Pradhan Mantri Krishi Sinchai Yojana 2023-24 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರ ತಾಲೂಕಿನಲ್ಲಿ ಹನಿ ನೀರಾವರಿ ಅಳವಡಿಕೆಗಾಗಿ ಭದ್ರಾವತಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಶೇ.75 ರಷ್ಟು ಸಾಮಾನ್ಯ ವರ್ಗದ ರೈತರಿಗೆ ಹಾಗೂ ಶೇ.90 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶೀಷ್ಟ ಪಂಗಡದ ರೈತರಿಗೆ ಹನಿ ನೀರಾವರಿ ಅಳವಡಿಕೆಗೆ ಸಹಾಯಧನ ಸೌಲಭ್ಯ ಮತ್ತು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಗುಲಾಬಿ, ಸುಗಂಧರಾಜ, ಅಂಗಾಂಶ ಬಾಳೆ, ಕಾಳುಮೆಣಸು, ಕೋಕೋ ಬೆಳೆಗಳ ಪ್ರದೇಶ ವಿಸ್ತರಣೆ, ಕೃಷಿಹೊಂಡ, ಮಿನಿ ಟ್ರ್ಯಾಕ್ಟರ್, ಪ್ರಾಥಮಿಕ ಸಂಸ್ಕರಣ ಘಟಕ, ಅಡಿಕೆ ದೋಟಿ, ಅಡಿಕೆ ಸುಲಿಯುವ ಯಂತ್ರ ಸಹಾಯಧನ ಸೌಲಭ್ಯವಿರುತ್ತದೆ.
ಆಸಕ್ತ ರೈತರು ಸೆ.21 ರೊಳಗಾಗಿ ಪಹಣಿ, ಆಧಾರ್ ಕಾರ್ಡ್ ಜೆರಾಕ್ಸ್, ಬ್ಯಾಂಕ್ ಖಾತೆ ಜೆರಾಕ್ಸ್, ಪಾಸ್ ಪೋರ್ಟ್ ಸೈಜ್ ಫೋಟೋ Pradhan Mantri Krishi Sinchai Yojana ಮತ್ತು ಜಾತಿ ಪ್ರಮಾಣ ಪತ್ರಗಳೊಂದಿಗೆ ಭದ್ರಾವತಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಅರ್ಜಿಯನ್ನು ಸಲ್ಲಿಬಹುದೆಂದು ಭದ್ರಾವತಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