KSCA ಕ್ರಿಕೆಟ್ ಜ್ವರ ಈಗ ಶುರುವಾಗಿದೆ. ಅದರಲ್ಲೂ ಟಿ20 ಮತ್ತು ಏಕದಿನ ಕ್ರಿಕೆಟ್ ಪಂದ್ಯಗಳನ್ನ ನೋಡಲು ಕ್ರೀಡಾಪ್ರೇಮಿಗಳು ಮುಗಿಬೀಳುತ್ತಾರೆ.
ಅಕ್ಟೋಬರ್ ಐದರಿಂದ ಆರಂಭವಾಗಿ ನವೆಂಬರ್ 19 ರವರೆಗೆ ಬ್ಯಾಟು-ಬಾಲುಗಳನ್ನ ಹಿಡಿದ ಆಟಗಾರರ
ಸೆಣಸಾಟ ನಡೆಯಲಿದೆ. ಅಂತಾರಾಷ್ಟ್ರೀಯ
ಪ್ರಸಿದ್ಧ ಕ್ರಿಕೆಟ್ ಕಲಿಗಳು ಭಾರತದ ಕ್ರಿಕೆಟ್ ಕ್ರೀಡಾಗಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಕ್ಟೋಬರ್ ಐದರಂದು ಅಹ್ಮದಾಬಾದಿನಲ್ಲಿ
ಕ್ರೀಡಾವಳಿ ವರ್ಣರಂಜಿತವಾಗಿ ಉದ್ಘಾಟನೆಯಾಗುತ್ತದೆ. ವಿಶೇಷವೆಂದರೆ ಅಲ್ಲಿ ಕಳೆದ( 2019) ಏಕದಿನ ವಿಶ್ವಕಪ್ ವಿಜೇತ ಚಾಂಪಿಯನ್ ಇಂಗ್ಲೆಂಡ್ ತಂಡವು
ರನ್ನರ್ಸ್ ಅಪ್ ಆಗಿರುವ ನ್ಯೂಜಿಲೆಂಡ್ ತಂಡಗಳು ಮೊದಲ ಪಂದ್ಯದಲ್ಲಿ ಸೆಣಸಾಡಲಿವೆ.ಅಹ್ಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣ ವಿಶ್ವದ ಕ್ರಿಕೆಟ್ ಪಟದಲ್ಲಿ ಅತಿ ದೊಡ್ಡ ಕ್ರೀಡಾಂಗಣವೆಂದು ಖ್ಯಾತಿ ಪಡೆದಿದೆ.
KSCA ಇಲ್ಲಿನ ಆಸನ ಸಾಮರ್ಥ್ಯ ಒಂದುಲಕ್ಷ ಮೂವತ್ತೆರಡು ಸಾವಿರ. ಮೆಲ್ಬರ್ನ್
ಕ್ರೀಡಾಂಗಣದಲ್ಲಿ ಒಂದುಲಕ್ಷ ಆಸನಗಳಿವೆ.ಭಾರತದ ಪಾಲಿನ ಮೊದಲ ಪಂದ್ಯ ಅಕ್ಟೋಬರ್ ಎಂಟರಂದು ಚನ್ನೈನಲ್ಲಿ ನಡೆಯಲಿದೆ. ಆಸ್ಟ್ರೇಲಿಯ ತಂಡ ಎದುರಾಳಿಯಾಗಲಿದೆ. ಬೆಂಗಳೂರಿನ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ವಿವಿಧ 05 ಲೀಗ್ ಪಂದ್ಯಗಳು ನಡೆಯಲಿವೆ.
ಇಡೀ ವೇಳಾಪಟ್ಟಿಯನ್ನು
ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು. ಏಕದಿನ ವಿಶ್ವಕಪ್ ಟ್ರೋಫಿಯನ್ನ ವೀರೇಂದ್ರ ಸೆಹ್ವಾಗ್ ಮತ್ತು ಮುತ್ತಯ್ಯ ಮುರಳೀಧರನ್ ಪ್ರದರ್ಶಿಸಿದರು. ನಾಲ್ಕನೇ ಬಾರಿಗೆ ಭಾರತವು ವಿಶ್ವಕಪ್ ಆತಿಥ್ಯವನ್ನ ವಹಿಸುತ್ತಿದೆ.