Klive Special Article ಒಮ್ಮಿಂದೊಮ್ಮೆಲೆ ಈಗ ಸಾಮಾಜಿಕ ಕಾಳಜಿಯುಳ್ಳ ನಾಯಕರು ಮಾಧ್ಯಮಗಳಲ್ಲಿ ಮಿಂಚಲಾರಂಭಿಸಿದ್ದಾರೆ. ಪ್ರತಿಷ್ಠಿತ ನಾಯಕರ ಜನ್ಮದಿನ, ಮಹಾನ್ ದೇಶಭಕ್ತರ ಜಯಂತಿ,
ಊರ ಜಾತ್ರೆ,ತೇರು, ಸಾಮುದಾಯಿಕ ಹಬ್ಬಗಳು ಹೀಗೆ ನಾವು ಮರೆತರೂ ಅವರು ನೆನಪಿಸುತ್ತಿದ್ದಾರೆ.
ಅದೊಂದು ರೀತಿ ಒಳ್ಳೆಯ ಲಕ್ಷಣವೇ.
ಆದರೆ ಈಗ ವಿಧಾನ ಸಭಾ ಚುನಾವಣಾ ಗಾಳಿ ಗರಂ ಆಗಿ ಬೀಸತೊಡಗಿದೆ.
ಒಬ್ಬೊಬ್ಬರೇ ಒಂದೊಂದು ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿ ತಮ್ಮ ಘೋಷಣೆ, ಭರವಸೆಗಳೊಂದಿಗೆ ಫ್ಲೆಕ್ಸಿಗಳಲ್ಲಿ ನಗುಮುಖ, ಕೈಮುಗಿದು ನಿಲ್ಲುತ್ತಿದ್ದಾರೆ.
ಶಿವಮೊಗ್ಗದಲ್ಲಿ ಸೆಳೆದ ಅಂತಹ ನಾಯಕರಲ್ಲಿ ಆಯನೂರು ಮಂಜುನಾಥ್ ಫ್ಲೆಕ್ಸಿ ಕೂಡ ಒಂದು. ಅವರು ನಿಜವಾದ ನಾಯಕರೇ. ಒಳ್ಳೇ ವಾಗ್ಮಿ, ವಿಷಯಾಂತರವಿಲ್ಲದೇ ಮಾತಾಡುವ ಪಟುತ್ವ ಇದೆ. ಶಿವಮೊಗ್ಗದ ರಾಜಕಾರಣಿಗಳಲ್ಲೇ ಭಿನ್ನವಾಗಿರುವ ವ್ಯಕ್ತಿ.
ಎರಡು ಬಾರಿ ಎಮ್ಮೆಲ್ಯೆ,ಒಂದು ಬಾರಿ ರಾಜ್ಯಸಭಾ ಸದಸ್ಯ, ಅಲ್ಪಾವಧಿ ಲೋಕಸಭಾ ಸದಸ್ಯರಾಗಿದ್ದವರು.ವಿದ್ಯಾರ್ಥಿ ದೆಸೆಯಿಂದಲೂ ನಾಯಕತ್ವ ರೂಢಿಸಿಕೊಂಡು ಬಂದ ಸಂಘಟನಾ ಶಕ್ತಿಯುಳ್ಳ ವ್ಯಕ್ತಿ.ಈಗ ಎಮ್ಮೆಲ್ಸಿ ಆಗಿದ್ದಾರೆ.ಆದರೆ ವಿಧಾನ ಸಭೆಯ ಸದಸ್ಯರಾಗುವ ತವಕ ಅವರಲ್ಲಿ ಒಮ್ಮೆಲೆ ಮೂಡಿದೆ. ಶಿವಮೊಗ್ಗದಲ್ಲಿ ಸದ್ಯ
ಹಾಲಿ ಶಾಸಕ ಕೆ.ಎಸ್
ಈಶ್ವರಪ್ಪ ಅಪವಾದ ವಿಮುಕ್ತರಾದರೂ ಅವರನ್ನ ವಯೋಮಿತಿಯ ಹರಿತ ಕತ್ತಿಯ ಮೂಲಕ ಮೂಲೆಗೆ ತಳ್ಳಬಹುದು. ಏಕೆಂದರೆ ಮಾಜಿ ಮುಖ್ಯಮಂತ್ರಿಗಳ ಮೇಲೆ ಇದನ್ನ ಬಿಜೆಪಿ ಪ್ರಯೋಗಮಾಡಿದೆ.
Klive Special Article ಸೌಮ್ಯವಾದಿ ರುದ್ರೇಗೌಡರು ಮುನ್ನೆಲೆಗೆ ಬಂದಿಲ್ಲ.
ಶಾಸಕರ ಪುತ್ರ ಕಾಂತೇಶ್ ,ವಿಜಯೇಂದ್ರರಷ್ಟು ಪ್ರಭಾವಳಿ ಹೊಂದಿಲ್ಲ.
ಆಕಾಂಕ್ಷಿ ಮತ್ತು ಸೂಕ್ತ ಆಯ್ಕೆಯಾಗಬಹುದಾದ ಡಾ.ಸರ್ಜಿ ಅವರನ್ನ ಚನ್ನಗಿರಿಗೆ ಬಿಜೆಪಿ ತಳ್ಳುವ ಪ್ಲಾನು ಮಾಡುತ್ತಿದೆ.
ಜ್ಯೋತಿ ಪ್ರಕಾಶ್, ದತ್ತಾತ್ರಿ. ಇವರನ್ನೆಲ್ಲ ತೂಗಿದರೆ ಆಯನೂರು ಒಂದು ತೂಕ ಮೇಲೆ ಬರುವಂತಿದೆ.
ಆದರೆ ಅವಕಾಶ ಸಿಕ್ಕಿದೆ ಎಂಬ ಕಾರಣಕ್ಕಾಗಿ ಆಯನೂರನ್ನೂ ಉಪೇಕ್ಷೆ ಮಾಡಬಹುದು.ಆಗ ಢಾಳಾಗಿ ಕಾಣುವ ಹೆಸರು ದತ್ತಾತ್ರಿ.
ಈತ ತಳಮಟ್ಟದಿಂದ ಪಕ್ಷದಲ್ಲಿ ಬೆಳೆದ ವ್ಯಕ್ತಿ.
ಹಿಂದೆ ಭಾನುಪ್ರಕಾಶ್ ಎಂಪಿ ಚುನಾವಣೆಗೆ ನಿಂತು ಸೋತಿದ್ದರು. ನಂತರ ಕ್ರಮೇಣ ಅವರಿಗೆ ಒಮ್ಮೆ ಎಮ್ಮೆಲ್ಸಿ ಅವಕಾಶ ಸಿಕ್ಕಿತು.
ಈ ಹಿನ್ನೆಲೆಯಲ್ಲಿ ದತ್ತಾತ್ರಿ ಅವರ ಆಯ್ಕೆ
ಅಚ್ಚರಿಯಾದರೂ ಸೂಕ್ತ ಮನ್ನಣೆ ನೀಡಿದ ಕೀರ್ತಿ ಬಿಜೆಪಿಗೆ ಸಿಗುತ್ತದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.