Saturday, November 23, 2024
Saturday, November 23, 2024

Rotary Shivamogga East ಬದುಕಿನ ಸಾರ್ಥಕತೆಗೆ ಪ್ರಕೃತಿಯತ್ತ ದೃಷ್ಟಿಹರಿಸಬೇಕು- ವಿದ್ವಾನ್ ನಟೇಶ್

Date:

Rotary Shivamogga East ಸಮಾಜದಲ್ಲಿ ಬೆರೆತು ಬದುಕಿದರೆ ಬದುಕಿಗೊಂದು ಅರ್ಥ. ಜಗತ್ತಿಗೆ ಸಂತೋಷ ನೀಡುವ ಜೊ ತೆಯಲ್ಲಿ ಅದರಲ್ಲಿ ಸಂತಸದ ಪಾಲನ್ನು ನಾವು ತೆಗೆದುಕೊಂಡು ಬದುಕಿದರೆ ಆ ಸಂತೋಷ ಇನ್ನಷ್ಟು ಸಾರ್ಥಕ ಎಂದು ವಿದ್ವಾನ್ ಜಿ.ಎಸ್.ನಟೇಶ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಜೀವನದ ಸಾರ್ಥಕತೆ ಎಂಬ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಎಲ್ಲರೊಳಗೆ ಒಂದಾಗಿ ಬದುಕುವ ಬದುಕು ಭಗವಂತನಿಗೂ ಹಿತ. ಬದುಕಿನ ಸಾರ್ಥಕತೆಗೆ ಪ್ರಕೃತಿಯತ್ತ ದೃಷ್ಟಿ ಹರಿಸಬೇಕು. ಗಿಡ, ಮರ, ಪಶು ಪಕ್ಷಿಗಳು ಎಂದೂ ದಾರಿ ತಪ್ಪಿ ನಡೆದಿಲ್ಲ. ಪರೋಪಕಾರಕ್ಕಾಗಿಯೇ ಬದುಕುತ್ತವೆ ಎಂದು ತಿಳಿಸಿದರು.
ಮನುಷ್ಯ ಪ್ರಾಣಿ ಪಕ್ಷಿಗಳಿಂದ ಕಲಿಯಬೇಕಾಗಿದೆ. ಸ್ವಾರ್ಥವಿಲ್ಲದ ಸೇವೆ, ಸಾಮಾಜಿಕ ಕಳಕಳಿ, ಸ್ನೇಹಭಾವ ಇವೆಲ್ಲ ರೋಟರಿಯ ತತ್ತ್ವಗಳು ನಿಜವಾದ ಬದುಕಿನ ದಾರಿದೀಪಗಳು. ಮನುಷ್ಯ ಅಹಂಕಾರ ಬಿಟ್ಟು ಎಲ್ಲರೊಳಗೊಂದಾದರೆ ಅದೇ ಜೀವನದ ಸಾರ್ಥಕತೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಒಳ್ಳೆಯ ಉಪನ್ಯಾಸಗಳು ನಮ್ಮ ಜೀವನವನ್ನು ಸುಂದರಗೊಳಿಸುತ್ತದೆ. ಅರ್ಥಪೂರ್ಣ ವಿಚಾರಗಳು ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ. ಅದರಿಂದ ನಾವು ಸಂಸ್ಕಾರಯುತರಾಗುತ್ತೇವೆ ಎಂದು ಹೇಳಿದರು.
ಆಧುನಿಕ ತಂತ್ರಜ್ಞಾನದಲ್ಲಿ ಯುವ ಜನತೆ ಕಂಪ್ಯೂಟರ್ ಟಿವಿ ಮೊಬೈಲ್‌ಗಳನ್ನ ಬಿಟ್ಟು ಇಂತಹ ಉಪನ್ಯಾಸಗಳಲ್ಲಿ ಪಾಲ್ಕೊಂಡರೆ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಜಿ.ಎಸ್.ನಟೇಶ್ ಅವರಿಗೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಸದಸ್ಯರು ಇನ್ನರ್ ವೀಲ್ ಕ್ಲಬ್ಬಿನ ಸದಸ್ಯರು ಆತ್ಮೀಯವಾಗಿ ಸನ್ಮಾನಿಸಿದರು.
ಸಮಾರಂಭದಲ್ಲಿ ಡಾ. ಕಡಿದಾಳ್ ಗೋಪಾಲ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಚಂದ್ರಹಾಸ್ ಪಿ ರಾಯ್ಕರ್, ಡಾ. ಗುಡದಪ್ಪ ಕಸಬಿ, ಮಾಜಿ ಅಧ್ಯಕ್ಷ ಡಾ. ಪರಮೇಶ್ವರ್ ಡಿ ಶಿಗ್ಗಾವ್, ಶ್ರೀಕಾಂತ್, ಮಹೇಶ್ ಎ ಓ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ ಕುಮಾರ್, ಎಂಪಿ ನಾಗರಾಜ್, ಡಾ. ಅರುಣ್, ಚಂದ್ರಶೇಖರಯ್ಯ, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು Rotary Shivamogga East ವಿಜಯ ಕುಮಾರ್, ವಿಜಯ ರಾಯ್ಕರ್, ಮಧುರ ಮಹೇಶ್, ಶ್ವೇತಾ ಹಾಗೂ ನಿರ್ದೇಶಕರು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...