Coffee Board Karnataka ಅತಿಯಾದ ಮಳೆಯಿಂದ ಕಾಫಿ ಬೆಳೆಗೆ ರೋಗದ ಭೀತಿ ಎದುರಾಗಿರುವ ಪರಿಣಾಮ ಬೆಳೆಗಾರರಲ್ಲಿ ತೀವ್ರ ಆತಂಕ ಎದುರಾಗಿದ್ದು ಕೂಡಲೇ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಬೊಗಸೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಅತಿಯಾದ ಮುಂಗಾರು ಮಳೆ ಪ್ರಾರಂಭವಾದ ಕ್ಷಣದಿಂದ ಕಾಫಿ ಬೆಳೆಗಾರರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಇದರಿಂದ ಸ್ಥಳೀಯ ಕಾಫಿ ಬೆಳೆಗಾರರು ಫಸಲು ಇಲ್ಲವೆಂಬಂತಾಗಿದೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
Coffee Board Karnataka ಖಾಂಡ್ಯ ಹೋಬಳಿಯ ಬೊಗಸೆ, ಕಡವಂತಿ, ಬಿದರೆ, ದೇವದಾನ, ಹುಯಿಗೆರೆ ಗ್ರಾಮಗಳಲ್ಲಿ ಮುಂತಾದ ಕಡೆಗಳ ಕಾಫಿ ತೋಟಗಳಲ್ಲಿ ಕೊಳೆ ರೋಗ ಗಣನೀಯ ಪ್ರಮಾಣದಲ್ಲಿ ಹೆಚ್ಚಳಗೊಳ್ಳುತ್ತಿದ್ದು ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರ ಬೆಳೆಗಾರರ ಸಂಕಷ್ಟಕ್ಕೆ ನೆರವಾಗಬೇಕು ಆಗ್ರಹಿಸಿದ್ದಾರೆ.
ಕೊಳೆ ರೋಗದ ಸಂಬಂಧ ಖಾಂಡ್ಯ ಹೋಬಳಿಯ ಬೊಗಸೆ ಗ್ರಾಮದ ಹೂವಮ್ಮ ಎಂಬುವವರ ಕಾಫಿ ತೋಟ ತುತ್ತಾಗಿರುವ ಪರಿಣಾಮ ತೀವ್ರ ಆತಂಕಕ್ಕೊಳಗಾಗಿದೆ ಎಂದಿದ್ದಾರೆ.