BJP Karnataka ಇತ್ತೀಚೆಗೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ. ಅಶೋಕ ನಾಯ್ಕ ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಂಜಾರ ಹಾಗೂ ಭೋವಿ ಸಮಾಜದವರು ಅಪ್ರಬುದ್ಧರು ಎಂದು ಹೇಳಿಕೆ ನೀಡುವ ಮೂಲಕ ಈ ಸಮಾಜಗಳನ್ನು ಅಪಮಾನಿಸಿರುವುದಕ್ಕೆ ಭೋವಿ ಸಮಾಜದ ಮುಖಂಡ ಎಸ್. ಗಿರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆ.ಬಿ. ಅಶೋಕ ನಾಯ್ಕ ಭೋವಿ ಮತ್ತು ಲಂಬಾಣಿ (ಬಂಜಾರ) ಸಮುದಾಯಗಳ ಮತ ಪಡೆದು, ಮೀಸಲಾತಿ ಕ್ಷೇತ್ರದಿಂದಲೇ ಆಯ್ಕೆಯಾಗಿದ್ದು, ಈಗ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಉಂಡ ಮನೆಗೆ ದ್ರೋಹ ಬಗೆಯುವಂತೆ ಮನಸ್ಸಿಗೆಬಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಅಕ್ಷಮ್ಯ ಎಂದಿದ್ದಾರೆ.
BJP Karnataka ಸಂವಿಧಾನ ಮೀಸಲಾತಿಗೆ ಅವಕಾಶ ನೀಡಿರದಿದ್ದರೆ ಕೆ.ಬಿ. ಅಶೋಕನಾಯ್ಕ ಶಾಸಕನಾಗುವುದು ಅಸಾಧ್ಯವಾಗಿತ್ತು. ನಮ್ಮ ಸಮುದಾಯಗಳಿಗೆ ಅನ್ಯಾಯವಾದಾಗ ಅನ್ಯಾಯಕ್ಕೊಳಗಾದವರ ಬೆಂಬಲಕ್ಕೆ ನಿಲ್ಲಬೇಕಿತ್ತು. ಆದರೆ, ಹಾಗೆ ಮಾಡದ ಶಾಸಕ ಭೋವಿ ಮತ್ತು ಲಂಬಾಣಿ ಸಮುದಾಯಗಳನ್ನು ಅಪಮಾನಿಸಿದ್ದಾರೆ ಎಂದಿದ್ದಾರೆ.
ಭೋವಿ ಕಾಲೋನಿಗಳಲ್ಲಿ ಹಾಗೂ ಬಂಜಾರ ತಾಂಡಾಗಳಲ್ಲಿ ಅಶೋಕನಾಯ್ಕ ಮತಯಾಚನೆಗೆ ಬಂದಾಗ ಯಾರೂ ತಾಂಡಾ-ಕಾಲೋನಿಗಳಿಗೆ ಪ್ರವೇಶ ನೀಡಬಾರದು. ಬಿಜೆಪಿ ಅಭ್ಯರ್ಥಿಯಾದ ಇವರನ್ನು ಚುನಾವಣೆಯಲ್ಲಿ ತಿರಸ್ಕರಿಸಬೇಕು ಎಂದು ಎಸ್.ಗಿರೀಶ್ ಕರೆ ನೀಡಿದ್ದಾರೆ.