Thursday, November 28, 2024
Thursday, November 28, 2024

Amit Shah ಶಿವಮೊಗ್ಗದ ರಾಷ್ಡ್ರೀ ಯ ರಕ್ಷಣಾ ವಿವಿ ಗೃಹಸಚಿವ ಅಮಿತ್ ಶಾ ಅವರಿಂದ ವರ್ಚುಯಲ್” ಮೂಲಕ ಉದ್ಘಾಟನೆ

Date:

Amit Shah ಮಾರ್ಚ್ 24ರ ಶುಕ್ರವಾರದಂದು ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಮೂರನೇ ಕ್ಯಾಂಪಸ್ ಅನ್ನು ವರ್ಚುವಲ್ ಮೂಲಕ ಸನ್ಮಾನ್ಯ ಕೇಂದ್ರ ಗೃಹಮಂತ್ರಿಗಳಾದ ಶ್ರೀ ಅಮಿತ್ ಷಾ ರವರಿಂದ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಸ್ಥಾಪನೆ ಮಾಡಲು ಮಂಜೂರಾತಿ ನೀಡಿದ ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ರವರಿಗೆ ಶಿವಮೊಗ್ಗ ಕ್ಷೇತ್ರದ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
ಈ ಒಂದು ಕ್ಯಾಂಪಸ್ ಸ್ಥಾಪಿಸಲು ವಿಶೇಷ ಆಸಕ್ತಿವಹಿಸಿ ರಾಜ್ಯ ಸರ್ಕಾರದ ಎಲ್ಲಾ ರೀತಿಯ ನೆರವು ನೀಡುತ್ತಿರುವ ರಾಜ್ಯ ಸರ್ಕಾರ ದ ಗೃಹ ಮಂತ್ರಿಗಳಾದ ಸನ್ಮಾನ್ಯ ಶ್ರೀ ಆರಗ ಜ್ಞಾನೇಂದ್ರರವರಿಗೂ ಹಾಗೂ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೂ ಅಭಿನಂದನೆಗಳು.
ಶಿವಮೊಗ್ಗ ನಗರದ ನವುಲೆ ಸರ್ವೆ ನಂ. 112ರಲ್ಲಿ ಕಾಯ್ದಿರಿಸಲಾಗಿರುವ 8 ಎಕರೆ ಭೂಮಿಯಲ್ಲಿ ದೇಶದಲ್ಲಿಯೇ 3ನೇ ಕ್ಯಾಂಪಸ್ ಅನ್ನು ಶಿವಮೊಗ್ಗದಲ್ಲಿ ಪ್ರಾರಂಭಿಸಲಾಗುತ್ತಿದೆ. ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ ಶಾ ರವರು ಮಾರ್ಚ್ 24 ರ ಶುಕ್ರವಾರ ಶಿವಮೊಗ್ಗದ ನವುಲೆಯಲ್ಲಿರುವ ಹಳೆಯ ಕೇಂದ್ರೀಯ ವಿದ್ಯಾಲಯದ ಕಟ್ಟಡದಲ್ಲಿ ವರ್ಚುವಲ್ ಮೂಲಕ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಉದ್ಯೋಗ ಅರಸುತ್ತಿರುವ ಸಾವಿರಾರು ಯುವಕರಿಗೆ ಉದ್ಯೋಗ ದೊರೆಯಲು ಸಹಾಯಕವಾಗುವಂತಹ ಮಹತ್ತರವಾದ ಈ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಡಿಪ್ಲೊಮೋ ಇನ್ ಪೊಲೀಸ್ ಸೈನ್ಸ್, ಪಿ.ಜಿ. ಡಿಪ್ಲೋಮೋ ಸೈಬರ್ ಸೆಕ್ಯುರಿಟಿ ಅ್ಯಂಡ್ ಸೈಬರ್ ಲಾ, ಬೇಸಿಕ್ ಕೋರ್ಸ್ ಇನ್ ಕರ‍್ಪೋರೇಟ್ ಸೆಕ್ಯುರಿಟಿ ಮ್ಯಾನೇಜ್ಮೆಂಟ್, ರ‍್ಟಿಫಿಕೇಟ್ ಕೋರ್ಸ್ ಇನ್ ಕೋಸ್ಟಲ್ ಸೆಕ್ಯುರಿಟಿ & ಲಾ ಎನ್ಫರ‍್ಸ್ಮೆಂಟ್, ಟೂ ವಿಕ್ಸ್ ರ‍್ಟಿಫಿಕೇಟ್ ಫ್ರೋಗ್ರಾಂ ಇನ್ ರೋಡ್ ಟ್ರಾಫಿಕ್ ಸೇಫ್ಟಿ ಮ್ಯಾನೇಜ್ ಮೆಂಟ್, ಮತ್ತು ಟೂ ವೀಕ್ಸ್ ರ‍್ಟಿಫಿಕೇಟ್ ಫ್ರೋಗ್ರಾಂ ಇನ್ ಫಿಷಿಕಲ್ ಫಿಟ್ನೆಸ್ ಮ್ಯಾನೇಜ್ಮೆಂಟ್ ಕೋರ್ಸ್ ಗಳನ್ನು ಮೊದಲ ಹಂತದಲ್ಲಿ ಪ್ರಾರಂಭಿಸಲಾಗುತ್ತಿದೆ.

