ಶಿವಮೊಗ್ಗದ ಗಾಂಧಿ ಪಾರ್ಕ್ನಲ್ಲಿ ದಸರಾ ಹಬ್ಬದ ಹಿನ್ನೆಲೆ ರೈತ ದಸರಾ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಬರೋಬ್ಬರಿ ಹತ್ತು ಕೋಟಿಯ ಟಿಬೆಟಿಯನ್ ಮಸ್ತಿಫ್ ಎಂಬ ಶ್ವಾನ ನೋಡುಗರ ಗಮನ ಸೆಳೆಯಿತು.
ಬೆಂಗಳೂರಿನ ಸತೀಶ್ ಎಂಬುವರು ಖರೀದಿಸಿರುವ ಶ್ವಾನ ಪ್ರದರ್ಶನದ ಮುಖ್ಯ ಕೇಂದ್ರ ಬಿಂದುವಾಗಿದ್ದ ಭೀಮ ಎನ್ನುವ ಹೆಸರಿನ ಟಿಬೆಟಿಯನ್ ಮಸ್ತಿಫ್ ಎಂಬ ತಳಿಯ ಶ್ವಾನ ನೋಡಲು ನೂರಾರು ಜನ ಮುಗಿಬಿದ್ದಿದ್ದರು.
ಶ್ವಾನಕ್ಕೆ ಎಸಿ ಜೊತೆಗೆ ಕ್ಲಾಸಿ ಫುಡ್ ನೀಡಲಾಗುತ್ತದೆ. ತಿಂಗಳಿಗೆ ಕನಿಷ್ಠ 25 ಸಾವಿರ ನಿರ್ವಹಣೆಗೆ ಬೇಕಾಗುತ್ತದೆ. ಒಟ್ಟಾರೆ ಶ್ವಾನ ಪ್ರದರ್ಶನದಲ್ಲಿ 10 ಕೋಟಿಯ ಶ್ವಾನ ನೋಡಲು ಹಾಗೂ ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ನೂರಾರು ಜನ ಭಾಗವಹಿಸಿದ್ದು ವಿಶೇಷವಾಗಿತ್ತು.
ಅಬ್ಬಬ್ಬಾ ಇದು 10 ಕೋಟಿ ಮೌಲ್ಯದ ಶ್ವಾನ
ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ ಚಾಲನೆ ನೀಡಿದರು. ಮುಖ್ಯ ಅಥಿತಿಯಾಗಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.