Rotary Organization ಕೌಶಲ್ಯ ಅಭಿವೃದ್ಧಿ ಹಾಗೂ ವೃತ್ತಿ ಸೇವಾ ಅವಕಾಶಗಳ ಬಗ್ಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ಸಂಸ್ಥೆ ಹಾಗೂ ಕ್ಯಾಲೈಟೆಕ್ಸ್ ಇಂಡಿಯಾ ಮುಂದಾಗಿದೆ.
ತರಬೇತಿಗೆ ಪ್ರವೇಶ ಪರೀಕ್ಷೆಗಳನ್ನು 30-04-2023ರಂದು ಭಾನುವಾರ 100 ಅಡಿ ರಸ್ತೆಯಲ್ಲಿರುವ ರೋಟರಿ ರಕ್ತನಿಧಿ ಸಭಾಂಗಣದಲ್ಲಿ ಬೆಳಗ್ಗೆ 10.30 ಕ್ಕೆ ನಡೆಸಲಾಗುತ್ತದೆ.
ರೋಟರಿ ಸಂಸ್ಥೆಯ ಮಾರ್ಗದರ್ಶನ ಹಾಗೂ ಅಂತರಾಷ್ಟ್ರೀಯ ರೋಟರಿ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಅವಕಾಶಗಳಲ್ಲಿ ವಂಚಿತರಾದ ಹಾಗೂ ಆರ್ಥಿಕವಾಗಿ ಹಿಂದುಳಿದ ಪಿಯು ನಂತರ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದೇ ತಮ್ಮ ಆಶೋತ್ತರಗಳನ್ನು ಪೂರೈಸಲಾಗದೇ ಉಳಿದಂತಹ ಯುವಕ, ಯುವತಿಯರ ಪಾಲಿಗೆ ಬೆಳಕಾಗುವ ನೂತನ ಪರಿಕಲ್ಪನೆ ಸಿದ್ಧಪಡಿಸಲಾಗಿದೆ.
ಕ್ಯಾಲೈಟೆಕ್ಸ್ ಇಂಡಿಯಾ ಸಂಸ್ಥೆ ಕೌಶಲ್ಯ ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ಹಲವು ಹಂತಗಳಲ್ಲಿ ಪರಿಚಯಿಸುತ್ತಿದೆ. ಮೊದಲನೆಯ ಹಂತದಲ್ಲಿ ಕಾರ್ಪೋರೇಟ್ ಕಂಪನಿಗಳಲ್ಲಿ ವ್ಯವಹರಿಸಲು ಆತ್ಯವಶ್ಯಕವಾದ ಆಂಗ್ಲಭಾಷೆ ಮಾತನಾಡುವ ಹಾಗೂ ಬರವಣಿಗೆಯನ್ನು ಯಶಸ್ವಿಯಾಗಿ ಕೈಗತ ಮಾಡುವುದು.
Rotary Organization ಎರಡನೆಯ ಹಂತದಲ್ಲಿ ಶಿಭಿರಾರ್ಥಿಗಳು ಕಂಪ್ಯೂಟರ್ ವಿಜ್ಞಾನದ ಮೂಲೋದ್ಧೇಶ ಪ್ರಾಥಮಿಕ ಮಾಹಿತಿ, ಸಾಪ್ಟವೇರ್‌ಗಳ ಪರಿಚಯ. ಮೂರನೆಯ ಹಂತದಲ್ಲಿ ಕಾರ್ಯಕ್ರಮ ನಿರೂಪಣೆ, ಪರೀಕ್ಷೆ ಹಾಗೂ ಕಂಪ್ಯೂಟರ್ ಹಾಡ್ವೇðರ್‌ಗಳ ಮಾಹಿತಿ ಕಮ್ಯೂನಿಕೇಷನ್ ತರಬೇತಿ. ಕೊನೆಯ ಹಂತದಲ್ಲಿ ಶಿಬಿರಾರ್ಥಿಗಳ ಅಮೂಲಾಗ್ರ ತರಬೇತಿಯ ನಿರ್ವಹಣೆ ಹಾಗೂ ಮಾನದಂಡದ ಬಗ್ಗೆ ಸರ್ಟಿಫಿಕೇಷನ್ ನೀಡುವುದು.
ಅತ್ಯುತ್ತಮ ಮಾನದಂಡದ ಅರ್ಹತೆ ಪಡೆದ ಶಿಬಿರಾರ್ಥಿಗಳಿಗೆ ಕ್ಯಾಲೆಟಕ್ಸ್ ಕಂಪನಿಯಲ್ಲಿ ವಾರ್ಷಿಕ 3,00,000 ರೂ. ಸಂಬಳದ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತದೆ.
ತರಬೇತಿ ಅವಧಿಯಲ್ಲಿ (3 ಮತ್ತು 4ನೇ ಹಂತ) ಶಿಬಿರಾರ್ಥಿಗಳಿಗೆ 5,000 ರೂ. ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿಯ ಅನುಭವದ ಆಧಾರದಲ್ಲಿ ಬೇರೆ ಬೇರೆ ಸಾಫ್ಟ್ವೇರ್ ಕಂಪನಿಗಳಲ್ಲಿ ವಿಪುಲ ಅವಕಾಶಗಳಿವೆ.
ಶಿಬಿರಕ್ಕೆ ಅರ್ಹರಾದ ವಿದ್ಯಾರ್ಥಿಗಳನ್ನ ಪರಿಚಯಿಸಿ ಪ್ರತಿಯೊಂದು ಬ್ಯಾಚ್‌ಗೆ 30 ಅರ್ಹರಿಗೆ ಅವಕಾಶ ನೀಡಲಾಗುತ್ತದೆ. ತರಬೇತಿಗೆ ಪ್ರವೇಶ ಪರೀಕ್ಷೆಗಳನ್ನು 30-04-2023ರ ಭಾನುವಾರ 100 ಅಡಿ ರಸ್ತೆಯಲ್ಲಿರುವ ರೋಟರಿ ರಕ್ತನಿಧಿ ಸಭಾಂಗಣದಲ್ಲಿ ಬೆಳಗ್ಗೆ 10-30 ಕ್ಕೆ ನಡೆಸಲಾಗುತ್ತದೆ.
ಪರೀಕ್ಷೆಯಲ್ಲಿ ಶಿಬಿರಾರ್ಥಿಗಳ ಬುದ್ಧಿಶಕ್ತಿ, ಗ್ರಹಣಶಕ್ತಿ, ಐಕ್ಯೂ ಮತ್ತು ಇಕ್ಯೂ ಪರೀಕ್ಷೆ ನಡೆಸಲಾಗುತ್ತದೆ. ಆಸಕ್ತ ಶಿಬಿರಾರ್ಥಿಗಳು ಪಿ.ಯು ಅಂಕಪಟ್ಟಿ, , ಬಿ.ಪಿ.ಎಲ್. ಕಾರ್ಡ್, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮಾಹಿತಿ ತರಬೇಕು ಎಂದು ರೋಟರಿ ಶಿವಮೊಗ್ಗ ಮಿಡ್ ಟೌನ್ ಅಧ್ಯಕ್ಷೆ ವೀಣಾ ಸುರೇಶ್ ತಿಳಿಸಿದ್ದಾರೆ. ಮಾಹಿತಿಗೆ ಮೊಬೈಲ್ ಸಂಖ್ಯೆ 7829738412 ಸಂಪರ್ಕಿಸಬಹುದಾಗಿದೆ.