Saturday, November 23, 2024
Saturday, November 23, 2024

Sahachetana Shimoga ಯುಗಾದಿಯನ್ನ ವಿಭಿನ್ನವಾಗಿ ಆಚರಿಸಿದ ಸಹಚೇತನಾ ಸಂಸ್ಥೆ

Date:

Sahachetana Shimogga  ಹೊಸ ವರುಷ ಎಂದ ತಕ್ಷಣ ಮಾವಿನೆಲೆಯ ತೋರಣ, ರಂಗೋಲಿ, ಭಕ್ಷ್ಯ-ಭೋಜನ, ಬಂಧು-ಬಳಗವೇ ನಮಗೆಲ್ಲಾ ನೆನಪಾಗುತ್ತದೆ. ಪ್ರಕೃತಿಯೇ ಹಸಿರೆಲೆಯನ್ನುಟ್ಟು ರಂಗುರಂಗಿನ ಪುಷ್ಪಾಲಂಕೃತಳಾಗಿ ನಮ್ಮ ಜೀವನಕ್ಕೂ ಹೊಸ ಉತ್ಸಾಹ ಹುಮ್ಮಸ್ಸನ್ನು ಕೊಡುತ್ತಿರುತ್ತಾಳೆ. ಈ ಹೊಸ ಸಂವತ್ಸರಕ್ಕೆ ನಾವೆಲ್ಲ ಹೊಸ ಯೋಚನೆ ಹೊಸ ಯೋಜನೆಗೆ ಸಜ್ಜಾಗಿ ನಿಂತಿರುವ ಹೊಸ್ತಿಲಲ್ಲಿ, ಶಿವಮೊಗ್ಗೆಯ ಸಾಹಿತ್ಯಾಸಕ್ತ ಸಮುದಾಯಕ್ಕೆ ಸಹಚೇತನ ಸಂಸ್ಥೆ ಕಳೆದ 13 ವರ್ಷಗಳಿಂದ ಒಂದು ವಿಶಿಷ್ಟ ರೀತಿಯ ಸಾಹಿತ್ಯ ಸೇವೆಯನ್ನು ಸದ್ದಿಲ್ಲದೆ ಮಾಡಿಕೊಂಡು ಬರುತ್ತಿದೆ.

Sahachetana Shimogga  ರಾಜ್ಯದ ಮೂಲೆಮೂಲೆಯ ಹಳ್ಳಿಗಳಿಂದ ಮೊದಲುಗೊಂಡು, ದೇಶ – ವಿದೇಶಗಳ ಕನ್ನಡ ಕವಿಗಳನ್ನು ಸಂಪರ್ಕಿಸಿ ಅವರಿಂದ ಹೊಸದಾಗಿ ಯುಗಾದಿಗೆ ಸಂಬಂಧಿಸಿದ ಕವಿತೆಯನ್ನು ಬರೆಯಿಸಿ ಅದಕ್ಕೆ ಕವಿಕಂಡ ಯುಗಾದಿ ಎಂಬ ಶೀರ್ಷಿಕೆಯನ್ನು ಇಟ್ಟು, ಮುದ್ರಿಸಿ ಸುಮಾರು ಒಂದು ಸಾವಿರ ಪ್ರತಿಗಳನ್ನು ಉಚಿತವಾಗಿ ತಾವೇ ಖುದ್ದಾಗಿ ಮನೆಮನೆಗೆ ಹೋಗಿ ಹಂಚುತ್ತಿದ್ದಾರೆ.

ಈ ಹೊತ್ತಿಗೆಯ ಲೋಕಾರ್ಪಣೆಯನ್ನು ಯುಗಾದಿಯ ಮುಂಜಾನೆ ತಮ್ಮ ಸ್ವಗೃಹದಲ್ಲಿ ಲೋಕಾರ್ಪಣೆಗೈದವರು ಸನ್ಮಾನ್ಯ ಶಾಸಕರಾದ ಕೆ. ಎಸ್. ಈಶ್ವರಪ್ಪನವರು. ಸಾಹಿತ್ಯ, ಸಂಗೀತ, ನೃತ್ಯ ಹಾಗೂ ಇನ್ನಿತರ ಕಲೆಗಳು ಮನುಷ್ಯರನ್ನು ಯಾಂತ್ರಿಕ ಲೋಕದಿಂದ ಹೊರತಂದು ನಮ್ಮ ಸಂಸ್ಕೃತಿ ಹಾಗೂ ನಮ್ಮ ನೆಲದ ಸಂಸ್ಕಾರದ ಬಗ್ಗೆ ಅರಿವು ಉಂಟುಮಾಡಿ, ತಾಯ್ನಾಡಿನ ಬಗ್ಗೆ ಅಭಿಮಾನ ಬೆಳೆಸುತ್ತದೆ. ಇಂದಿನ ಯುವಜನತೆಗೆ ಇದರ ಬಗ್ಗೆ ಇನ್ನಷ್ಟು ಹೆಚ್ಚು ಅರಿವು, ಒಲವು ಎರಡೂ ಮೂಡಬೇಕಾಗಿದೆ. ಹತ್ತು ಹಲವಾರು ವರ್ಷಗಳಿಂದ ವಿದೇಶದ ನೆಲದಲ್ಲಿದ್ದೂ ಪ್ರಬುದ್ಧ ಕನ್ನಡವನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಹಲವು ಕವಿಗಳ ಕವನವನ್ನು ಇದರಲ್ಲಿ ಓದಿ ನಾನೇ ದಿಗ್ಭçಮೆಗೆ ಒಳಗಾಗಿದ್ದೇನೆ. ಕನ್ನಡವನ್ನು ಯಾವುದೇ ರೀತಿಯಲ್ಲಾಗಲಿ ಬಳಸಿದರೆ ಮಾತ್ರ ಅದು ಉಳಿಯುತ್ತದೆ. ಅದೇ ರೀತಿ ನಮ್ಮ ಹಬ್ಬಗಳ ಆಚರಣೆಯೂ ಕೂಡ. ಅದು ಇಂದಿನ ಅನಿವಾರ್ಯತೆ. ಈ ದಂಪತಿಗಳ ಕಾರ್ಯ ಶ್ಲಾಘನೀಯ ಎಂದು ಅಭಿಮಾನದ ಮಾತುಗಳಲ್ಲಿ ನುಡಿದರು.

