Seethamma Saraf Experimental High School ವಿದ್ಯಾರ್ಥಿಗಳು ಹೆಚ್ಚು ಧೈರ್ಯವಂತರಾಗಬೇಕು, ವಿನಯವಂತರಾಗಬೇಕು ಮಾತ್ರವಲ್ಲದೆ, ಓದುತ್ತಿರುವ ಸಂಸ್ಥೆಯ ಬಗ್ಗೆ ಅಪಾರ ಗೌರವವನ್ನು ಹೊಂದಿ ಬದುಕನ್ನು ಮೌಲ್ಯಯುತವಾಗಿ ರೂಪಿ ಸಿಕೊಂಡಾಗ ಜೀವನ ಅರ್ಥಪೂರ್ಣವಾಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಹೆಚ್.ಎಸ್.ಅಶ್ವತ್ ಬಾಬು ಹೇಳಿದರು.
ಚಿಕ್ಕಮಗಳೂರು ಜ್ಯೋತಿನಗರ ಸಮೀಪದ ಬಿಇಡಿ ಕಾಲೇಜು ಸಭಾಂಗಣದಲ್ಲಿ ಮಲೆನಾಡು ವಿದ್ಯಾಸಂಸ್ಥೆ ಹಾಗೂ ಶ್ರೀಮತಿ ಸೀತಮ್ಮ ಸರಾಫ್ ರಾಮಚಂದ್ರ ರಾವ್ ಪ್ರಾಯೋಗಿಕ ಪ್ರೌಢಶಾಲೆ ವತಿಯಿಂದ ಏರ್ಪಡಿಸಿದ್ದ ೨೦೨೩-೨೪ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಚಲನಶೀಲತೆ ಬದುಕಿನಲ್ಲಿ ಹೊಸತನಗಳು ಅವ್ಯಾಹತವಾಗಿ ರೂಪುಗೊಳ್ಳುತ್ತಲೇ ಇರಬೇಕು. ಜತೆಗೆ ವಿದ್ಯಾ ರ್ಥಿಗಳು ವೇಗವನ್ನು ಮೈಗೂಡಿಸಿಕೊಳ್ಳಬೇಕು. ಮಲೆನಾಡು ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳನ್ನು ಪ್ರಸ್ತುತ ಸಂದ ರ್ಭದ ಚಲನಶೀಲತೆಗೆ ಹೊಂದಿಕೊಳ್ಳುವಂತೆ ಮಾಡುತ್ತಿದ್ದು ಮಾತ್ರವಲ್ಲದೆ ಸಮಾಜಕ್ಕೆ ಬೇಕಾದಂತಹ ಶಿಕ್ಷಣವನ್ನು ನೀಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ಹೆತ್ತವರು ಮಕ್ಕಳ ಜೀವನದಲ್ಲಿ ಬಹಳ ಮುಖ್ಯ. ಅಂತೆಯೇ ವಿದ್ಯೆಯನ್ನು ನೀಡಿದ ಗುರುಗಳನ್ನು ಅಪಾರವಾಗಿ ಗೌರವಿಸಬೇಕು. ಆಗ ನಮ್ಮ ವ್ಯಕ್ತಿತ್ವ ಉತ್ತಮ ರೀತಿಯನ್ನು ಬೆಳೆದುಕೊಳ್ಳುತ್ತದೆ ಎಂದರಲ್ಲದೆ ಸೋಲು ಮತ್ತು ಗೆಲುವು ಬದುಕಿನ ಭಾಗವೇ ಆಗಿದೆ. ಆದ್ದರಿಂದ ಅವೆರಡನ್ನೂ ಸರಿ ಸಮಾನವಾಗಿ ಸ್ವೀಕರಿಸಿ ಮುಂದುವರೆಯಬೇಕು ಎಂದು ಸಲಹೆ ನೀಡಿದರು.
Seethamma Saraf Experimental High School ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್ಕುಮಾರ್ ಮಾತನಾಡಿ ಪ್ರತಿಯಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಾಯಕತ್ವದ ಗುಣಗಳ ಬಗ್ಗೆ ಅರಿವಿರಬೇಕು. ವಿದ್ಯಾರ್ಥಿ ಸಂಘವು ಶಾಲಾ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಕೆಟ್ಟ ವಿಚಾರಗಳನ್ನು ಬಿಟ್ಟು ಒಳ್ಳೆಯ ಆಲೋಚನೆಯ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ನಾಡಿನ ಸಂಸ್ಕೃತಿ ಬಿಂಬಿಸುವ ಪರಂಪರೆ ಹಾಗೂ ಭಾಷೆಯ ಕುರಿತು ಅಭಿಮಾನ ಹೊಂದಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲೆನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾ ಯಿತು. ಬಳಿಕ ವಿದ್ಯಾರ್ಥಿ ಸಂಘವನ್ನು ಆಯ್ಕೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಲೆನಾಡು ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ರಾಧಾಸುಂದ್ರೇಶ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಂ.ವಿ.ಷಡಕ್ಷರಿ, ಪದನಿಮಿತ್ತ ಸದಸ್ಯೆ ಶ್ರೀಮತಿ ಉಮಾ ನಾಗೇಶ್ ಹಾಜರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಸಂಘದ ಸಲಹೆಗಾರ ಸದಾಶಿವಮೂರ್ತಿ ನಿರೂಪಿಸಿದರು.
ಮುಖ್ಯೋಪಾಧ್ಯಾಯಿನಿ ಕೌಸರ್ ಫಾತಿಮಾ ಸ್ವಾಗತಿಸಿದರು. ವಿದ್ಯಾರ್ಥಿ ನಯನ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಸುರೇಶ್ ವಂದಿಸಿದರು.