Cyber Security ಸೈಬರ್ ಸುರಕ್ಷತೆ ಹಾಗೂ ಹಣಕಾಸಿನ ವ್ಯವಹಾರದಲ್ಲಿ
ಆಗುವ ಹ್ಯಾಕಿಂಗ್ ತೊಂದರೆ ಕುರಿತು ಜಾಗೃತಿ ಮೂಡಿಸುವ
ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಏಪ್ರಿಲ್ 29ರ ಬೆಳಗ್ಗೆ 10:00ಕ್ಕೆ
ಹಮ್ಮಿಕೊಳ್ಳಲಾಗಿದೆ.
ಸೈಬರ್ ಜಾಗೃತಿ ಕಾರ್ಯಕ್ರಮವನ್ನು ನಿವೃತ್ತ ಪ್ರೊಫೆಸರ್
ಡಾ. ವೀರಮಂಜು ಉದ್ಘಾಟಿಸುವರು. ನಂತರ ವಿಶೇಷ ಉಪನ್ಯಾಸ
ಕಾರ್ಯಕ್ರಮಗಳಿದ್ದು, ಡಾ. ವೀರಮಂಜು ಅವರು ಇಂಟರ್‌ನೆಟ್
ವಿಷಯಗಳ ಕುರಿತು ತಿಳವಳಿಕೆ ನೀಡಲಿದ್ದಾರೆ. ಮಹೇಶ್ ವಸ್ತದ್
ಅವರು ಹ್ಯಾಕಿಂಗ್ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ
ವಿಶೇಷ ಉಪನ್ಯಾಸ ನೀಡಲಿದ್ದಾರೆ.
Cyber Security ಸೈಬರ್ ಅಪರಾಧ ಹಾಗೂ ಹ್ಯಾಕಿಂಗ್ ಸಮಸ್ಯೆ ಹೆಚ್ಚುತ್ತಿರುವ ಕಾಲ
ಇದಾಗಿದ್ದು, ಜಾಗೃತಿ ಮತ್ತು ತಿಳವಳಿಕೆ ಮುಖ್ಯ. ಶಿವಮೊಗ್ಗ
ಜಿಲ್ಲೆಯ ಆಸಕ್ತರು ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಹೆಚ್ಚಿನ
ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಭಾಗವಹಿಸುವರರು
ಲ್ಯಾಪ್‌ಟಾಪ್ ತರುವುದು ಒಳ್ಳೆಯದು. ಪ್ರಾತ್ಯಕ್ಷಿಕೆ ಜಾಗೃತಿಗೆ
ಅನುಕೂಲವಾಗಲಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್
ತಿಳಿಸಿದ್ದಾರೆ.