Voters Awareness ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಲಿದೆ. ಜನರು ತಮ್ಮ ಅಮೂಲ್ಯ ಮತವನ್ನು ತಮಗಿಷ್ಟವಾದ ಅಭ್ಯರ್ಥಿಗೆ ನೀಡುತ್ತಾರೆ.ಆದರೆ, ಕೆಲವೊಬ್ಬರು ತಮ್ಮ ಮತವನ್ನು ಚಲಾಯಿಸುವುದಿಲ್ಲ. ಹೀಗಿರುವಾಗ ಅವರಲ್ಲಿ ಮತ ಜಾಗೃತಿ ಮೂಡಿಸುವಂತಹ ಕೆಲಸಗಳು ಅಗತ್ಯ. ಇದೇ ನಿಟ್ಟಿನಲ್ಲಿ ಸಮನ್ವಯ ಟ್ರಸ್ಟ್
ತನ್ನ ಕೆಲಸವನ್ನು ನಿರ್ವಹಿಸುತ್ತಿದೆ.
ಸಮನ್ವಯ ಟ್ರಸ್ಟ್ ವತಿಯಿಂದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು. ಈ ಅಭಿಯಾನದಲ್ಲಿ ನಾವು ಮತ ಚಲಾಯಿಸೋಣ ಶಿವಮೊಗ್ಗ ಜಿಲ್ಲೆ ನಂ1 ಮಾಡೋಣ ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
ಕಾರ್ಯಕ್ರಮವು ಶಿವಮೊಗ್ಗದ ಡಿ ಆರ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಡಿ ವೈ ಎಸ್ ಪಿ ಬಾಲರಾಜ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯು ಶೇಕಡವಾರು ಮತದಾನ ಪ್ರಮಾಣದಲ್ಲಿ ನಂಬರ್ 1 ಸ್ಥಾನ ಆಗುವಂತೆ ಜಿಲ್ಲೆಯ ಎಲ್ಲ ಮತದಾರರು ಮತದಾನ ಮಾಡಬೇಕು ಎಂದು ಡಿವೈಎಸ್‌ಪಿ ಬಾಲರಾಜ್ ಹೇಳಿದರು.
ಶಿವಮೊಗ್ಗ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸುರೇಶ್ ಮಾತನಾಡಿ, ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಉತ್ತಮ ಜನಪ್ರತಿನಿಧಿಗಳ ಆಯ್ಕೆ ಮಾಡಬೇಕು. ಪ್ರತಿಯೊಬ್ಬರು ಮತದಾನ ಮಾಡುವ ಜತೆಯಲ್ಲಿ ಕುಟುಂಬ ಎಲ್ಲ ಅರ್ಹ ಮತದಾರರು ಮತದಾನ ಮಾಡುವಂತೆ ಹೇಳಬೇಕು. ಸಂಘಟಿತ ಪ್ರಯತ್ನ ನಡೆಸಿದಲ್ಲಿ ಶಿವಮೊಗ್ಗ ಜಿಲ್ಲೆಯು ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡಿದ ಜಿಲ್ಲೆ ಆಗಲಿದೆ ಎಂದರು.
Voters Awareness ಕಾರ್ಯಕ್ರಮದಲ್ಲಿ ಸಮನ್ವಯ ಟ್ರಸ್ಟ್ ನಿರ್ವಾಹಕ ನಿರ್ದೇಶಕರಾದ ಸಮನ್ವಯ ಕಾಶಿ, ಮತ್ತು ಸಮನ್ವಯದ ಎಲ್ಲಾ ಸ್ವಯಂಸೇವಕರು, ವಿವಿಧ ತಾಲೂಕಿನಿಂದ ಬಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.