Sunday, November 24, 2024
Sunday, November 24, 2024

Mantralaya Raghavendraswamy Mutt ಅಜೇಯ ವಿಜಯೀಂದ್ರ ತೀರ್ಥರು

Date:

ಲೇ.ಎನ್.ಜಯಭಿಮ ಜೊಯಿಸ್.
ಶಿವಮೊಗ್ಗ.

Mantralaya Raghavendraswamy Mutt ಶ್ರೀವಿಜಯೀಂದ್ರ ತೀರ್ಥ ಗುರು ಸಾರ್ವಭೌಮರು ಮೂರು”ವಿ”ಅಕ್ಷರಗಳಿಂದಶೋಭಿತರಾದವರು.
ಮೊದಲಿಗೆ ಜನ್ಮ ನಾಮ ವಿಠಲಾಚಾರ್ಯರೆಂತಲೂ,ಎರಡನೆಯದಾಗಿ”ವಿಷ್ಣುತೀರ್ಥ”ರೆಂದು ವಿದ್ಯಾಗುರುಗಳು ಮತ್ತು ಸನ್ಯಾಸ ದೀಕ್ಷೆಯನ್ನು ಆಶೀರ್ವದಿಸಿದ ಗುರುಗಳಾದ ಶ್ರೀವ್ಯಾಸತೀರ್ಥರಿಂದ ನಾಮಕರಣಗೊಂಡವರು.
ಶ್ರೀರಾಯರ ಮಠದ ಹಿಂದಿನ ಯತಿಗಳಾಗಿದ್ದ ಶ್ರೀಸುರೇಂದ್ರ ತೀರ್ಥರು ಇವರ ಪ್ರತಿಭೆಯನ್ನು ಗುರುತಿಸಿ ಶ್ರೀವ್ಯಾಸ ತೀರ್ಥರನ್ನು ಓಲೈಸಿ, ವಿಷ್ಣುತೀರ್ಥರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿ ಪ್ರಣವೋಪದೇಶವನ್ನು ಮಾಡಿದಂತ ಬದಲಾಯಿಸಿ “ಶ್ರೀವಿಜಯೀಂದ್ರತೀರ್ಥ”ರೆಂದು ನಾಮಕರಣ ಮಾಡುತ್ತಾರೆ.

ಆ ಮೊದಲಿನ ಎರಡು ಹೆಸರನ್ನು ಕೇಳಿದಾಗ,ಹೇಳಿದಾಗ ಸಂತೋಷ ಹೊಮ್ಮುತ್ತದೆ. ಮೂರನೆಯ ಹೆಸರು”ಶ್ರೀವಿಜಯೀಂದ್ರತೀರ್ಥರ” ಹೆಸರನ್ನು ಕೇಳಿದರೆ ಭಕ್ತಿಯ ಕಂಪನವಾಗುತ್ತದೆ.

Mantralaya Raghavendraswamy Mutt ‌ ಶ್ರೀವ್ಯಾಸತೀರ್ಥರು ಮತ್ತು ಶ್ರೀಸುರೇಂದ್ರತೀರ್ಥ ಇಬ್ಬರು ಮಹಾನ್ ತಪಸ್ವಿಗಳ ಆಶೀರ್ವಾದ
ದಿಂದ ದ್ವೈತ ಸಿದ್ಧಾಂತದ ಗಗನದಲ್ಲಿ ವಿಜಯೀಂದ್ರ ತೀರ್ಥರೆಂಬೊ ಸೂರ್ಯ ಉದಯಿಸಿ ಶ್ರೇಷ್ಠ ಯತಿಗಳ ಪಂಕ್ತಿಯಲ್ಲಿ ಸೇರಿದ ಮಹಾನುಭಾವರು.
ಶ್ರೀಮಧ್ವಾಚಾರ್ಯರು ಸ್ಥಾಪಿಸಿದ ದ್ವೈತ ಸಿದ್ಧಾಂತದ ಸೀಕರಣೆಯನ್ನು ಎಲ್ಲಕಡೆಗೂಹಂಚಿದ ಶ್ರೇಷ್ಠ ಯತಿಗಳು.
ಮಂಗಳೂರಿಗೆ ಸಮೀಪವಿರುವ ಮುಲ್ಕಿ ಊರಿನಲ್ಲಿರುವ ಶ್ರೀವೆಂಕಟರಮಣ ದೇವರ ದೇವಸ್ಥಾನದಲ್ಲಿ ಅಷ್ಟ ಭುಜ ಉಗ್ರ ನರಸಿಂಹದೇವರನ್ನು ಶ್ರೀವಿಜಯೀಂದ್ರ ತೀರ್ಥರು ಪ್ರತಿಷ್ಠಾಪಿಸಿದ್ದಾರೆ.

