಯದ್ ಶಾ ಅಲೀಮ್...