Bapuji First Grade College Shivamogga ಕುವೆಂಪು ವಿವಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಪೂಜಿ ನಗರ ಶಿವಮೊಗ್ಗ ಇದರ ವಿಶೇಷ ವಾರ್ಷಿಕ ಶಿಬಿರ ಹೊಳೆಹಟ್ಟಿ ಯ ಶಾಲಾ ಆವರಣದಲ್ಲಿ ನಡೆಯುತ್ತಿದ್ದು ಇಲ್ಲಿ 120 ವಿವಿಧ ಹಣ್ಣಿನ ಸಸಿಗಳನ್ನು ನೆಡಲಾಯಿತು.
Bapuji First Grade College Shivamogga ನಂತರ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ.ನಾಗರಾಜ ಪರಿಸರ ಜೀವವೈವಿದ್ಯತೆಯ ಪ್ರಾಮುಖ್ಯತೆ ಕುರಿತು ವಿಶೇಷ ಉಪನ್ಯಾಸ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ನಮ್ಮ ಸ್ವಯಂ ಸೇವಕರು ನೆಟ್ಟಂತಹ ಸಸಿಗಳನ್ನು ದಯಮಾಡಿ ನೀರು ಹಾಕಿ ಬೆಳೆಸಿರೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಸ್ವಯಂಸೇವಕರು ಪೂರ್ಣ ಕುಂಭದೊಂದಿಗೆ ಗೋಮಾತೆಯನ್ನು ಜೊತೆಗೆ ಕರೆದುಕೊಂಡು ಅತಿಥಿಗಳನ್ನು ಬರಮಾಡಿಕೊಂಡಿದ್ದು ಹಾಗೂ ಗೋಮಾತೆಗೆ ಆಹಾರ ಧಾನ್ಯಗಳನ್ನು ನೀಡುವ ಮೂಲಕ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ಬಹಳ ವಿಶೇಷವಾಗಿತ್ತು.
ಕುವೆಂಪು ವಿ.ವಿ ಯ ಸಂಶೋಧನಾ ವಿದ್ಯಾರ್ಥಿ ಜಯಂತ್ ಬಾಬು ಹಾವುಗಳ ಪ್ರಾಮುಖ್ಯತೆ, ಹಾವು ಕಚ್ಚಿದಾಗ ನಾವು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ರೇಶ್ಮಾ, ಡಾ. ಸೋಮಶೇಖರ್, ಪರಿಸರ ಸಂಸ್ಥೆಯ ನಿರ್ದೇಶಕರಾದ ಶ್ರೀ ಅರುಣ್, ಹೊಳೆಹಟ್ಟಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.