Kirloskar Ferrous Industries ಮೇ 1 ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯ ಉದ್ಯೋಗಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾರ್ಖಾನೆಯನ್ನು ಸಂದರ್ಶಿಸಲು ಆಡಳಿತ ಮಂಡಳಿ ಅನುವು ಮಾಡಿಕೊಟ್ಟಿದೆ.
ದಿನಾಂಕ 1 -5 -2023 ರ ಸೋಮವಾರದಂದು ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1:30ರ ತನಕ ಕಾರ್ಖಾನೆಯ ಅನೇಕ ವಿಭಾಗಗಳನ್ನು ಸಂದರ್ಶಿಸಲು ಏರ್ಪಾಟು ಮಾಡಲಾಗಿತ್ತು. ಬೆಳಿಗ್ಗೆ 8 -30 ರಿಂದ ಮಧ್ಯಾಹ್ನ 1-00 ಘಂಟೆ ತನಕ ಕೊಪ್ಪಳ ಹೊಸಪೇಟೆ ಹಾಗೂ ಇನ್ನಿತರ ಭಾಗಗಳಿಂದ ನಮ್ಮ ಉದ್ಯೋಗಿಗಳು ತಮ್ಮ ಕುಟುಂಬದ ಸದಸ್ಯರುಗಳನ್ನು ಕರೆದುಕೊಂಡು ಬಂದು, ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆದು ನಿಂತಿರುವ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯನ್ನು ವೀಕ್ಷಣೆ ಮಾಡಿ ಆನಂದಿಸಿದರು. ಕಾರ್ಖಾನೆಯ ವೀಕ್ಷಿಸಲು ತೊಂದರೆಯಾಗದಂತೆ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಆಡಳಿತ ಮಂಡಳಿಯು, ತಂಪು ಪಾನೀಯ, ಸಾರಿಗೆ ವ್ಯವಸ್ಥೆ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಕಾರ್ಖಾನೆಯ ಸಂದರ್ಶನವನ್ನು ವಿವಿಧ ವಿಭಾಗದ ಉದ್ಯೋಗಿಗಳ ಸ್ವಯಂ ಸೇವಕರ ಸಹಕಾರದೊಂದಿಗೆ ವೀಕ್ಷಣೆಯನ್ನು ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಕಾರ್ಖಾನೆಯ ಒಳಭಾಗದಲ್ಲಿ ಪ್ರತ್ಯೇಕವಾಗಿ ಶಾಮಿಯಾನ ಹಾಕಿ ಉದ್ಯೋಗಿಯ ಕುಟುಂಬದ ಸದಸ್ಯರು ವಿಶ್ರಾಂತಿ ತೆಗೆದುಕೊಳ್ಳಲು ಅವಕಾಶ ಮಾಡಲಾಗಿತ್ತು.
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಪಿ ನಾರಾಯಣ್ ಹಾಗೂ ಕಾರ್ಖಾನೆಯ ಪ್ರೆಸಿಡೆಂಟ್ ಶ್ರೀ ಸಿ. ರಮೇಶ ಅವರು ಈ ಸಂದರ್ಭದಲ್ಲಿ ಹಾಜರಿದ್ದರು. ಎಲ್ಲಾ ಉದ್ಯೋಗಿಗಳಿಗೆ ಕಾರ್ಮಿಕ ದಿನಾಚರಣೆಯ ಶುಭಾಶಯಗಳು ಕೋರಿದರು.
ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ಎಲ್ಲಾ ಉದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.
ಒಟ್ಟಾರೆ 2009ರಲ್ಲಿ ನಡೆದಂತಹ ಈ ಕಾರ್ಖಾನೆಯ ಸಂದರ್ಶನ ಮತ್ತೆ ಮರು ಕಳಿಸಿ ಈ ವರ್ಷ ಪ್ರಾರಂಭ ಮಾಡಿದ್ದಕ್ಕೆ ಕಾರ್ಮಿಕ ಸಂಘದ ಪ್ರದಾನ ಕಾರ್ಯದರ್ಶಿ ಶ್ರೀ ವಿಜಯ ಭಾಸ್ಕರ್ ರೆಡ್ಡಿ ಅವರು ಹರ್ಷವನ್ನ ವ್ಯಕ್ತಪಡಿಸುವುದರ ಮೂಲಕ ಆಡಳಿತ ಮಂಡಳಿಯ ಸದಸ್ಯರಿಗೆ ಧನ್ಯವಾದವನ್ನು ತಿಳಿಸಿದರು.
Kirloskar Ferrous Industries ಇಂದಿನ ಈ ಕಾರ್ಖಾನೆ ವೀಕ್ಷಣೆಗಾಗಿ ಸುಮಾರು 1000ಕ್ಕೂ ಹೆಚ್ಚು ಉದ್ಯೋಗಿ ಸದಸ್ಯರು ಭಾಗವಹಿಸಿ ಸಂತಸವನ್ನು ಹಂಚಿಕೊಂಡು ಕಾರ್ಖಾನೆಯನ್ನು ವೀಕ್ಷಣೆ ಮಾಡಿ ಸುರಕ್ಷಿತವಾಗಿ ತಮ್ಮ ಮನೆಗಳನ್ನು ಸೇರಿದರು.
ವರದಿ ಕೃಪೆ: ಮುರುಳಿಧರ್ ನಾಡಿಗೇರ್