KLive Special Article ಮಾತಿನ ಮೇಲೆ ಹಿಡಿತವಿರಲಿ ಎಂದರೆ ಯಾರೂ ಕುತ್ತಿಗೆ ಹಿಡಿದು ಹೀಗೇ ಮಾತಾಡು ಎಂದು ಹೇಳಲು ಬಾರರು. ಅರ್ಥಾತ್ ಬಳಸುವ ಪದಗಳ ಬಗ್ಗೆ ಎಚ್ಚರವಿರಲಿ.
ಇದು ಎಲ್ಲರಿಗೂ ಅನ್ವಯಿಸುತ್ತದೆ.
ವಾಸ್ತವ ಜೀವನದಲ್ಲಿ ಈ ಬಗ್ಗೆ ಜಾಗೃತರಾಗಿರುತ್ತೇವೆ. ಆದರೆ ರಾಜಕೀಯ ಕ್ಷೇತ್ರವೆಂದರೆ ಅಲ್ಲಿ
ಲಗಾಮಿಲ್ಲದೇ ಟೀಕೆ, ದೂಷಣೆ ಇತ್ಯಾದಿ ನಡೆಯುತ್ತಿರುತ್ತದೆ.
ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ನಿಜ ಅದನ್ನ ಸಾಮಾಜಿಕ ಶಾಂತಿ ಕದಡುವ ಮಟ್ಟಿಗೆ ಬಳಸಬಾರದು.
ಇದು ಒಂದು ಸಾಮಾನ್ಯ ಎಚ್ಚರಿಕೆ.
ಅಭ್ಯರ್ಥಿಗಳು ತಮ್ಮ ಐಡಿಯಾಲಜಿ ಬಗ್ಗೆ ಮಾತಾಡ ಬೇಕೇ ಹೊರತು ಎದುರು ಅಭ್ಯರ್ಥಿ ಅಥವಾ ಪಕ್ಷದ ಬಗ್ಗೆ ಮಾತಾಡಿ ತಮ್ಮ ವಾಕ್ಪಟುತ್ವ ಮೆರೆಯುವುದಲ್ಲ.
ಈಗ ಹಾಗೇ ನಡೆದಿದೆ. ಮಾತಿನಿಂದಲೇ ಚಪ್ಪಾಳೆಗಿಟ್ಟಿಸಿದತೆ ಮತಗಳು ಜೋಳಿಗೆಗೆ ಖಾಯಂ ಬೀಳುತ್ತವೆ ಎಂಬುದು ಭ್ರಮೆ.
ಜನಸೇರುವುದೂ ಈಗ ವ್ಯಕ್ತಿತ್ವ ಮತ್ತು ಸ್ಥಾನಮಾನ ನೋಡಿಯೆ. ಅದರಲ್ಲೂ ಚುನಾವಣಾ ಭಾಷಣಗಳಿಗೆ ಕೇಳುವ ಮಂದಿಗೆ
ಈಗ ಹಣಕೊಡಬೇಕು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಬಸ್ ವ್ಯವಸ್ಥೆ, ನೀರು,ಊಟ ಎಲ್ಲವನ್ನೂ ಆಯಾ ಪಕ್ಷದ ಮುಖಂಡರು ನಿರ್ವಹಿಸಿತ್ತಾರೆ.
ಭಾಷಣಗಳು ರೋಡ್ ಶೋಗಳ ಭರಾಟೆಯಲ್ಲಿ ಪ್ರಣಾಳಿಕೆಗಳ ಬಿಡುಗಡೆ ಮಾಡುತ್ತಾರೆ. ಕಳೆದ ಚುನಾವಣೆಗಳಲ್ಲಿ
ಮುಂಚಿತವಾಗಿಯೇ ಪ್ರಣಾಳಿಕೆ ಹೊರಬರುತ್ತಿತ್ತು.
ಈಗಿನ ಅಚ್ಚರಿಯೆಂದರೆ ಮಾತಿಗೆ ಪ್ರತಿ ಮಾತು. ಕಾಂಗ್ರೆಸ್
ಪ್ರಚಾರ ಸಭೆಗಳಲ್ಲಿ
ಆಗಿಂದಾಗ ಚರ್ಚಿಸುವ ವಿಚಾರಗಳು ಪ್ರಣಾಳಿಕೆಗಳಲ್ಲಿ ಸ್ಥಾನ ಪಡೆಯುತ್ತಿವೆ.
