Wednesday, November 27, 2024
Wednesday, November 27, 2024

ಶಾಲಾಮಕ್ಕಳಿಗೆ ಇನ್ನೂ ಸಿಗದ ಬೂಟು ಭಾಗ್ಯ

Date:

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಅನುದಾನ ಬಿಡುಗಡೆಯಾಗಿ ಮೂರು ತಿಂಗಳಾದರೂ ಮಕ್ಕಳಿಗೆ ಉಚಿತ ಶೂ , ಸಾಕ್ಸ್ ಭಾಗ್ಯ ಇಲ್ಲ.

ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿ ಆರು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಇನ್ನೂ ವಿತರಣೆ ಮಾಡಿಲ್ಲ. ಈ ವರ್ಷ ಶಾಲಾರಂಭದಿಂದ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸುವಂತೆ ರಾಜ್ಯ ಸರ್ಕಾರ ಜುಲೈ 2 ನೇ ವಾರದಲ್ಲಿ 1 ರಿಂದ 10 ನೇ ತರಗತಿವರೆಗೆ 132 ಕೋಟಿ ರೂ. ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು. ಆದರೆ ಅನುದಾನ ಬಿಡುಗಡೆಯಾಗಿ ಮೂರು ತಿಂಗಳು ಕಳೆದರೂ ಮಕ್ಕಳಿಗೆ ಇನ್ನೂ ಶೂ, ಸಾಕ್ಸ್ ಸಿಕ್ಕಿಲ್ಲ.

ಸರ್ಕಾರಿ ಶಾಲೆಗ ಸೇರುವ 1 ರಿಂದ 10ನೇ ತರಗತಿ ವರೆಗಿನ ಬಡ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಹಾಗೂ ಖಾಸಗಿ ಶಾಲೆಗಳೊಂದಿಗೆ ಸ್ಪರ್ಧೆ ಮಾಡಲು ರಾಜ್ಯ ಸರ್ಕಾರ ಪ್ರತಿ ವಿದ್ಯಾರ್ಥಿಗೆ ಒಂದು ಜೊತೆ ಶೂ ಮತ್ತು 2 ಎರಡು ಜೊತೆ ಸಾಕ್ಸ್ ನೀಡುವ ಯೋಜನೆ 2016ರಲ್ಲಿ ಜಾರಿ ಮಾಡಲಾಗಿತ್ತು. 1-5ನೇ ತರಗತಿಗೆ 225 ರೂ. 6-8ನೇ ತರಗತಿಗೆ 250 ರೂ. ಮತ್ತು 9ರಿಂದ10 ನೇ ತರಗತಿ ವಿದ್ಯಾರ್ಥಿಗಳಿಗೆ 275 ರೂ. ನಂತೆ ಶೂಗೆ ದರ ನಿಗದಿ ಮಾಡಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Constitution Day ಸಂವಿಧಾನದ ಸಂದೇಶವೇ ನಮ್ಮ ಸರ್ಕಾರದ ಸಿದ್ಧಾಂತ- ಸಿದ್ಧರಾಮಯ್ಯ

Constitution Day ಸಂವಿಧಾನ ದಿನಾಚರಣೆಯ ವಿಶೇಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು...

Shivamogga-Bhadravathi Urban Development Authority ಊರುಗಡೂರು ನಿವೇಶನ ಹಂಚಿಕೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಡಿ.5 ಅಂತಿಮ ದಿನಾಂಕ

Shivamogga-Bhadravathi Urban Development Authority ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ...

Shivamogga City Corporation ಒಂದು ತಿಂಗಳಲ್ಲಿ ಏಕರೀತಿಯ ಕರವಸೂಲಾತಿ ಹೊಸ ಕಾಯ್ದೆ ಜಾರಿ- ಸಚಿವ ರಹೀಂ ಖಾನ್

Shivamogga City Corporation ಸ್ಥಳೀಯ ಸಂಸ್ಥೆಗಳಿಗೆ ನಿಯಮಾನುಸಾರವಾಗಿ ಸಾರ್ವಜನಿಕರಿಂದ ಪಾವತಿಯಾಗಬೇಕಾದ ಕರವಸೂಲಿ...