Sunday, November 24, 2024
Sunday, November 24, 2024

Sri Uttaradi Math ಎಲ್ಲವನ್ನೂ ದೇವರು ನಡೆಸುವನು ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು-ಶ್ರೀಸತ್ಯಾತ್ಮತೀರ್ಥರು

Date:

Sri Uttaradi Math ನಮಗೆ ಗೊತ್ತಿಲ್ಲದಂತೆ ಎಲ್ಲರ ದೇಹದಲ್ಲಿ ದೇವರು ಅಜ್ಞಾತವಾಸದಲ್ಲಿ ಇದ್ದಾನೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಹೊಳೆಹೊನ್ನೂರು,
ಭಾನುವಾರ ಸಂಜೆ ಇಲ್ಲಿನ ಶ್ರೀ ಸತ್ಯಧರ್ಮ ಮಠದಲ್ಲಿ ನಡೆಯುತ್ತಿರುವ 28ನೇ ಚಾತುರ್ಮಾಸ್ಯದಲ್ಲಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀ ಸತ್ಯಧರ್ಮ ತೀರ್ಥರ ಮಹಾಭಾರತ ತಾತ್ಪರ್ಯ ನಿರ್ಣಯ ವ್ಯಾಖಾನಾಧಾರಿತ ವಿರಾಟ್ ಪರ್ವದ ಕುರಿತು ಅವರು ಪ್ರವಚನ ನೀಡಿದರು.

ಎಲ್ಲ ಕಾರ್ಯಗಳೂ ದೇವರ ಅಣತಿಯಂತೆಯೇ ನಡೆಯುತ್ತಿವೆ. ನಮ್ಮೊಳಗಿದ್ದು ಎಲ್ಲ ಕಾರ್ಯಗಳನ್ನು ದೇವರು ನಡೆಸುತ್ತಾನೆ ಎಂಬ ಎಚ್ಚರಿಕೆ ನಮಗೆ ಇರಬೇಕು. ಸನ್ಮಾರ್ಗದಲ್ಲಿ ಬದುಕಬೇಕು. ಶ್ರೀ ಸತ್ಯಧರ್ಮ ತೀರ್ಥರ ಆರಾಧನಾ ಕಾಲದಲ್ಲಿ ಅವರು ಹೇಳಿದ ವಿಷಯಗಳ ಗ್ರಹಣ ಮಾಡುವ ಪ್ರಯತ್ನ ಮಾಡಬೇಕು ಎಂದರು.

ವಿಷಯಗಳ ಮೋಹ ಮೊದಲು ಬಿಡಿ ;
ಪ್ರವಚನ ನೀಡಿದ ಪಂಡಿತ ಜಯತೀರ್ಥಾಚಾಂiÀið ಪಗಡಾಲ, ದೇವರ ಕಥೆಗಳ ಬಗ್ಗೆ, ಸಮಸ್ತ ಶಾಸ್ತ್ರ ಗ್ರಂಥಗಳ ಬಗ್ಗೆ , ವ್ಯಾಕರಣದ ಬಗ್ಗೆ ನಮಗೆ ಮೋಹ ಖಂಡಿತವಾಗಿ ಇರಬೇಕು. ಆದರೆ ಅದಕ್ಕಿಂತ ಮೊದಲು ಪರಸ್ತ್ರೀ,ಪರರ ಧನ, ಮಣ್ಣಿನ ಬಗೆಗಿನ ಮೋಹ ಮೊದಲು ನಿವಾರಣೆ ಆಗಬೇಕು ಎಂದರು.

Sri Uttaradi Math ದೇಹಕ್ಕೆ ಮುಪ್ಪಾದರೂ ಕೂಡ ಮನಸ್ಸಿನಲ್ಲಿ ವೈರಾಗ್ಯ ಮೂಡುವುದಿಲ್ಲ. ಜೀವನದ ಪ್ರತಿ ಹಂತದಲ್ಲಿ ಅನುಭವಿಸಿದ ಕಷ್ಟವನ್ನು ಮನುಷ್ಯ ಮರೆತು ಬಿಡುತ್ತಾನೆ. ಮತ್ತೆ ತತ್ಕಾಲದ ಸುಖಕ್ಕಾಗಿ ಲಾಭದ ದಾಸರಾಗಿಬಿಡುತ್ತೇವೆ. ಇದರಿಂದ ಯಾವ ಪುರುಷಾರ್ಥವೂ ಸಾಧ್ಯವಿಲ್ಲ. ದೇವರ ಪಾದಗಳ ಸ್ಮರಣೆ ಮಾಡಬೇಕು ಎಂದರು.
ಪoಡಿತ ಶ್ರೀನಿವಾಸಾಚಾರ್ಯ ಉಮರ್ಜಿ ಪ್ರವಚನ ನೀಡಿದರು. ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಮಾಹುಲಿ ವಿದ್ಯಾಸಿಂಹಾಚಾರ್ಯ, ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಸುಬ್ಬಣ್ಣಾಚಾರ್ಯ ನವರತ್ನ, ಸತ್ಯಪ್ರಮೋದಾಚಾರ್ಯ ಕಟ್ಟಿ, ಶ್ರೀನಿವಾಸಾಚಾರ್ಯ ನವರತ್ನ, ಪುರುಷೋತ್ತಮಾಚಾರ್ಯ ನವರತ್ನ, ರಘೂತ್ತಮಾಚಾರ್ಯ ಸಂಡೂರು, ಬಾಳಗಾರು ಜಯತೀರ್ಥಾಚಾರ್ಯ, ಪ್ರಕಾಶಾಚಾರ್ಯ, ಮಧುಸೂದನ ನಾಡಿಗ್, ಅನಿಲ್ ರಾಮಧ್ಯಾನಿ, ಗುರುರಾಜ್ ಕಟ್ಟಿ, ವಾದಿರಾಜ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...