ಅಂದರೆ ಅದರ ಸ್ವರೂಪವೇ ಬದಲಾಗುತ್ತಿದೆ. ಕೌಂಟರ್ ಪ್ರಣಾಳಿಕೆಗಳೆಂದು ಕರೆಯಬಹುದು.
ಪಾಲಿಟಿಕ್ಸ್ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಇದೊಂದು ಹೊಸ ಸಂಗತಿ.
ಇನ್ನೂರು ಯೂನಿಟ್ ಉಚಿತ ವಿದ್ಯುತ್, ದಿನವೂ ಅರ್ಧ ಲೀಟರ್ ಹಾಲು, ಉಚಿತ ಗ್ಯಾಸ್ ಸಿಲಿಂಡರ್ ,
ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಹದಿನೈದು ಸಾವಿರ ರೂಪಾಯಿ ಇವೆಲ್ಲ
ಮತದಾರರ ಗಮನ ಸೆಳೆ ಯುವ ಭರವಸೆಗಳು. ಆದರೆ ಆರ್ಥಿವಾಗಿ ಅದರ ಹಿನ್ನೆಲೆಯಲ್ಲಿ ಒಂದು ಹಣಕಾಸಿನ ಲೆಕ್ಕಾಚಾರವೂ ಇರಬೇಕು.
ಈಗಾಗಲೇ ಎಷ್ಟೋ ಯೋಜನೆಗಳಿಗೆ ಹಣ ಸಾಲದಾಗದೇ
ಅಪೂರ್ಣಗೊಂಡಿವೆ.
KLive Special Article ಇನ್ನೂ ಒಂದು ಆಸಕ್ತಿಯುತ ವಿಷಯವೆಂದರೆ ತೆರಿಗೆದಾರರ ಹಣದಲ್ಲಿಯೇ ಇವೆಲ್ಲಾ ತೂಗಿಸಬೇಕು. ಪ್ರಾಮಾಣಿಕವಾಗಿ ತೆರಿಗೆ ಸಲ್ಲಿಸುವ ವ್ಯಕ್ತಿಯ ಹಣವು ಹೀಗೆ ಜನರಿಗೆ ಯಾವುದೇ ಶ್ರಮವಿಲ್ಲದೇ ಸವಲತ್ತುಗಳಾಗಿ ಪರಿವರ್ತಿತವಾಗುವುದು ಅಸಮಾಧಾನದ ವಿಷಯ.
ಈ ಬಗ್ಗೆ ಚುನಾವಣಾ ಆಯೋಗ ಅಥವಾ ನಮ್ಮ ನ್ಯಾಯಾಂಗ, ಶಾಸಕಾಂಗ ಒಂದು ದೃಡ ನಿಲುವು ತಾಳಬೇಕಿದೆ.
ಪ್ರಜಾಪ್ರಭುತ್ವದ
ಮೌಲ್ಯ ನಶಿಸಬಾರದು.
ಈಗ ಕಾಂಗ್ರೆಸ್ ನ ಪ್ರಣಾಳಿಕೆಯ ಭಜರಂಗದಳದ ನಿಷೇಧ ಸುದ್ದಿಯಲ್ಲಿದೆ.
ಆಮೂಲಾಗ್ರ ಅಧ್ಯಯನ ಮಾಡದೇ ಒಂದು ಟೀಮ್ ವರ್ಕ್ ಇಲ್ಲದೇ ಹೀಗೆ ಮಾಡಿದರೆ ಈ ತರಹ ಸಾಮಾಜಿಕ ವಿರೋಧ ಎದುರಿಸ ಬೇಕಾಗುತ್ತದೆ.
ಅದನ್ನೇ ಬುದ್ಧಿವಂತರಿದ್ದರೂ
ಆತುರದಲ್ಲಿ ವಿವೇಚನೆ ಕಳೆದುಕೊಳ್ಳುತ್ತಾರೆ
ಎಂದು ಪರಿಣಿತರು
ಪ್ರತಿಕ್ರಿಯಿಸುತ್ತಾರೆ.