BJP Manifesto Points ಕಾರ್ಮಿಕರ ದಿನಾಚರಣೆಯ ದಿನದಂದು ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು.
ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರಜಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಿ. ಪಿ. ನಡ್ದಾ ಅವರೊಂದಿಗೆ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ B.S. ಯಡಿಯೂರಪ್ಪ, ಡಿ ವಿ ಸದಾನಂದ ಗೌಡ, ರಾಜ್ಯದ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಸಚಿವರಾದ ಆರ್. ಅಶೋಕ್, ಡಾ. ಸುಧಾಕರ್, ಮಾಜಿ ಸಚಿವ ಅರವಿಂದ ಲಿಂಬಾವಳಿ ಇನ್ನು ಮುಂತಾದವರು ಉಪಸ್ಥಿತರಿದ್ದರು.
ಬಿಜೆಪಿ ಪಕ್ಷದ ಪ್ರಜಾ ಪ್ರಣಾಳಿಕೆಯ ಅಂಶಗಳು ಯಾವ್ಯಾವು ಒಳಗೊಂಡಿದೆ ಎಂದರೆ…
*ರಾಜ್ಯದ್ಯಂತ ಕೈಗೆಟುಕುವ, ಗುಣಮಟ್ಟದ ಮತ್ತು ಆರೋಗ್ಯಕರ ಆಹಾರವನ್ನು ರಾಜ್ಯದ ಮುನ್ಸಿಪಲ್ ಕಾರ್ಪೊರೇಷನ್ ಪ್ರತಿ ವಾರ್ಡ್ನಲ್ಲಿ ನಾವು ಅಟಲ್ ಆಹಾರ ಕೇಂದ್ರ ಸ್ಥಾಪಿಸುತ್ತೇವೆ.
*ಪೋಷಣ ಯೋಜನೆಯ ಪ್ರಾರಂಭಿಸುತ್ತೇವೆ. ಅದರ ಮೂಲಕ ಬಿಪಿಎಲ್ ಮನೆಗಳಿಗೆ ಪ್ರತಿದಿನ ನಂದಿನಿ ಹಾಲು ಮಾಸಿಕ ಪಡಿತರ ಕಿಟ್ ಗಳ ಮೂಲಕ 5 ಕೆಜಿ ಶ್ರೀ ಅನ್ನ-ಸಿರಿಧಾನ್ಯಗಳನ್ನು ಆಗಿಸಲಾಗುತ್ತದೆ.
*ಐ ಎ ಎಸ್/ಕೆ ಎ ಎಸ್/ಬ್ಯಾಂಕಿಂಗ್, ಕರಿ ಉದ್ಯೋಗಗಳಿಗೆ ಕೋಚಿಂಗ್ ಪಡೆಯಲು ವಿದ್ಯಾರ್ಥಿಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡಲಾಗುತ್ತದೆ.
*ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸುವ ಮೂಲಕ ಸಾವಿರ ಸ್ಟಾರ್ಟ್ ಅಪ್ ಗಳನ್ನು ಬೆಂಬಲಿಸುವ ಮೂಲಕ ಬಿ ಎಂ ಟಿ ಸಿ ಬಸ್ಗಳನ್ನು ಸಂಪೂರ್ಣ ಎಲೆಕ್ಟ್ರಿಕ್ ಬಸ್ಗಳಾಗಿ ಪರಿವರ್ತಿಸಲಾಗುತ್ತದೆ. ಇದರ ಮೂಲಕ ಬೆಂಗಳೂರಿನ ಹೊರವಲಯದಲ್ಲಿ ಇವಿಸಿಟಿಯನ್ನು ರಚಿಸುವ ಮುಖಾಂತರ ಕರ್ನಾಟಕವನ್ನು ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಕೇಂದ್ರವಾಗಿ ಪರಿಗಣಿಸಲಾಗುತ್ತದೆ.
*ಕರ್ನಾಟಕವನ್ನು ಭಾರತದ ಅತ್ಯಂತ ಮೆಚ್ಚಿನ ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸಲು ಕಲ್ಯಾಣ ಸರ್ಕ್ಯೂಟ್, ಬನವಾಸಿ ಸರ್ಕ್ಯೂಟ್, ಕಾವೇರಿ ಸರ್ಕ್ಯೂಟ್ ಮತ್ತು ಗಾಣಗಾಪುರ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲು ನಾವು 1500 ಕೋಟಿಯನ್ನ ವಿನಿಯೋಗಿಸುತ್ತೇವೆ.
*ನಾವು ಸಮಗ್ರವನ್ನು ಸಂಯೋಜಿಸುವ ಮುಖಾಂತರ ಉತ್ಪಾದನಾ ಲಿಂಕ್ ಪ್ರೋತ್ಸಾಹ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುತ್ತೇವೆ
*ಸರ್ವರಿಗೂ ಸೂರು ಯೋಜನೆಯ ಪ್ರಾರಂಭಿಸುತ್ತೇವೆ. ರಾಜ್ಯಾದ್ಯಂತ 10 ಲಕ್ಷ ವಸತಿ ನಿವೇಶನಗಳನ್ನು ನಿವೇಶನ ರಹಿತ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ.
*BJP Manifesto Points ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಯೋಜನೆಯನ್ನು ಪ್ರಾರಂಭಿಸಲಾಗುತ್ತದೆ. ಕುಟುಂಬಗಳ ಮಹಿಳೆಯರು ಯೋಜನೆಯಡಿಯಲ್ಲಿ ಮಾಡಿದ ಐದು ವರ್ಷಗಳ ಸ್ಥಿರ ಠೇವಣಿಗಳ ಮೇಲೆ 10,000 ದವರೆಗೆ ಹೊಂದಾಣಿಕೆಯ ಠೇವಣಿ ನೀಡಲಾಗು ತ್ತದೆ.
ಇನ್ನು ಮುಂತಾದ ಯೋಜನೆಗಳನ್ನು ಬಿಜೆಪಿ ಪ್ರಜಾ ಪ್ರಣಾಳಿಕೆ ಒಳಗೊಂಡಿದೆ.