Sunday, November 24, 2024
Sunday, November 24, 2024

JCI Shivamogga ಶಿವಮೊಗ್ಗ ಮಲ್ನಾಡ್ ಜೆಸಿಐ ನಿಂದ ಯಶಸ್ವಿ ಮಕ್ಕಳ ಬೇಸಿಗೆ ಶಿಬಿರ

Date:

JCI Shivamogga ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ಜೂನಿಯರ್ ಜೇಸಿ ವಿಭಾಗದ ವತಿಯಿಂದ ಶಿವಮೊಗ್ಗದ ರೋಟರಿ ಬ್ಲಡ್ ಬ್ಯಾಂಕ್ ನ ಮೊದಲನೇ ಮಹಡಿಯ ಸಭಾಂಗಣದಲ್ಲಿ ದಿನಾಂಕ 03-04-2023 ರಿಂದ 08-04-2023 ರ ವರೆಗೆ 6 ದಿನಗಳ ಕಾಲ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು.

ಶಿಬಿರದ ಉದ್ಘಾಟನೆಯನ್ನು ವಿಶೇಷವಾಗಿ ಕ್ಯಾನ್ವಾಸ್ ಮೇಲೆ ಮಕ್ಕಳ ಹಸ್ತ ಮುದ್ರೆ ಹಾಕುವುದರೊಂದಿಗೆ ಉದ್ಘಾಟಿಸಲಾಯಿತು ಮತ್ತು ಅತ್ಯಂತ ವರ್ಣರಂಜಿತವಾಗಿ ಮೂಡಿಬಂದಿತು.

ಸಮಾರಂಭದಲ್ಲಿ ಜೆಸಿಐ ವಲಯ -24 ರ ಅಧ್ಯಕ್ಷರಾದ ಜೇಸಿ ಅನುಷ್ ಗೌಡ ರವರು ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ವತಿಯಿಂದ ಪ್ರತೀ ವರ್ಷ ವಿನೂತನ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿದ್ದು, ಹಾಗೂ ಈ ಬಾರಿಯ ಬೇಸಿಗೆ ಶಿಬಿರವು ವಿಶೇಷವಾಗಿ ಆಯೋಜಿಸಲಾಗಿದೆ, ಇದಕ್ಕೆ ನಮ್ಮ ವಲಯದ ಬೆಂಬಲ ಸದಾ ಇರುತ್ತದೆ. ಇದೇ ರೀತಿ ಇನ್ನೂ ಹೆಚ್ಚಿನ , ವಿನೂತನ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಮಕ್ಕಳಲ್ಲಿ ಉತ್ತಮ ನಾಯಕತ್ವ ಗುಣ ಬೆಳೆಸಿ, ಭಾರತದ ಜೆಸಿಐ ಘಟಕಗಳಲ್ಲಿ ವಿಶೇಷ ಸ್ಥಾನ ದೊರಕಲಿ ಎಂದು ಆಶಿಸಿದರು.

JCI Shivamogga ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಜೂನಿಯರ್ ಜೇಸಿ ವಿಭಾಗದ ವಲಯ ನಿರ್ದೇಶಕರಾದ ಜೇಸಿ ವಾಣಿ ಜಗದೀಶ್ ರವರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಪ್ರತೀ ದಿನ ಭಗವದ್ಗೀತೆ ಪಠಣ, ಚಿತ್ರಕಲೆ, ಕರಕುಶಲ ತರಬೇತಿ, ಪ್ರತಿದಿನ ಕಥೆ ಹೇಳುವುದು, ರೊಬೋಟಿಕ್ಸ್, ನೃತ್ಯ ಮತ್ತು ವಿಶೇಷವಾಗಿ ರೂಪುಗೊಳಿಸಿದ್ದ ಆಟಗಳು, ಸ್ಪರ್ಧೆಗಳು ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.