ಈ ಪುಸ್ತಕದಲ್ಲಿ ಈ ಬಾರಿ ಒಟ್ಟು 111 ಕವಿಗಳ ಕವಿತೆಯನ್ನು ಅಡಕಗೊಳಿಸಲಾಗಿದ್ದು, ಸ್ಥಳೀಯ ಶಿವಮೊಗ್ಗೆಯ ಕವಿಗಳು ಸೇರಿದಂತೆ ರಾಜ್ಯದ ಮೂಲೆಮೂಲೆಗಳ ಹಳ್ಳಿಯಿಂದಲೂ ಹಲವಾರು ಕವಿಗಳು ಕವಿತೆಗಳನ್ನು ಬರೆದಿದ್ದಾರೆ. ಪುಟ್ಟಪ್ರಾಯದ 11 ವರ್ಷದ ಬಾಲೆ, ಸಿಟಿ , ರಿಸರ್ವ್ ಪೋಲಿಸ್, ಸೈನಿಕರು, ಅರ್ಚಕರು, ದರ್ಜಿ, ವಿಜ್ಞಾನ ಉಪನ್ಯಾಸಕರು, ವೈದ್ಯರು, ಕೈಗಾರಿಕೋದ್ಯಮಿಗಳು, ಚಿತ್ರರಂಗದ ಕಲಾವಿದರು, 91 ವರ್ಷದ ಕೃಷಿಕರು ಹೀಗೆ ಸಮಾಜದ ವಿವಿಧ ಸ್ಥರದವರಲ್ಲಿರುವ ಕವಿಗಳನ್ನು ಹುಡುಕಿ ಅವರಲ್ಲಿನ ಕವಿತ್ವವನ್ನು ಜಾಗೃತರನ್ನಾಗಿಸಿರುವುದು ಒಂದು ಸಾಹಸವೇ ಸರಿ.

ಸುಗಮ ಸಂಗೀತ ಕ್ಷೇತ್ರದ ದಿಗ್ಗಜರಾದ ಜಯಶ್ರೀ ಅರವಿಂದ್ ಹಾಗೂ ಸಾಹಿತ್ಯ ಕ್ಷೇತ್ರದ ಹೆಸರಾಂತ ಕಾದಂಬರಿಕಾರರಾದ ಜಗದೀಶ ಶರ್ಮ ಸಂಪ ಅವರು ಹಲವು ವರ್ಷಗಳಿಂದ ಈ ಕವನಸಂಕಲನಕ್ಕೆ ತಮ್ಮ ಸ್ವರಚಿತ ಕವಿತೆಯನ್ನು ಬರೆಯುತ್ತಲೇ ಬರುತ್ತಿದ್ದಾರೆ. ಕೇವಲ ನವ್ಯಕಾವ್ಯದ ರೀತ್ಯಾ ಕವಿತೆಗಳಲ್ಲದೆ ಪ್ರಬುದ್ಧ ತ್ರಿಪದಿ, ಭಾಮಿನಿ ಷಟ್ಪದಿ, ಅನುಪ್ರಾಸ, ಜಾನಪದ ಶೈಲಿ ಕವಿತೆಗಳೂ ಇದು ಒಳಗೊಂಡಿದೆ.
ಯುಗಾದಿ ನಮ್ಮ ಸನಾತನ ಸಂಸ್ಕೃತಿ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹೊಸತನಕ್ಕೆ ಹೊಸ ಯೋಚನೆಗಳೇ ಸ್ಪೂರ್ತಿ. ಕನ್ನಡವನ್ನು ಉಳಿಸುವ ಕಾಯಕದಲ್ಲಿ ನಮ್ಮದು ಇದೊಂದು ಅಳಿಲು ಸೇವೆ ಅಷ್ಟೇ ಎನ್ನುತ್ತಾರೆ ಇದರ ರೂವಾರಿ ಸಹನಾ ಚೇತನ್.

ಈ ಸಂದರ್ಭದಲ್ಲಿ ಚೇತನ್ ಎಸ್, ಕೆ. ಈ. ಕಾಂತೇಶ್, ದಿನೇಶ್ ಆಚಾರ್ಯ, ಡಾ. ನಾಗಮಣಿ, ಆನಂದ್ ರಾಮ್, ಹರೀಶ್ ಕಾರ್ಣಿಕ್, ಕೌಶಿಕ್ ಪಂಡಿತ್, ವಿವೇಕ್ ಹೆಬ್ಬಾರ್, ವಿನಯ್ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...