ಇಂದಿನ ಗೌಡಸಾರಸ್ವತ ಮಠವಾದ ಕಾಶೀಮಠದ ಮೂಲ ಸಂಸ್ಥಾಪನೆಯ ಶ್ರೀವಿಜಯೀಂದ್ರತೀರ್ಥ
ರಿಂದಲೇ ಆಯಿತೆಂಬುದು ಅವರ ಸಾಮಾಜಿಕ ಚಿಂತನೆಯ ದ್ಯೋತಕವಾಗಿದೆ.
104 ಗ್ರಂಥಗಳನ್ನು ಬರೆದು ಸಾರಸ್ವತ ಲೋಕಕ್ಕೆ ಕೊಟ್ಟ ಮಹನೀಯರು.

64 ಕಲೆಗಳಲ್ಲಿ ಪರಿಣತಿಯನ್ನು ಹೊಂದಿ ಹಿಡಿತ ಸಾಧಿಸಿದವರು.ದೊಡ್ಡ ದೊಡ್ಡ ಪಂಡಿತರುಗಳು ಶ್ರೀಗಳವರ ಜೊತೆ ವಾದದಲ್ಲಿ ಪರಾಜಯಹೊಂದಿ ಶರಣಾದವರು.ಉತ್ತರದೇಶದ ಪಂಡಿತರಾದ ಗಂಗಾಧರ ಶರ್ಮಎಂಬ ಪಂಡಿತರೊಬ್ಬರು ಶ್ರೀಗಳವರ ಜೊತೆ ಕೃತ್ರಿಮ ದಿಂದ ವಾದದಲ್ಲಿ ಗೆಲ್ಲಬೇಕೆಂದು, ಶ್ರೀಗಳವರಿಗೆ ವಿಷಪ್ರಾಶನ ಮಾಡಿಸಿ ವಾದದಲ್ಲಿಜಯಪಡೆಯಬೇಕೆಂದು ಯೋಜಿಸಿರುತ್ತಾರೆ.

ಅವರು ವಾದದಲ್ಲಿ ಸೋತು ಶ್ರೀಗಳವರಿಗೆ ಶರಣಾಗುತ್ತಾರೆ. ಇದು ಶ್ರೀಗಳವರಿಗೆ
ತಿಳಿದು ವಿಷವನ್ನು ಸ್ವೀಕರಿಸುತ್ತಾರೆ. ಶ್ರೀಗಳವರು ಭಕ್ತಿಯಿಂದ ಶ್ರೀನರಸಿಂಹದೇವರನ್ನು ಸ್ತುತಿಸುತ್ತಾರೆ.
ಒಂದೊಂದು ಶ್ಲೋಕವು ಮುಗಿಯುತ್ತಲೂ ವಿಷದ ಪ್ರಭಾವ ಇಳಿಯುತ್ತಾ ಹೋಗುತ್ತದೆ. ಕಡೆಯ ಶ್ಲೋಕ ಮುಗಿಯುತ್ತಿದ್ದಂತೆಯೇ ಪೂರ್ತಿಯಾಗಿ ವಿಷದ ಪ್ರಭಾವ ಕಡಿಮೆಯಾಗಿ ಅವರು ಮೊದಲಿನ ದೇಹಸ್ಥಿತಿಯನ್ನು ಪಡೆಯುತ್ತಾರೆ.ಇದನ್ನು ನೋಡಿದ ಗಂಗಾಧರ ಶರ್ಮರು ಶ್ರೀಗಳವರಿಗೆ ದೀರ್ಘದಂಡ ನಮಸ್ಕಾರವನ್ನು ಮಾಡಿ ಕ್ಷಮೆಯಾಚಿಸಿ,ಶ್ರೀಗಳವರ ಆಶೀರ್ವಾದ ಪಡೆಯುತ್ತಾರೆ. ಶ್ರೀವಿಜಯೀಂದ್ರ ತೀರ್ಥರು ಸ್ತುತಿಸಿದ ಶ್ರೀ ನೃಸಿಂಹದೇವರ ಸ್ತೋತ್ರವೇ “ಶ್ರೀಶೋಡಷಬಾಹುನರಸಿಂಹಾಷ್ಟಕ”ಎಂದು ಪ್ರಸಿದ್ಧವಾಗಿದೆ.
ಶ್ರೀವಿಜಯೀಂದ್ರ ತೀರ್ಥಗುರುಗಳ ಕಾಲದಲ್ಲಿ ನಡೆದ ಮಹಿಮೆಗಳು ಅಪಾರವಾಗಿವೆ.