ಇದೇ ವರ್ಷದ ಶೈಕ್ಷಣಿಕ ವರ್ಷದ ಬರುವ ಆಗಸ್ಟ್ ನಿಂದಲೇ ಪ್ರಾರಂಭಗೊಳ್ಳಲಿದೆ.
ಈ ರೀತಿಯ ಕೋರ್ಸ್ ಗಳನ್ನು ಮಾಡಿಕೊಳ್ಳುವ ಯುವಕ/ಯುವತಿಯರಿಗೆ ಪೊಲೀಸ್ ಸೇವೆ, ಶಸ್ತ್ರಸಜ್ಜಿತ ಸೇವೆಗಳಿಗೆ ಸೇರಲು ಬೇಕಾಗಿರುವಂತಹ ತರಬೇತಿ ಸಿಗುವುದರ ಜೊತೆಗೆ ಹಾಲಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬೇಕಾಗಿರುವಂತಹ ತರಬೇತಿ ಮತ್ತು ಸಂಶೋಧನೆಗಳನ್ನು ನಡೆಸಲು ಸಹ ಇದು ಸಹಕಾರಿಯಾಗಲಿದೆ.
ಗುಜರಾತಿನ ಗಾಂಧಿನಗರದಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ಈ ವಿಶ್ವವಿದ್ಯಾಲಯವು ಅರುಣಾಚಲ ಪ್ರದೇಶದಲ್ಲಿ 2ನೇ ಕ್ಯಾಂಪಸ್ ಅನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

Amit Shah ಶಿವಮೊಗ್ಗದಲ್ಲಿ ಸ್ಥಾಪನೆಗೊಳ್ಳುತ್ತಿರುವುದು 3ನೇ ಕ್ಯಾಂಪಸ್ ಆಗಿದೆ.
ಈಗಾಗಲೇ ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಥಾಪನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಪ್ರೋ ಉಪ ಕುಲಪತಿಗಳಾದ ಡಾ. ಆನಂದ ಕುಮಾರ್ ತ್ರಿಪಾಠಿರವರ ನೇತೃತ್ವದಲ್ಲಿ ಡಾ. ಧನುಷ್ ಕುಮಾರ್ ಪ್ರಜಾಪತಿ, ಸಹಾಯಕ ಕುಲಸಚಿವರು, ಶ್ರೀ ವಿಶ್ವ ಪ್ರತಾಪ್ ಸಿಂಗ್ ಶೇಕಾವತ್, ಕ್ಯಾಂಪಸ್ ನರ‍್ದೇಶಕರು ಹಾಗೂ ಶ್ರೀ ಆತೀಷ್ ಬಾರೋಟ್, ಆಡಳಿತಾಧಿಕಾರಿಗಳ 4 ಜನರ ತಂಡವು ದಿನಾಂಕ: 20ರಿಂದ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ದಿನಾಂಕ: 24ರ ಕಾರ್ಯಕ್ರಮದ ಎಲ್ಲಾ ಪೂರ್ವ ಸಿದ್ದತೆಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಸಂಸದ ಬಿ .ವೈ ರಾಘವೇಂದ್ರ ಅವರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Rangayana ನ.30 ರಂದು ರಂಗಾಯಣದಲ್ಲಿ ಏಕಲವ್ಯ ನಾಟಕ ಪ್ರದರ್ಶನ

Shivamogga Rangayana ಶಿವಮೊಗ್ಗ ರಂಗಾಯಣವು ನ.30 ರಂದು ಸಂಜೆ 6.30 ಕ್ಕೆ...

MESCOM ನ. 29 ರಂದು ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ನಗರ ಉಪವಿಭಾಗ-1ರ ಘಟಕ-3ರ ವ್ಯಾಪ್ತಿಯಲ್ಲಿ ತ್ಯಾವರೆಚಟ್ನಹಳ್ಳಿ, ಈಶ್ವರ್...

National Adoption Month ಪೋಷಕತ್ವ ಯೋಜನೆಯಡಿ ಮಗು ಪಡೆಯಲು ಪೋಷಕರಿಂದ ಅರ್ಜಿ ಆಹ್ವಾನ

National Adoption Month ರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ಪೋಷಕತ್ವ ಯೋಜನೆಯಡಿ...

Shivamogga City Corporation ಪಾಲಿಕೆ ಆಯ-ವ್ಯಯ ಪೂರ್ವಭಾವಿ ಸಭೆ: ಡಿ.04ಕ್ಕೆ ಮುಂದೂಡಿಕೆ

Shivamogga City Corporation ನ.30 ರಂದು ಬೆಳಗ್ಗೆ 11.30ಕ್ಕೆ ಮಹಾನಗರ ಪಾಲಿಕೆ...