ಶಿಬಿರದಲ್ಲಿ ಭಗವದ್ಗೀತೆ ಪಠಣವನ್ನು ಶ್ರೀಮತಿ ವಿಮಲಾ ರೇವಣಕರ್, ಚಿತ್ರಕಲೆ ಮತ್ತು ಕರಕುಶಲ ಕಲೆಯನ್ನು ಶ್ರೀಮತಿ ನಾಗರತ್ನ ಜನ್ನು ರವರು, ಕಥೆ ಹೇಳುತ್ತಿದ್ದ ನಿವೃತ್ತ ಶಿಕ್ಷಕರಾದ ಶ್ರೀ ರಂಗನಾಥ ರವರು, ಶಿವಮೊಗ್ಗದ ಡು ಇಟ್ ಮೈಂಡ್ಸ್ ಖ್ಯಾತಿಯ ವಿಶೇಷ ಎಲೆಕ್ಟ್ರಾನಿಕ್ಸ್ ಮತ್ತು ನೂತನ ಆವಿಷ್ಕಾರ ಕಾರ್ಯನಿರ್ವಹಿಸುವ ವಿಧಾನಗಳನ್ನು ಶ್ರೀ ನವೀನ್ ರವರು ಮತ್ತು ಸ್ಟೆಪ್ ಹೋಲ್ಡರ್ಸ್ ಡಾನ್ಸ್ ಅಕಾಡೆಮಿ ಖ್ಯಾತಿಯ ಅರುಣ್ ರಾಜ್ ಶೆಟ್ಟಿ ರವರ ತಂಡ ಮಕ್ಕಳಿಗೆ ಯಶಸ್ವಿಯಾಗಿ ತರಬೇತಿ ನೀಡಿದರು.

ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಡಾಕ್ಟರ್ ಸುನಿಲ್ ಮತ್ತು ತಂಡದವರಿಂದ ಉಚಿತ ದಂತ ತಪಾಸಣೆ ಮತ್ತು ಬಾಯಿ ಶುಚಿತ್ವ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು.

ಶಿಬಿರದ ಮುಖ್ಯ ಆಕರ್ಷಣೆಯಾಗಿದ್ದ ಲಕ್ಕಿನಕೊಪ್ಪ ಸಮೀಪದ ಅಮುಲ್ಯಶೋಧ ವಸ್ತು ಸಂಗ್ರಹಾಲಯ ಭೇಟಿ. ಮಕ್ಕಳನ್ನು ಬೆಳಿಗ್ಗೆ ಅಮೂಲ್ಯಶೋಧ ವಸ್ತು ಸಂಗ್ರಹಾಲಯಕ್ಕೆ ಕರೆದು ಕೊಂಡು ಹೋಗಿ ಅಲ್ಲಿನ ಸಂಗ್ರಹಿಸಲಾಗಿರುವ ನಾಣ್ಯಗಳು, ಹಿಂದೆ ಬಳಸುತ್ತಿದ್ದ ವಸ್ತುಗಳು, ಶಿವಮೊಗ್ಗದ ವೈಶಿಷ್ಟ್ಯತೆ ಎಲ್ಲವನ್ನೂ ಕಂಡು ಮಕ್ಕಳು ಬೆರಗಾಗಿ ಕುತೂಹಲದಿಂದ ವೀಕ್ಷಿಸಿದರು.

