Association Of Democratic Reform 2013ರ ಕರ್ನಾಟಕ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕೆಲವು ಕುತೂಹಲಕಾರಿ ವಿಷಯಗಳಿವೆ. ಪ್ರತಿ ಬಾರಿಯೂ ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಬಗ್ಗೆ ಮಾದ್ಯಮದಲ್ಲಿ ಸುದ್ದಿಯಾಗುತ್ತಿರುತ್ತದೆ. ಈ ಬಾರಿ ಸ್ಪರ್ಧಿಸಿರುವ 2586 ಅಭ್ಯರ್ಥಿಗಳಲ್ಲಿ 404 ಮಂದಿ ಅಭ್ಯರ್ಥಿಗಳು ಅಪರಾಧ ಹಿನ್ನೆಲೆ ಉಳ್ಳವರಾಗಿದ್ದರು.
ಅವರ ಮೇಲೆ ತೀವ್ರತರ ಅಪರಾಧಗಳ ಆರೋಪಗಳಿವೆ.
2018ರ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ ಶೇ.15 ರಷ್ಟು ಅಭ್ಯರ್ಥಿಗಳು ಅಪರಾಧ ಹಿನ್ನೆಲೆ ಉಳ್ಳವರಾಗಿದ್ದರು.ಈಗ ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಸಂಖ್ಯೆ ಶೇ.01ರಷ್ಟು ಏರಿಕೆಯಾಗಿದೆ.
Association Of Democratic Reform ಈ ಬಾರಿ ಪಕ್ಷವಾರು ಅಭ್ಯರ್ಥಿಗಳನ್ನ ನೋಡುವುದಾದರೆ ಕಾಂಗ್ರೆಸ್ ಶೇ.55, ಬಿಜೆಪಿ ಶೇ. 43, ಜೆಡಿಎಸ್ ಶೇ.34, ಆಮ್ ಆದ್ಮಿ ಪಕ್ಷ ಶೇ.14, ಉಳಿದಂತೆ ಶೇ. 23.
ಈ ಬಾರಿ ಕಣದಲ್ಲಿರುವ 2,586 ಅಭ್ಯರ್ಥಿಗಳಲ್ಲಿ ಶೇ. 22ರಷ್ಟು ಅಭ್ಯರ್ಥಿಗಳು ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ಇವೆ ಎಂದು ಘೋಷಿಸಿಕೊಂಡಿದ್ದಾರೆ.
ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ ಈ ಅಧ್ಯಯನವನ್ನು ಬಹಿರಂಗಪಡಿಸಿದೆ.
ಫೆಬ್ರವರಿ 13, 2020 ರಂದು ಆಗಲೇ ಸುಪ್ರೀಂ ಕೋರ್ಟ್ ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳನ್ನ ಏಕೆ ಆಯ್ಕೆ ಮಾಡುತ್ತೀರಿ? ಕಾರಣ ತಿಳಿಸಿ , ಅಪರಾಧ ಹಿನ್ನೆಲೆ ಇಲ್ಲದ ವ್ಯಕ್ತಿಗಳನ್ನ ಏಕೆ ಆಯ್ಕೆ ಮಾಡುವುದಿಲ್ಲ ಎಂದು ಪ್ರಶ್ನೆ ಕೇಳಿತ್ತು.
ಅದಕ್ಕೆ ಉತ್ತರವಾಗಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಮೇಲೆ ಆಧಾರರಹಿತ ಆರೋಪಗಳಿದ್ದು, ಅವರು ಜನಪ್ರಿಯ ವ್ಯಕ್ತಿಗಳಾಗಿದ್ದಾರೆ. ಸಮಾಜ ಸೇವಕರಾಗಿದ್ದಾರೆ. ಅವರ ಮೇಲಿನ ಆರೋಪಗಳು ರಾಜಕೀಯ ದುರುದ್ದೇಶದಿಂದ ಕೂಡಿವೆ. ಈ ಎಲ್ಲವೂ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಪರಿಗಣಿಸಲಾಗದ ಕಾರಣಗಳಾಗಿವೆ ಎಂದು ತಿಳಿಸಿದ್ದವು ಎಂದು ವರದಿ ತಿಳಿಸಿದೆ.