Assembly of Karnataka ಇಂದಿನ ಪತ್ರಿಕೆಗಳಲ್ಲಿ ಚುನಾವಣೆಯ ಸುದ್ದಿ ನಮ್ಮನ್ನ ಸೆಳೆಯುತ್ತಿದೆ.
ಶಿವಮೊಗ್ಗ ನಗರ ವಿಧಾನ ಸಭಾಕ್ಷೇತ್ರದ ಅಭ್ಯರ್ಥಿಗಳನ್ನ ಪ್ರಮುಖ ರಾಜಕೀಯ ಪಕ್ಷಗಳು ತೀರ ತಡವಾಗಿ ಪ್ರಕಟಿಸಿದವು.
ಶಿವಮೊಗ್ಗ ನಗರ ಎಲ್ಲರ ಗಮನ ಸೆಳೆದಿದೆ ಎಂಬುದಕ್ಕೆ ಇದು ಸಾಕ್ಷಿ. ಶಿಕಾರಿಪುರ ಕ್ಷೇತ್ರವೂ ಅಷ್ಟು ಸುದ್ದಿಯಾಗಲಿಲ್ಲ.
ಇಲ್ಲಿ ಹಳೇಹುಲಿ ಆಯನೂರು ಮಂಜುನಾಥ್ ಈಗ
ಮುನ್ನೆಲೆಗೆ ಬಂದಿದ್ದಾರೆ. ಪಕ್ಷಬಿಟ್ಟ ಅವರನ್ನ ಸಂತೋಷ್ ಕೊಚ್ಚೆ ನೀರೆಂದು ತಾತ್ಸಾರದ ನುಡಿಯಾಡಿದ್ದಾರೆ. ಇದಕ್ಕೆ ಮಾತಿನ ಮಲ್ಲ ಮಂಜುನಾಥ್
ಬಿಜೆಪಿ ಅಭ್ಯರ್ಥಿ ಎಷ್ಟು ಶುದ್ಧ ಗಂಗೆ ಎಂಬುದು ಜನರಿಗೆ ಗೊತ್ತಿದೆ ಎಂದು ಚುರುಕಿನ ಉತ್ತರ ನೀಡಿದ್ದಾರೆ.
ಎರಡು ಬಾರಿ ಶಾಸಕ, ಸಂಸದರಾಗಿದ್ದ ವ್ಯಕ್ತಿಯ ಬಗ್ಗೆ ಸಂತೋಷ್ ಜಿ ಪ್ರತಿಕ್ರಿಯೆ ತರವಲ್ಲ ಅನಿಸುತ್ತದೆ.
ಪಕ್ಷಕ್ಕೆ ಒಮ್ಮೆ ಊರುಗೋಲಾಗಿಯೂ ಇದ್ದ ಮಂಜುನಾಥ್ ಎಲ್ಲರಂತೆ ಪಕ್ಷಬಿಟ್ಟು ಮತ್ತೆ ಸೇರಿದವರು. ಅವರನ್ನ ಸರಿಯಾಗಿ ನಡೆಸಿಕೊಂಡಿದಿದ್ದರೆ ಹೀಗಾಗುತ್ತಿರಲಿಲ್ಲ.
ಈ ಸತ್ಯ ಶೆಟ್ಟರ್ ಅವರ ಬಗ್ಗೆಯೂ ದೆ. ಅವರು ಟಿಕೆಟ್ ಕೇಳಿದರು. ನಿರಾಕರಣೆ ಬಗ್ಗೆ ಸೂಕ್ತವಾಗಿ ಸಂವಹನ ಮಾಡಲಿಲ್ಲ. ಇದೇ ರೀತಿಯ ಕೇಸ್ ಉಡುಪಿ ರಘುಪತಿ ಭಟ್, ಮಾಜಿ ಸಚಿವ ಅಂಗಾರ,ರಾಮದಾಸ್ …ಹೀಗೆ ಅವರಿಗೂ ಆಗಿದೆ.
ಶಿಸ್ತು ಬದ್ಧ ಪಕ್ಷ ಬಿಜೆಪಿ ಈ ಬಾರಿ ಚುನಾವಣೆಯಲ್ಲಿ
ವ್ಯಕ್ತಿಗತ ಸಂವಹನ ಕ್ರಿಯೆಯಲ್ಲಿ ಸೋತಿದೆ ಅನಿಸುತ್ತದೆ.
Assembly of Karnataka ಈಶ್ವರಪ್ಪ ಅವರಿಗೆ ಮುಂಚೆಯೇ ತಿಳಿಸಿದ ಬಗ್ಗೆ ಗೊತ್ತಾಗಿದೆ. ಇದೇ ಕ್ರಮವನ್ನ ಸವದಿ, ಶೆಟ್ಟರ್ ಅವರಿಗೂ
ಸಂಬಂಧಪಟ್ಟಂತೆ ಕೈಗೊಳ್ಳಬಹುದಿತ್ತು.
ಶಿವಮೊಗ್ಗದಲ್ಲಿ ದತ್ತಾತ್ರಿ ಅವರಿಗೆ ಖಾಸ್ ಬಾತ್ ಮೂಲಕ ನಿಮ್ಮ ಇನ್ ಕಮ್ ಸ್ಟೇಟಸ್, ಆಸ್ತಿ ಮಾಹಿತಿ ರಡಿ ಇಟ್ಟುಕೊಂಡಿರಿ ಎಂದು ತಿಳಿಸಿದ ಮೇಲಿನ ಕೈಗಳು ಕೊನೇ ಘಳಿಗೆಯಲ್ಲಿ ದತ್ತಾತ್ರಿಯನ್ನ ಮೂಸಲೇ ಇಲ್ಲ. ಆ ವ್ಯಕ್ತಿಗೆಷ್ಟು ನಿರಾಶೆ ಆಗಿರಬಹುದು?.
ಇವೆಲ್ಲ ಪಕ್ಷರಾಜಕೀಯದಲ್ಲಿ ಸಾಮಾನ್ಯ ಸಂಗತಿಗಳು. ಆದರೆ ಇಡೀ ಜೀವನವನ್ನ ಪಕ್ಷಕ್ಕಾಗಿ ಸವೆಸಿದ
ಆಕಾಂಕ್ಷಿಗಳಿಗೆ ಎಷ್ಟು ನಿರಾಶೆ ಉಂಟುಮಾಡುತ್ತದೆ ಅಲ್ಲವೆ,?.