ಒಟ್ಟಾರೆ ಈ ಬೇಸಿಗೆ ಶಿಬಿರವು ಮಕ್ಕಳ ಕಲಿಕೆ ಮತ್ತು ಜ್ಞಾನ ಅಭಿವೃದ್ದಿ, ಮೊಬೈಲ್ ಪ್ರಪಂಚದಿಂದ ಆಚೆ ಉತ್ತಮ ಚಟುವಟಿಕೆಯುಕ್ತ ಜೀವನ ಇದೆ ಎಂದು ಸಾರಿ ಸಾರಿ ಹೇಳಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳಾದ ಶ್ರೀಮತಿ ಕಿರಣ್ ದೇಸಾಯಿ ರವರು ಮಕ್ಕಳಿಗೆ ವಿಭಿನ್ನವಾದ ಕಥೆಗಳ ಮುಖಾಂತರ ಯಾವುದೇ ಪರಿಸ್ಥಿತಿ ಬಂದರೂ ಪ್ರಾಮಾಣಿಕವಾಗಿ, ಎದೆಗುಂದದೆ ಎದುರಿಸುವ ಛಲ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ದ ಜೇಸಿ ಗೌರೀಶ್ ಭಾರ್ಗವ ರವರು ಮಕ್ಕಳಿಗೆ ನೀತಿ ಕಥೆಯ ಮೂಲಕ ಹೊಸ ಸಂಪ್ರದಾಯಕ್ಕೆ ಬದ್ದವಾಗಿ ನಾವು ವಿಶೇಷ ಆಸಕ್ತಿ ರೂಢಿಸಿಕೊಂಡು ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ವಿಶೇಷ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಪೋಷಕರಾದ ಶ್ರೀ ಸುದೀಪ್ ಮಾತನಾಡಿ ಒಟ್ಟಾರೆ ಕಾರ್ಯಕ್ರಮವು ಮೊದಲ ದಿನದಿಂದ ಕೊನೆಯ ದಿನದವರೆಗೂ ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಶಿಬಿರ ನಡೆಸಿದ ತಂಡಕ್ಕೆ ಕೃತಜ್ಞತೆ ಸಲ್ಲಸುತ್ತೇನೆ ಮತ್ತು ಮುಂಬರುವ ದಿನಗಳಲ್ಲಿ ಹೆಚ್ಚಿನ ದಿನದ ಶಿಬಿರ ಆಯೋಜಿಸಲು ಕೋರಿ ತಾವು ಸಹ ಸಹಕಾರ ನೀಡುವುದಾಗಿ ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಮಕ್ಕಳೇ ಕಾರ್ಯಕ್ರಮವನ್ನು ನಿರೂಪಿಸಿ, ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.

ಶಿಬಿರದಲ್ಲಿ ಉತ್ತಮವಾಗಿ ಭಾಗವಹಿಸಿದ ಅರ್ಜುನ್ ಭಾರದ್ವಾಜ್, ಪ್ರಣತಿ, ದೇವಾಂಶ್ ಗೌಡ ಮತ್ತು ಸುರಭಿ ರವರಿಗೆ ಪ್ರಶಸ್ತಿ ನೀಡಲಾಯಿತು ಮತ್ತು ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ಮತ್ತು ಭಗವದ್ಗೀತೆ ಪುಸ್ತಕವನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ಜೂನಿಯರ್ ಜೇಸಿ ವಿಭಾಗದ ಅಧ್ಯಕ್ಷರಾದ ಜೇ ಜೇ ಸಿ ವೈಷ್ಣವಿ ಕೆ ಎನ್ ರವರು ವಹಿಸಿದ್ದರು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸುತ್ತಾ ಶಿಬಿರದ ಆರಂಭದಿಂದ ಕೊನೆಯವರೆಗೂ ತನ್ನ ಬೆಂಬಲಕ್ಕೆ ನಿಂತ ತನ್ನ ತಂದೆ ಜೇಸಿ ನರೇಂದ್ರ ಹಾಗೂ ತಾಯಿ ಜೇಸಿ ದೀಪಾ ನರೇಂದ್ರ ರವರಿಗೆ ಕೃತಜ್ಞತೆ ತಿಳಿಸಿದರು.

ವೇದಿಕೆಯಲ್ಲಿ ಘಟಕದ ಅಧ್ಯಕ್ಷರಾದ ಜೇಸಿ ಕಿರಣ್ ಎನ್ ಪಿ, ಮಹಿಳಾ ವಿಭಾಗದ ಅಧ್ಯಕ್ಷರಾದ ಜೇಸಿ ಶೃತಿ ಅಶೋಕ್ ಹಾಗೂ ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಉತ್ಕಲಾ ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...