Chandrayaan-3 ಭಾರತದ ಅತ್ಯಂತ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋˌ ಚಂದ್ರಯಾನ-3ರ ಮೂಲಕ ಕಳುಹಿಸಿರುವ ವಿಕ್ರಂ ಲ್ಯಾಂಡರ್ ಉಪಗ್ರಹವು ನಾಳೆ ಅಂದರೆ ಆಗಸ್ಟ್ 23 ರ ಸಂಜೆ 6-05 ಕ್ಕೆ ಚಂದ್ರನ ನೆಲದ ಮೇಲೆ ಲ್ಯಾಂಡಿಂಗ್ ಆಗಲಿದ್ದು ಈ ಲ್ಯಾಂಡಿಂಗ್ ಅತ್ಯಂತ ಮೃದುವಾಗಿದ್ದು (soft landing) ವಿಜ್ಞಾನಿಗಳಿಗೆ ಬೇಕಾದ ಚಂದ್ರನ ಬಗೆಗಿನ ಎಲ್ಲ ಮೌಲಿಕ ಮಾಹಿತಿಗಳನ್ನು ರವಾನಿಸಲಿ ಎಂಬ ಶುಭ ಹಾರೈಕೆಗಳನ್ನು ರೋಟರಿ ಪೂರ್ವ ಆಂಗ್ಲ ಶಾಲೆಯ ಕಲಾಂ ಸ್ಪೇಸ್ ಕ್ಲಬ್ ನ ವಿದ್ಯಾರ್ಥಿಗಳುˌ ಶಿಕ್ಷಕರುˌ ಶಿಕ್ಷಕ ಮಾರ್ಗದರ್ಶಕಿ ಶ್ರೀಮತಿ ಸುಷ್ಮಾˌˌ ಪ್ರಾಂಶುಪಾಲ ಶ್ರೀ ಸೂರ್ಯನಾರಾಯಣನ್ ˌ ಆಡಳಿತ ಮಂಡಳಿಯ ಅಧ್ಯಕ್ಷˌ ರೊ. ಚಂದ್ರಶೇಖರಯ್ಯ ಎಂˌ ಖಜಾಂಚಿ ವಿಜಯ ಕುಮಾರ್ ಜಿˌಇನ್ನರ್ ವ್ಹೀಲ್ ಸದಸ್ಯೆ ಶ್ರೀಮತಿ ಬಿಂದು ವಿಜಯ ಕುಮಾರ್ ಮುಂತಾದವರು ಕೋರಿದರು.
Chandrayaan-3 ಇದೇ ಸಂದರ್ಭದಲ್ಲಿ ಮಾತನಾಡಿದ ಮ್ಯಾನೇಜಿಂಗ್ ಟ್ರಸ್ಟಿˌ ರೊ. ಚಂದ್ರಶೇಖರಯ್ಯ ಎಂ ಇವರು ಇದೇˌ ಆಗಸ್ಟ್ 23 ರಂದು ಸಂಜೆ ನಡೆಯುವ ವೈಜ್ಞಾನಿಕ ಸನ್ನಿವೇಷವು ವಿಜ್ಞಾನ ಕ್ಷೇತ್ರದಲ್ಲಿ ಒಂದು ಮೈಲುಗಲ್ಲಾಗಿದ್ದು ಅದನ್ನು ರೋಟರಿ ಸಭಾಂಗಣದಲ್ಲಿ ಪ್ರೊಜೆಕ್ಟರ್ ಮೂಲಕ ಪರದೆಯ ಮೇಲೆ ತೋರಿಸಲು ಅಗತ್ಯವಾದ ಎಲ್ಲಾ ವ್ಯವಸ್ಥೆಯನ್ನು ಟ್ರಸ್ಟ್ ನ ಉಪಾಧ್ಯಕ್ಷ ಹಾಗೂ ಕ್ಲಬ್ ನ ಮೆಂಟರ್ ಡಾ. ಪರಮೇಶ್ವರ್ ಇವರು ಮಾಡಿದ್ದುˌ ಈ ಕಾರ್ಯ ಕ್ರಮದ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳುˌ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಪಡೆದುಕೊಳ್ಳಬೇಕೆಂದು ಕೋರಿದರು.