ಶ್ರೀಸುರೇಂದ್ರ ತೀರ್ಥರು ತಮ್ಮ ಆಶ್ರಮ ಶಿಷ್ಯರಾದ ಶ್ರೀವಿಜಯೀಂದ್ರ ತೀರ್ಥರ ಜೊತೆಯಾಗಿ ಕುಂಭ ಕೋಣಂಗೆ ಬಂದಿರುವಾಗ ನಡೆದ ಘಟನೆ. ಕುಂಭಕೋಣಂನಲ್ಲಿ ಲಿಂಗರಾಜೇಂದ್ರನೆಂಬ ಒಬ್ಬ ಮಾಂತ್ರಿಕನಿದ್ದ. ಅಲ್ಲಿದ್ದ ವೇದಾಧ್ಯಯನ ಮಾಡಿದ್ದ ಪಂಡಿತರುಗಳನ್ನು ವಾದದಲ್ಲಿ ಸೋಲಿಸಿ ತನ್ನ ಪ್ರಭುತ್ವವನ್ನು ಸ್ಥಾಪಿಸಿಕೊಂಡಿದ್ದ.
ಅಲ್ಲಿಗೆ ಬಂದ ಪೂಜ್ಯ ಗುರುಗಳ ಹತ್ತಿರ ಪಂಡಿತರುಗಳು ತಮ್ಮ ಕಷ್ಟವನ್ನು ತೋಡಿಕೊಂಡರು.

ಆಗ ಶ್ರೀವಿಜಯೀಂದ್ರ ತೀರ್ಥರು ಅವರಿಗೆ ಧೈರ್ಯ ನೀಡಿದರು.ಮಾಂತ್ರಿಕ ಲಿಂಗರಾಜನನ್ನು ಗುರುಗಳು ವಾದಕ್ಕೆ ಕರೆಸುತ್ತಾರೆ.
ಮಾಂತ್ರಿಕನು ತನ್ನ ಶಿಷ್ಯರೊಡನೆ ಒಂದು ಗೋಡೆಗೆ ಹತ್ತಿ ಕೂತುಕೊಂಡ. ಆ ಗೋಡೆ ಚಲಿಸಲಾರಂಭಿಸಿತು.
ಈ ವೇಳೆಯಲ್ಲಿ ವಿಜಯೀಂದ್ರ ತೀರ್ಥರು ಪಲ್ಲಕ್ಕಿಯಲ್ಲಿ ಕುಳಿತು ಬರುತ್ತಿದ್ದರು.

ಗುರುಗಳು ಪಲ್ಲಕ್ಕಿಯನ್ನು ಕೆಳಗೆ ಇಳಿಸಲು ಹೇಳಿದರು.
ಪಲ್ಲಕ್ಕಿಯನ್ನು ಕೆಳಗೆ ಇಟ್ಟ ಕೂಡಲೇ ಅದು ಮೇಲೆ ತೇಲ ತೊಡಗಿತು.
ಅದೂ ಮಂತ್ರವಾದಿಯ ತಲೆಗೆ ಸರಿಯಾಗಿ ತೇಲುತ್ತಿತ್ತು.ಈ ಒಂದು ವಾದ ಎನ್ನುವುದಕ್ಕಿಂತ ಪಂದ್ಯದಲ್ಲಿ ಮಾಂತ್ರಿಕನಾದ ಲಿಂಗರಾಜು ಸೋತು ಹೋದ.ಈ ಬಗ್ಗೆ ತಾನು ಸೋತು ಗುರುಗಳಿಗೆ ಎಂದು ಶರಣಾದ ಬಗ್ಗೆ ಘೋಷಣೆ ಮಾಡಿದ.

