Sunday, November 24, 2024
Sunday, November 24, 2024

Tippu Sultan ರಾಜಕಾರಣಿಗಳಿಗೆ ಇತಿಹಾಸದ ಬಗ್ಗೆ ಅರಿವಿರಬೇಕು

Date:

Tippu Sultan  ದೇಶಕ್ಕಾಗಿ ಪ್ರಾಣತ್ಯಾಗಗೈದ ಟಿಪ್ಪುಸುಲ್ತಾನ್ ಅವರ ಇತಿಹಾಸವನ್ನು ಅರಿಯದೇ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಅಶ್ವಥ್ ನಾರಾಯಣ್ ಅವರನ್ನು ಕೂಡಲೇ ಸಂಪುಟ ದಿಂದ ಕೈಬಿಟ್ಟು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಹಜ್ಹರತ್ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಮಂಗಳವಾರ ಒತ್ತಾಯಿಸಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಮಹಾವೇದಿಕೆಯ ಜಿಲ್ಲಾಧ್ಯಕ್ಷ ಜಂಶೀದ್ ಖಾನ್ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಸರ್ಕಾರ ಇದೀಗ ಒಂದನೇ ಸ್ಥಾನದಲ್ಲಿದ್ದರೂ ಕೂಡಾ ಅಭಿವೃದ್ದಿ ಶೂನ್ಯವಾಗಿದೆ. ಜನಪ್ರತಿನಿಧಿಯಾಗಿ ಸಮಾಜಕ್ಕೆ ಮಾದರಿಯಾಗುವಂತೆ ಕಾರ್ಯನಿರ್ವಹಿಸುವ ಬದಲು ಕೋಮು ಗಲಭೆಗಳನ್ನು ಸೃಷ್ಟಿಸುವ ಮಾತುಗಳನ್ನಾಡಿ ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ.

Tippu Sultan  ಚುನಾವಣೆ ಸಮೀಪಿಸುತ್ತಿದ್ದಂತೆ ವಿಷಪೂರಿತವಾಗಿ ಮಾತನಾಡುವ ಮೂಲಕ ಸಮಾಜವನ್ನು ಒಡೆಯುವುದೇ ಬಿಜೆಪಿ ಸಚಿವರ ಕಸುಬಾಗಿದೆ. ದೇಶದ ಇತಿಹಾಸದಲ್ಲಿ ಹೆಮ್ಮೆಯ ಹೆಸರನ್ನು ಪಡೆದುಕೊಂಡಿರುವ ಟಿಪ್ಪುಸುಲ್ತಾನ್ ಬಗ್ಗೆ ದೇಶ-ವಿದೇಶಗಳಲ್ಲಿ ಚರ್ಚೆಗಳು, ಉತ್ತಮ ಅಭಿಪ್ರಾಯಗಳನ್ನು ಹೊಂದಿದ್ದು. ಇದರ ಅರಿವಿ ಲ್ಲದೇ ಬೇಕಾಬಿಟ್ಟ ಹೇಳಿಕೆ ನೀಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ರಾಜಕಾರಣಿಗಳಿಗೆ ಇತಿಹಾಸದ ಬಗ್ಗೆ ಅರಿವಿದ್ದರೆ ಬಹಿರಂಗ ಚರ್ಚೆಗೆ ಬಂದು ತಮ್ಮ ಶಕ್ತಿ ಪ್ರದರ್ಶನಗೊಳಿ ಸುವುದನ್ನು ಬಿಟ್ಟು ಟಿಪ್ಪು ಹೊಡೆದ ರೀತಿಯಲ್ಲೇ ಸಿದ್ದರಾಮಯ್ಯ ಹೊಡೆಯುತ್ತೇವೆ ಎಂದು ಹೇಳಿಕೆ ನೀಡಿ ಸಾಮರಸ್ಯ ಕದಡುವಲ್ಲಿ ಸಚಿವ ಅಶ್ವಥ್ ನಾರಾಯಣ್ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂದು ಪ್ರಶ್ನಿಸಿದ್ದಾರೆ.

ದಿನನಿತ್ಯ ಜನಸಾಮಾನ್ಯರ ಬದುಕಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ದಿನೋಪಯೋಗಿ ವಸ್ತುಗಳ ಬೆಲೆಏರಿಕೆ, ನಿರುದ್ಯೋಗ, ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ಮನುಷ್ಯ ಇಂದು ಬದುಕಲಾರದ ಸ್ಥಿತಿಗೆ ತಲುಪಿಸಿದ್ದಾರೆ. ಧರ್ಮದ ಹೆಸರಿನಲ್ಲಿ ದೇಶದ ಚುನಾವಣೆ ನಡೆಸಿ ಶಾಂತಿ ಕದಡಲಾಗಿದೆ ಎಂದಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲೂ ಸಹ ರೈತರಿಗೆ ಯಾವುದೇ ಅನುಕೂಲಕರವಾದ ಭರವಸೆಗಳನ್ನು ನೀಡದೇ ಕೇವಲ ಚುನಾವಣೆ ಗಿಮಿಕ್‌ಗೆ ಒತ್ತು ನೀಡಿರುವ ಜನವಿರೋಧಿ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಬದುಕು ಸುಂದರವಾಗಲು ಧ್ಯಾನ ಸಹಕಾರಿ- ಯೋಗಗುರು ರುದ್ರಾರಾಧ್ಯ

Shimoga News ಶಿವಮೊಗ್ಗ ಬದುಕು ಸುಂದರಗೊಳಿಸಲು ಹಾಗೂ ಸದಾ ಲವಲವಿಕೆಯಿಂದ ಆರೋಗ್ಯದಿಂದ...

N Gopinath ಪಾಠದ ಜೊತೆ ವಿದ್ಯಾರ್ಥಿಗಳಿಗೆ ಸಾಹಸ,ಸಾಮಾಜಿಕ ಅರಿವು ಮೂಡಿಸುವುದು ಮುಖ್ಯ- ಎನ್.ಗೋಪಿನಾಥ್

N Gopinath ವಿದ್ಯಾರ್ಥಿಗಳ ಪಾಠ ಪ್ರವಚನ ಜೋತೆಗೆ ಸಾಹಸ, ಪ್ರವಾಸ, ಸಾಮಾಜಿಕ...

Sri Sri Prasannanatha Swamiji ಶ್ರೀ ಪ್ರಸನ್ನನಾಥ ಶ್ರೀಗಳಿಗೆ ಮಾತೃ ವಿಯೋಗ

Sri Sri Prasannanatha Swamiji ಶಿವಮೊಗ್ಗ,ನ.22 ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ...

Karnataka Rajyotsava ನಮ್ಮ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ- ಡಾ.ಎಚ್.ಬಿ.ಮಂಜುನಾಥ್

Karnataka Rajyotsava "ನಮ್ಮ ದೇಶೀಯ ಸಂಸ್ಕೃತಿಯು ವಿಶ್ವದಲ್ಲೇ ಶ್ರೇಷ್ಠವಾಗಿದೆ" ಬಿ ಜೆ...