Commercial LPG Cylinder Price Cut Down ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ತೈಲ ಮಾರುಕಟ್ಟೆ ಕಂಪನಿಗಳು ಸಿಹಿ ವಿಚಾರವನ್ನು ನೀಡಿದೆ.
ಅದೇನೆಂದರೆ , ಮೇ 1 ಕಾರ್ಮಿಕರ ದಿನದಿಂದ ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಿದೆ.
ಹೌದು, ಮೇ 1ರಿಂದ ವಾಣಿಜ್ಯ ಬಳಕೆಯ 19ಕೆಜಿಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 171.50 ರೂಪಾಯಿ ಇಳಿಕೆ ಮಾಡಿದೆ. ಇದರಿಂದ ನವ ದೆಹಲಿಯಲ್ಲಿ 19ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1,856.50 ರೂಪಾಯಿಗೆ ಇಳಿಕೆಯಾಗಿದೆ.
ಹೊಸ ಬೆಲೆ ದರ ಮೇ 1ರಿಂದ ಜಾರಿಗೆ ಬಂದಿದೆ. ಆದರೆ, ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.
ಏಪ್ರಿಲ್ ತಿಂಗಳಿನಲ್ಲಿ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 91.50 ರೂಪಾಯಿ ಇಳಿಕೆ ಯಾಗಿತ್ತು.
Commercial LPG Cylinder Price Cut Down ಮೇ ತಿಂಗಳಿನಲ್ಲಿ 171.50 ರೂಪಾಯಿ ಇಳಿಕೆ ಮಾಡಿದ್ದರಿಂದ ಕೋಲ್ಕತಾದಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1960.50 ರೂಪಾಯಿಗೆ ಇಳಿಕೆಯಾಗಿದೆ.
ಅದೇ ರೀತಿ ಮುಂಬೈನಲ್ಲಿ 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1808.50 ರೂಪಾಯಿಯಾಗಿದೆ. ಉದ್ಯಾನನಗರಿ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1, 856 ರೂಪಾಯಿಗೆ ಇಳಿಕೆಯಾಗಿದೆ.