ಶ್ರೀವಿಜಯೀಂದ್ರ ತೀರ್ಥರು ಶ್ರೀರಾಘವೇಂದ್ರ ತೀರ್ಥರ ಪರಮೇಷ್ಠಿ ಗುರುಗಳು. ಶ್ರೀಅಪ್ಪಣ್ಣಾಚಾರ್ಯರು
ರಚಿಸಿರುವ ಶ್ರೀರಾಘವೇಂದ್ರ ತೀರ್ಥ ಗುರುಗಳ ಮೇಲಿನ ಸ್ತೋತ್ರದಲ್ಲಿ “ಶ್ರೀವಿಜಯೀಂದ್ರ ಕರಾಬ್ಜೋತ್ಥ ಸುಧೀಂದ್ರ ವರಪುತ್ರಕ:”ಎಂಬ ಸ್ತೋತ್ರದ ವಾಕ್ಯದಲ್ಲಿ ರಾಯರಂತಹ ಕಲ್ಪವೃಕ್ಷ ಕಾಮಧೇನುವಿನಂತಹರಾಯರನ್ನು ಲೋಕಕ್ಕೆ ಕೊಟ್ಟವರು ಶ್ರೀವಿಜಯೀಂದ್ರತೀರ್ಥರು

.ಶ್ರೀವಿಜಯೀಂದ್ರಶತೀರ್ಥರುಶ್ರೀರಾಯರಿಗೆ ಎರಡು ರೀತಿಯಲ್ಲಿ ಸಂಬಂಧಪಟ್ಟವರು,
ಮೊದಲು ಶ್ರೀವಿಜಯೀಂದ್ರ ತೀರ್ಥರ ಪ್ರಶಿಷ್ಯರು ರಾಯರು ಮತ್ತು ಎರಡನೆಯದಾಗಿ ಶ್ರೀರಾಯರು ಪೂರ್ವಾಶ್ರಮದಲ್ಲಿ ವೆಂಕಟನಾಥರಾಗಿದ್ದಾಗ ಶ್ರೀವಿಜಯೀಂದ್ರ ತೀರ್ಥರ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿದವರು.
ಇಂತಹ ವಿಜಯೀಂದ್ರತೀರ್ಥರನ್ನು ಲೋಕಕ್ಕೆ ಕೊಟ್ಟಂತಹವರು ಶ್ರೀವ್ಯಾಸರಾಯರು.

ಶ್ರೀವಿಜಯೀಂದ್ರತೀರ್ಥರು ತಮ್ಮ ಆಶ್ರಮ ಶಿಷ್ಯರಾದ ಶ್ರೀಸುಧೀಂದ್ರತೀರ್ಥರಿಗೆ ಸಂಸ್ಥಾನವನ್ನು ವಹಿಸಿಕೊಟ್ಟು ಶ್ರೀಆನಂದನಾಮ ಸಂವತ್ಸರದ ಜ್ಯೇಷ್ಠ ಬಹುಳ ತ್ರಯೋದಶಿ ಕುಂಭಕೋಣಂನಲ್ಲಿ ಬೃಂದಾವನಸ್ಥರಾದರು.ಶ್ರೀಗಳವರ ಆರಾಧನೆಯ ದಿನವಾದ ಜ್ಯೇಷ್ಠ ಕೃಷ್ಣಪಕ್ಷದ ತ್ರಯೋದಶಿಯಂದು
ಅವರ ಮೂಲಬೃಂದಾವನವಿರುವ ಕುಂಭಕೋಣಂ
ನಲ್ಲಿ ಬಹಳ ವಿಜೃಂಭಣೆಯಿಂದಆಚರಿಸಲಾಗುತ್ತದೆ.
ನಾವೂ ನಮ್ಮ ಭಕ್ತಿಯ ನಮನಗಳನ್ನು ಅರ್ಪಿಸಿ ಶ್ರೀಗಳ ಅನುಗ್ರಹಕ್ಕೆ ಪಾತ್ರರಾಗೋಣ.

ಲೇ.ಎನ್.ಜಯಭಿಮ ಜೊಯಿಸ್.
ಶಿವಮೊಗ್ಗ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...